Click here to Download MyLang App

Lord Carnwallis,  ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್,  ಫ್ರೀ ಸ್ಯಾಂಪಲ್ ದೊರೆಯುತ್ತದೆ,  ಅಬ್ದುಲ್ ರಶೀದ್,  Lord Cornwallis mattu Queen Elizabeth,  Abdul Rasheed,

ಲಾರ್ಡ್‌ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್ (ಇಬುಕ್)

e-book

ಪಬ್ಲಿಶರ್
ಅಬ್ದುಲ್ ರಶೀದ್
ಮಾಮೂಲು ಬೆಲೆ
Rs. 105.00
ಸೇಲ್ ಬೆಲೆ
Rs. 105.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana


ಕಾಲದ ಫ್ರೇಮುಗಳನ್ನು ಕಳಚಿಟ್ಟು ಅಲೆಮಾರಿಯಂತೆ ಚಲಿಸುತ್ತಿರುವುದು ಎಷ್ಟು ಸರಳವೆನಿಸುತ್ತದೆಯೋ ಅದು ಅಷ್ಟೇ ಗಹನವಾದ ಸಂಗತಿಯೂ ಆಗಿಬಿಡುತ್ತದೆ. ಏಕೆಂದರೆ ನಿಶ್ಚಿತ ನೋಟಕ್ರಮಗಳು ಆಭ್ಯಾಸವಾದ ನಮಗೆ ಅದನ್ನು ಮೀರಿ ಸದಾ ಧುಮ್ಮಿಕ್ಕಿ ಹರಿಯುವ ಚೈತನ್ಯವನ್ನು ಅರಿಯುವುದು ಸವಾಲು. ಅದರ ಸಂಗಡ ಸುಮ್ಮನೇ ಹರಿಯುತ್ತಾ ಹೋಗುವುದು ಚಂದ. ಹೊಸನೋಟಗಳು ಮಾತ್ರ ನಮ್ಮನ್ನು ರೋಮಾಂಚಿತಗೊಳಿಸುತ್ತವೆ. ಕಥನಕ್ಕೆ ಅಂಥ ಬೆರಗಿನ ಕಂಪನ ವಿಸ್ತಾರ ಬೇಕು. ಈ ಗುಟ್ಟನ್ನು ರಶೀದರ ಕತೆಗಳು ಹೊಟ್ಟೆಯೊಳಗಿಟ್ಟುಕೊಂಡಿವೆ.

ಗೀತಾ ವಸಂತ


ಹಿಡಿಯ ಹೊರಟರೆ ಬೆರಳ ಮಧ್ಯದಿಂದ ಜಾರಿಹೋಗುವಂಥ ಒಂದು ಭಾವವಲಯವು ಈ ಕತೆಗಾರಿಕೆಯ ವಸ್ತುವಾಗಿದೆ. ಇದು ಘಟನೆಯಾಗಿ ಬರಬೇಕೆಂದಿಲ್ಲ. ಹಿಂದೂಸ್ತಾನಿ ಸಂಗೀತದ ಬಹುಪಾಲು ‘ಸಾಹಿತ್ಯ’ವಿಲ್ಲದೆ ಸಮಗ್ರ ಭಾವನಾ ಲೋಕವನ್ನು ವಿಹರಿಸುವಂತೆ ಈ ಕತೆಗಳಲ್ಲಿ ಕೂಡ ಸೂಕ್ಷ್ಮವಾದ, ಮಾತಿನ ಆಚೆಗೆ, ಹಿಂದೆ ಇರುವ ಭಾವನೆಗಳಿವೆ.

ರಾಜೇಂದ್ರ ಚೆನ್ನಿ


ನಮ್ಮ ಗ್ರಹೀತಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ರಶೀದರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು.

