ನೆರವು (Help)
ಸಹಾಯ ಕೇಂದ್ರ
MyLang ಬಳಸುವ ಬಗ್ಗೆ ನೀವು ತಿಳಿಯಬೇಕಾದ್ದೆಲ್ಲ ಇಲ್ಲಿದೆ. ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ಸಿಗದಿದ್ದರೆ, ನಮಗೊಂದು email ಮಾಡಿ — ಅಷ್ಟೇ ಸಾಕು.
ನೇರ ಸಹಾಯ ಬೇಕೇ?
help@mylang.in ಗೆ email ಮಾಡಿ. ಸಾಮಾನ್ಯವಾಗಿ ಒಂದು ಕೆಲಸದ ದಿನದೊಳಗೆ ಉತ್ತರಿಸುತ್ತೇವೆ.
ಮೊದಲ ಹೆಜ್ಜೆಗಳು
- Android ಫೋನಿನಲ್ಲಿ Google Play Store ನಿಂದ, iPhone ನಲ್ಲಿ App Store ನಿಂದ MyLang ಆ್ಯಪ್ install ಮಾಡಿಕೊಳ್ಳಿ.
- ನಮ್ಮ ವೆಬ್ಸೈಟ್ mylang.in ನಲ್ಲಿ ಪುಸ್ತಕ ಖರೀದಿಸಿ; checkout ಮಾಡುವಾಗ ನಿಮ್ಮ ಫೋನ್ ನಂಬರ್ ನಮೂದಿಸಿ.
- ಆ್ಯಪ್ ತೆರೆದು ಅದೇ ಫೋನ್ ನಂಬರಿನಿಂದ login ಆಗಿ — ನಿಮ್ಮ ಪುಸ್ತಕಗಳು ಕಪಾಟಿನಲ್ಲಿ ಕಾಣಿಸುತ್ತವೆ.
- ಯಾವುದೇ ಪುಸ್ತಕವನ್ನು tap ಮಾಡಿ — ಆ ಕ್ಷಣವೇ ಓದಲು ಅಥವಾ ಕೇಳಲು ಶುರು.
ಪದೇ ಪದೇ ಕೇಳುವ ಪ್ರಶ್ನೆಗಳು
ಇವು ಮುದ್ರಿತ ಪುಸ್ತಕಗಳೇ?
ಅಲ್ಲ. MyLang ನಲ್ಲಿ ಸಿಗುವುದು ಡಿಜಿಟಲ್ ebook ಮತ್ತು audiobook ಮಾತ್ರ. ಮುದ್ರಣವಿಲ್ಲ, ಅಂಚೆಯಿಲ್ಲ. ಖರೀದಿಸಿದ ಕ್ಷಣವೇ ಎಲ್ಲವೂ ನಿಮ್ಮ ಫೋನಿನ MyLang ಆ್ಯಪ್ಗೆ ತಲುಪುತ್ತದೆ.
ಪುಸ್ತಕ ಖರೀದಿಸುವುದು ಹೇಗೆ?
ಎಲ್ಲ ಖರೀದಿಯೂ ನಮ್ಮ ವೆಬ್ಸೈಟ್ mylang.in ನಲ್ಲೇ. ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ — ಯಾವುದರಿಂದಾದರೂ ಖರೀದಿಸಬಹುದು.
Checkout ಮಾಡುವಾಗ, MyLang ಆ್ಯಪ್ಗೆ login ಆಗಲು ಬಳಸುವ (ಅಥವಾ ಬಳಸಲಿರುವ) ಅದೇ ಫೋನ್ ನಂಬರನ್ನೇ ನಮೂದಿಸಿ. ಈ ನಂಬರಿನ ಮೂಲಕವೇ ನಿಮ್ಮ ಖರೀದಿ ನಿಮ್ಮ ಪುಸ್ತಕ ಸಂಗ್ರಹಕ್ಕೆ ಸೇರುತ್ತದೆ.
ಖರೀದಿಸಿದ ಪುಸ್ತಕಗಳನ್ನು ಓದುವುದು ಅಥವಾ ಕೇಳುವುದು ಹೇಗೆ?
