Click here to Download MyLang App

ಟೊಮ್ಯಾಟೊ ಕೆಚಪ್ (ಇಬುಕ್)

ಟೊಮ್ಯಾಟೊ ಕೆಚಪ್ (ಇಬುಕ್)

e-book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 59.00
ಸೇಲ್ ಬೆಲೆ
Rs. 59.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಈ ಕಥಾಸಂಕಲನದಲ್ಲಿ 12 ವಿಭಿನ್ನ ಕಥೆಗಳಿವೆ.

ಈ ಕಥಾಲೋಕದಲ್ಲಿ ನಾರಣಕಾಕಾ, ಗೋಪಣ್ಣರಂಥ ಕಾಮಿಗಳಿದ್ದಾರೆ, ಸಾಬೀತು ಕಥೆಯ ಉಮಾಳಂಥ ದಿಟ್ಟೆಯರಿದ್ದಾರೆ, ಸೆಲೆಯ ಶೀನಣ್ಣನಂಥ ಭಗೀರಥರಿದ್ದಾರೆ. ಮಾನಸಿಕ ನೆಮ್ಮದಿ ಕಳಕೊಂಡ ಕಾದಂಬಿನಿಯಂಥ ಆಧುನಿಕಳಿದ್ದಾಳೆ. ಹೀಗೆ ಒಂದು ವಿಸ್ತೃತ ಮಾನವ ಲೋಕವೊಂದು ನಮ್ಮೆದುರು ಇಲ್ಲಿನ ಕಥೆಗಳಲ್ಲಿ ತೆರೆದುಕೊಳ್ಳುವ ರೀತಿ ಅನನ್ಯವಾಗಿದೆ. ಸಾವಧಾನವಾಗಿ ಕಥೆ ಹೇಳುತ್ತಲೇ ಅದರಾಚಿನ ಇನ್ನೇನನ್ನೋ ಹೊಳೆಯಿಸುವ ಪ್ರಯತ್ನವಿದೆ.

ಪ್ರೇಮ, ಕಾಮ, ಹಿಂಸೆ, ಕ್ರೌರ್ಯ, ಒಳಸಂಚು, ಪ್ರತಿಭಟನೆ.. ಇತ್ಯಾದಿಗಳ ನಡುವೆಯೇ ಅರಳಿಕೊಳ್ಳುವ,ಜೀವಚೈತನ್ಯ, ಸವಾಲನ್ನೆದುರಿಸುವ ಸಾಮರ್ಥ್ಯ ಮೊದಲಾದ ಮಾನವ ಲೋಕದ ಸಮಸ್ತ ಗುಣಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಯತ್ನದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಈ ಕಥಾಸಂಕಲನವು-ಅಜಿತರು ಕನ್ನಡ ಕಥಾ ಕ್ಷೇತ್ರದಲ್ಲಿಗಟ್ಟಿಯಾಗಿ ನೆಲೆಯೂರಲಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

 -ಸುಬ್ರಾಯ ಚೊಕ್ಕಾಡಿ.

 

ಪುಟಗಳು: 140

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಕಾವ್ಯಾ ಹೆಗಡೆ
ಬಹಳ ಒಳ್ಳೆಯ ಪುಸ್ತಕ.

ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲಿ ಒಂದು. ಎಲ್ಲ ಕತೆಗಳೂ ಚೆನ್ನಾಗಿವೆ. ವಿಭಿನ್ನ, ವೈವಿಧ್ಯಮಯ ಕಥಾವಸ್ತು ಮತ್ತು ಉತ್ತಮ ನಿರೂಪಣೆಯಿಂದ ಕಥೆಗಳು ಓದುಗರನ್ನು ಹಿಡಿದಿಡಬಲ್ಲವು. ಕಾಮೋಲ, ಕನ್ನಡಿಗಂಟದ ಬಿಂದಿ ವಿಭಿನ್ನವಾಗಿ ನಿಲ್ಲುವ ಕಥೆಗಳು. ಟೊಮ್ಯಾಟೊ ಕೆಚಪ್ ಕಥೆ ನಿರೂಪಣೆಯಿಂದ ಮನ ಸೆಳೆಯುತ್ತದೆ.