ವಿವೇಕ ಶಾನಭಾಗ


ಸಾಮಾನ್ಯ ಎನಿಸಿಬಿಡಬಲ್ಲ ಸಣ್ಣ ವಿವರವೂ ಕೂಡ ಅಗಾಧ ಭಾವಕೋಶಗಳ ಬ್ರಹ್ಮಾಂಡ ಎಂಬುದನ್ನು ಮನನ ಮಾಡಿಸುವ ಕಥೆಗಳಿವು.

ಚರಿತಾ ಮೈಸೂರು

 

ABOUT THE AUTHOR

 

ರಶೀದ್ ಮೂಲತಃ ಕಥೆಗಾರ ಮತ್ತು ಅಲೆಮಾರಿ.

ಒಂದು ಕಾದಂಬರಿ, ಮೂರು ಕಥಾಸಂಕಲನಗಳು, ಎರಡು ಕವಿತಾ ಸಂಕಲನಗಳು, ನಾಲ್ಕು ಅಂಕಣ ಬರಹಗಳ ಸಂಕಲನ ಪ್ರಕಟಿತ ಕೃತಿಗಳು.

ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ನಿಮಿತ್ತ ಮಂಗಳೂರು, ಮೇಘಾಲಯದ ರಾಜಧಾನಿ ಶಿಲ್ಲಾಂಗ್, ಗುಲ್ಬರ್ಗ, ಮಡಿಕೇರಿ, ಮೈಸೂರು ಮತ್ತು ಇದೀಗ ಲಕ್ಷದ್ವೀಪದ ಕವರತ್ತಿಯಲ್ಲಿ ಕೆಲಸ.

ಕಳೆದ ಹದಿನಾಲ್ಕು ವರ್ಷಗಳಿಂದ ಪ್ರಕಟವಾಗುತ್ತಿರುವ ಕೆಂಡಸAಪಿಗೆ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಗೌರವ ಸಂಪಾದಕ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮೊದಲಾದವು ಕೆಲವು ಮನ್ನಣೆಗಳು.

ತಮ್ಮ ರೇಡಿಯೋ ಕಾರ್ಯಕ್ರಮಗಳಿಗಾಗಿ ಅಂತರಾಷ್ಟ್ರೀಯ ಮನ್ನಣೆಗೂ ಪಾತ್ರ.

ರಶೀದ್ ಊರು ಕೊಡಗು. ಓದಿದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋಧ್ಯಮ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ.

‘ಕಥೆಗಳನ್ನು ಕೇಳುವುದು ಮತ್ತು ಬರೆಯುವುದು, ಪ್ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಅದರಿಂದ ಹೊರಗೆ ಬರಲಾಗದೆ ಒದ್ದಾಡುವುದು, ತಿರುಗಾಡಲಾಗದಿರುವಾಗ ಒಂಟಿಯಾಗಿರುವುದು ನನ್ನ ಜೀವನದ ಮಹಾವ್ಯಸನಗಳಲ್ಲಿ ಕೆಲವು’ ಎಂದು ಹೇಳುವ ರಶೀದ್, ‘ಬರಹದಿಂದ ಸಿಗುವ ಖ್ಯಾತಿ, ಪ್ರಶಸ್ತಿ ಇತ್ಯಾದಿಗಳು ಕೇವಲ ಉಪ ಉತ್ಪನ್ನಗಳು ಮಾತ್ರ. ಬದುಕು ಮತ್ತು ಪ್ರಕೃತ್ತಿಯ ಬಣ್ಣಗಳಲ್ಲಿ ಕರಗಿ ಹೋಗುವ ಸುಖವೇ ಎಲ್ಲಕ್ಕಿಂತ ಮಿಗಿಲು’ ಎನ್ನುತ್ತಾರೆ.

ಫೋಟೋಗ್ರಫಿ, ಮಾಂತ್ರಿಕ ವಿದ್ಯೆ,ಆಳ ಸಮುದ್ರದೊಳಗೆ ಸಂಚಾರ ಮುಂತಾದವು ಇತರ ಹವ್ಯಾಸಗಳು.


ಪುಟಗಳು: 106

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)