ನಿಮ್ಮ Android ಅಥವಾ iPhone ನಲ್ಲಿ MyLang ಆ್ಯಪ್ install ಮಾಡಿ, ನೋಂದಾಯಿಸಿದ ಫೋನ್ ನಂಬರಿನಿಂದ login ಆಗಿ. ನೀವು ಖರೀದಿಸಿದ ಎಲ್ಲ ಪುಸ್ತಕಗಳೂ ನಿಮ್ಮ ಕಪಾಟಿನಲ್ಲಿ ಕಾಣಿಸುತ್ತವೆ.
ಪುಸ್ತಕವನ್ನು tap ಮಾಡಿದರೆ ಸಾಕು — ebook ಆದರೆ ಓದಿ, audiobook ಆದರೆ ಕೇಳಿ. ಎಲ್ಲಿಯವರೆಗೆ ಓದಿದ್ದೀರಿ ಎಂಬುದು ಎಲ್ಲ ಸಾಧನಗಳಲ್ಲೂ ತಾನಾಗಿಯೇ sync ಆಗುತ್ತದೆ.
MyLang ಆ್ಯಪ್ ಎಲ್ಲಿ ಸಿಗುತ್ತದೆ?
Android (Google Play Store) ಮತ್ತು iPhone (App Store) — ಎರಡರ ನೇರ ಲಿಂಕ್ಗಳಿಗೆ ನಮ್ಮ ಆ್ಯಪ್ download ಪುಟ ನೋಡಿ.
ಪುಸ್ತಕ ಖರೀದಿಸಿದೆ, ಆದರೆ ಆ್ಯಪ್ನಲ್ಲಿ ಕಾಣಿಸುತ್ತಿಲ್ಲ. ಏನು ಮಾಡಲಿ?
ಹೆಚ್ಚಿನ ಸಂದರ್ಭಗಳಲ್ಲಿ ಕಾರಣ ಒಂದೇ — ಫೋನ್ ನಂಬರ್ ಹೊಂದಾಣಿಕೆಯಾಗದಿರುವುದು. Checkout ನಲ್ಲಿ ಕೊಟ್ಟ ನಂಬರೂ, ಆ್ಯಪ್ಗೆ login ಆದ ನಂಬರೂ ಬೇರೆ ಬೇರೆಯಾಗಿರಬಹುದು.
ಹೀಗೆ ಮಾಡಿ ನೋಡಿ:
- MyLang ಆ್ಯಪ್ನಿಂದ logout ಆಗಿ.
- Checkout ನಲ್ಲಿ ಬಳಸಿದ ಫೋನ್ ನಂಬರಿನಿಂದ ಮತ್ತೆ login ಆಗಿ.
- ಈಗ ನಿಮ್ಮ ಪುಸ್ತಕಗಳು ಕಾಣಿಸಬೇಕು.
ಆದರೂ ಸರಿಯಾಗದಿದ್ದರೆ, ನಿಮ್ಮ order ನಂಬರ್ ಮತ್ತು ಫೋನ್ ನಂಬರ್ ಸಹಿತ help@mylang.in ಗೆ email ಮಾಡಿ. ಬೇಗನೇ ಸರಿಪಡಿಸುತ್ತೇವೆ.
ಹಳೆಯ MyLang ಆ್ಯಪ್ ನನ್ನ ಫೋನಿನಲ್ಲಿ ಕೆಲಸ ಮಾಡುತ್ತಿಲ್ಲ. ಏನು ಮಾಡಲಿ?
ಹಳೆಯ ಆ್ಯಪ್ಗೆ ಈಗ ಬೆಂಬಲವಿಲ್ಲ. Android ನ ಇತ್ತೀಚಿನ ಆವೃತ್ತಿಗಳಲ್ಲೂ ಕೆಲಸ ಮಾಡುವ ಸಂಪೂರ್ಣ ಹೊಸ MyLang ಆ್ಯಪ್ ಬಿಡುಗಡೆ ಮಾಡಿದ್ದೇವೆ.
ಹಳೆಯ ಆ್ಯಪ್ uninstall ಮಾಡಿ, ಇಲ್ಲಿಂದ ಹೊಸ ಆ್ಯಪ್ install ಮಾಡಿ. ಅದೇ ಫೋನ್ ನಂಬರಿನಿಂದ login ಆದರೆ, ಹಿಂದೆ ಖರೀದಿಸಿದ ಎಲ್ಲ ಪುಸ್ತಕಗಳೂ ಅಲ್ಲೇ ಕಾಯುತ್ತಿರುತ್ತವೆ.
ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಓದಬಹುದೇ?
ಖಂಡಿತ. ಯಾವುದೇ Android ಅಥವಾ iPhone ನಲ್ಲಿ ನಿಮ್ಮ ನೋಂದಾಯಿಸಿದ ಫೋನ್ ನಂಬರಿನಿಂದ MyLang ಆ್ಯಪ್ಗೆ login ಆದರೆ ಸಾಕು — ನಿಮ್ಮ ಇಡೀ ಪುಸ್ತಕ ಸಂಗ್ರಹ ಅಲ್ಲಿರುತ್ತದೆ. ಓದಿನ ಪ್ರಗತಿಯೂ ಎಲ್ಲ ಸಾಧನಗಳಲ್ಲಿ sync ಆಗುತ್ತದೆ.
ಓದಲು ಅಥವಾ ಕೇಳಲು ಇಂಟರ್ನೆಟ್ ಬೇಕೇ?
ಪುಸ್ತಕವನ್ನು ಮೊದಲ ಬಾರಿ ನಿಮ್ಮ ಸಾಧನಕ್ಕೆ download ಮಾಡಲು ಮಾತ್ರ ಇಂಟರ್ನೆಟ್ ಬೇಕು. ಆಮೇಲೆ ಇಂಟರ್ನೆಟ್ ಇಲ್ಲದೆಯೂ (offline) ಓದಬಹುದು, ಕೇಳಬಹುದು.
ಯಾವ ಪಾವತಿ ವಿಧಾನಗಳಿವೆ?
UPI, ಎಲ್ಲ ಪ್ರಮುಖ credit / debit ಕಾರ್ಡ್ಗಳು, net banking ಮತ್ತು ಜನಪ್ರಿಯ wallet ಗಳು — ನಮ್ಮ ಸುರಕ್ಷಿತ ಪಾವತಿ ಪಾಲುದಾರರ ಮೂಲಕ. ವಿದೇಶದಲ್ಲಿರುವ ಗ್ರಾಹಕರು ಕಾರ್ಡ್ ಮೂಲಕ ಪಾವತಿಸಬಹುದು.
ಹಣ ವಾಪಸ್ (refund) ಸಿಗುತ್ತದೆಯೇ?
ನಮ್ಮ ಪುಸ್ತಕಗಳು ಡಿಜಿಟಲ್; ಖರೀದಿಸಿದ ಕ್ಷಣವೇ ತಲುಪುತ್ತವೆ. ಹಾಗಾಗಿ ಖರೀದಿ ಪೂರ್ಣಗೊಂಡ ಮೇಲೆ ಸಾಮಾನ್ಯವಾಗಿ refund ಇರುವುದಿಲ್ಲ. ಆದರೆ ಹಣ ಕಡಿತವಾಗಿಯೂ ಪುಸ್ತಕ ಸಿಗದಿದ್ದರೆ, ಅಥವಾ ಬೇರೆ ಯಾವುದೇ ತೊಂದರೆ ಇದ್ದರೆ, help@mylang.in ಗೆ email ಮಾಡಿ — ಪರಿಶೀಲಿಸಿ ಸರಿಪಡಿಸುತ್ತೇವೆ.
ನನ್ನ ಖಾತೆಯ ಫೋನ್ ನಂಬರ್ ಬದಲಾಯಿಸುವುದು ಹೇಗೆ?
ನಿಮ್ಮ ನೋಂದಾಯಿಸಿದ email ನಿಂದ (ಅಥವಾ order ನಂಬರ್ ಸಹಿತ) help@mylang.in ಗೆ ಬರೆದು, ಹಳೆಯ ಮತ್ತು ಹೊಸ ಫೋನ್ ನಂಬರ್ ಎರಡನ್ನೂ ತಿಳಿಸಿ. ನಿಮ್ಮ ಪುಸ್ತಕ ಸಂಗ್ರಹವನ್ನು ಹೊಸ ನಂಬರಿಗೆ ವರ್ಗಾಯಿಸುತ್ತೇವೆ.
ನಾನು ಭಾರತದ ಹೊರಗಿದ್ದೇನೆ. ಖರೀದಿಸಿ ಓದಬಹುದೇ?
ಖಂಡಿತ. MyLang ಪುಸ್ತಕಗಳು ಜಗತ್ತಿನಾದ್ಯಂತ ಕನ್ನಡ ಓದುಗರಿಗೆ ಲಭ್ಯ. ಅಂತಾರಾಷ್ಟ್ರೀಯ ಕಾರ್ಡ್ ಬಳಸಿ mylang.in ನಲ್ಲಿ ಖರೀದಿಸಿ, ಎಲ್ಲಿದ್ದರೂ MyLang ಆ್ಯಪ್ನಲ್ಲಿ ಓದಿ, ಕೇಳಿ.
ಇನ್ನೂ ಸಹಾಯ ಬೇಕೇ?
ನಮ್ಮದು ಪುಟ್ಟ ತಂಡ — ಆದರೆ ಬಂದ ಪ್ರತಿಯೊಂದು ಸಂದೇಶವನ್ನೂ ಓದುತ್ತೇವೆ.
help@mylang.in ಗೆ email ಮಾಡಿOrder ನಂಬರ್ (ಇದ್ದರೆ) ಮತ್ತು ನಿಮ್ಮ ಖಾತೆಗೆ ಜೋಡಿಸಿದ ಫೋನ್ ನಂಬರ್ ಸೇರಿಸಲು ಮರೆಯದಿರಿ.
Help & Support
Everything you need to know about using MyLang. If you don't find your answer below, we're just an email away.
Need direct help?
Email us at help@mylang.in and we usually respond within 1 business day.
Quick start
- Install the MyLang app from Google Play Store on Android, or from the App Store on iPhone.
- Buy books on our website mylang.in using your phone number at checkout.
- Open the app, log in with the same phone number, and your books appear on your shelf.
- Tap any book to start reading or listening. Instantly.
Frequently asked questions
Are these physical books?
No. MyLang sells only digital ebooks and audiobooks. Nothing is printed or shipped. Everything is delivered instantly to the MyLang app on your phone.
How do I buy a book?
All purchases happen on our website: mylang.in. You can shop from any device — phone, tablet, or computer.
At checkout, please enter the same phone number you use (or plan to use) to log into the MyLang app. This is how your purchase gets linked to your library.
How do I read or listen to my books?
Install the MyLang app on your Android or iPhone and log in with your registered phone number. All your purchased books will appear on your bookshelf.
Tap any book to read (ebooks) or listen (audiobooks). Your reading progress syncs automatically across devices.
Where do I install the MyLang app?
Visit our app download page for direct links to both Android (Google Play Store) and iPhone (App Store) versions.
I bought a book but don't see it in the app. What do I do?
The most common cause is a phone number mismatch — the number used at checkout is different from the one used to log into the app.
Try this:
- Log out of the MyLang app.
- Log back in using the phone number you used at checkout.
- Your books should now appear.
If it still doesn't work, email us at help@mylang.in with your order number and phone number, and we'll fix it quickly.
The old MyLang app doesn't work on my phone. What should I do?
The old app is no longer supported. We've launched a brand new MyLang app that works on the latest versions of Android.
Uninstall the old app and install the new app from here. Log in with the same phone number and all your previously purchased books will be waiting.
Can I read my books on more than one device?
Yes. Log into the MyLang app on any Android or iPhone using your registered phone number, and your entire library will be available. Your reading progress syncs across devices.
Do I need internet to read or listen?
You need internet to download a book to your device for the first time. Once downloaded, you can read or listen offline.
What payment methods are accepted?
We accept UPI, all major credit and debit cards, net banking, and popular wallets — via our secure payment partners. International customers can pay by card.
Can I get a refund?
Because our books are digital and delivered instantly, we generally don't offer refunds once a purchase is completed. If you were charged but did not receive your book, or if you have a specific concern, please email help@mylang.in and we'll look into it.
How do I change the phone number linked to my account?
Please email help@mylang.in from your registered email (or with your order number) and let us know your old and new phone numbers. We'll transfer your library.
I'm outside India. Can I still buy and read MyLang books?
Yes. MyLang books are available to Kannada readers worldwide. You can purchase from mylang.in using an international card and read or listen on the MyLang app from anywhere.
Still need help?
We're a small team and we read every message.
Email help@mylang.inPlease include your order number (if applicable) and the phone number linked to your account.