Click here to Download MyLang App

ನನ್ನ ತೇಜಸ್ವಿ (ಇಬುಕ್)

ನನ್ನ ತೇಜಸ್ವಿ (ಇಬುಕ್)

e-book

ಪಬ್ಲಿಶರ್
ರಾಜೇಶ್ವರಿ ತೇಜಸ್ವಿ
ಮಾಮೂಲು ಬೆಲೆ
Rs. 249.00
ಸೇಲ್ ಬೆಲೆ
Rs. 249.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಬರೆದವರು: 

ರಾಜೇಶ್ವರಿ ತೇಜಸ್ವಿ

 

ರಾಜೇಶ್ವರಿ ತೇಜಸ್ವಿಯವರು ಬರೆದಿರುವ "ನನ್ನ ತೇಜಸ್ವಿ" ಪುಸ್ತಕ ಓದಿ ಮುಗಿಸುವಾಗ ಕನ್ನಡದ ಹೆಸರಾಂತ ಬರಹಗಾರ ಪೂರ್ಣಚಂದ್ರ ತೇಜಸ್ವಿ(೧೯೩೮-೨೦೦೭) ಯವರ ಬದುಕು ವ್ಯಕ್ತಿತ್ವಗಳ ಒಂದು ಆತ್ಮೀಯ ಪರಿಚಯದ ಅನುಭವವಾಗುತ್ತದೆ. ತೇಜಸ್ವಿಯವರ ಬಗ್ಗೆ, ಅವರ ವಿಶಿಷ್ಟ ಸ್ವಭಾವದ ಬಗ್ಗೆ ಮೊದಲೇ ಸಾಕಷ್ಟು ಕೇಳಿರುವವರಿಗೂ ಈ ಪುಸ್ತಕ ಹಲವು ಹೊಸ ಮಾಹಿತಿ ಸಂಗತಿಗಳನ್ನು ಒದಗಿಸುತ್ತದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಅವರ ಸಹ ಶಿಕ್ಷಣಾರ್ಥಿಯಾಗಿ, ಸ್ನೇಹಿತೆಯಾಗಿ, ನಂತರದಲ್ಲಿ ಅವರ ಮಡದಿಯಾಗಿ ಅವರೊಂದಿಗಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಾಂಗತ್ಯದ ಅನುಭವವನ್ನು ರಾಜೇಶ್ವರಿಯವರು ಈ ಪುಸ್ತಕದ ಮೂಲಕ ಕನ್ನಡದ ಓದುಗರೊಂದಿಗೆ ಹಂಚಿಕೊಂಡಿರುವ ಬಗೆ ಅನನ್ಯ.

- ಶ್ರೀಕನ್ನಡ ಬ್ಲಾಗ್ ವಿಮರ್ಶೆ

https://srikannadi.blogspot.com/2012/12/blog-post_26.htmlಕಾಡಿನ ಬದುಕಿನ ಅನೇಕ ವಿಸ್ಮಯಗಳನ್ನು ಬರವಣಿಗೆಯ ಮೂಲಕ ತೆರೆದಿಟ್ಟ ತೇಜಸ್ವಿ ಅವರ ಬದುಕು ನಮಗೆಲ್ಲ ಅಚ್ಚರಿ ಮತ್ತು ವಿಸ್ಮಯಗಳ ಸಂಗತಿ. ಕೊನೆಗೂ 'ನನ್ನ ತೇಜಸ್ವಿ' ಪುಸ್ತಕದ ಮೂಲಕ ಶ್ರೀಮತಿ ರಾಜೇಶ್ವರಿ ಅವರು ಆ ಎಲ್ಲ ಕುತೂಹಲಗಳಿಗೆ ಉತ್ತರಿಸಿದ್ದಾರೆ. ಒಂದರ್ಥದಲ್ಲಿ ಇದು ತೇಜಸ್ವಿ ಅವರ ಆತ್ಮಕಥೆ.

- ಮನದ ಮಾತು ಬ್ಲಾಗ್ ವಿಮರ್ಶೆ

https://manadamatu-rvk.blogspot.com/2013/03/blog-post_25.html


 

ಪುಟಗಳು: 572

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
N
N.R.
ತೇಜಸ್ವಿ ಎಂಬ ಪೂಜ್ಯ ತೇಜಸ್ಸಿನ ಬೃಹತ್ ದರ್ಶನ

"ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಲ್ಲ" ಇದು ನಮ್ಮ ತೇಜಸ್ವಿರ ಮಾತು...

ಈ ಮಾತು ಎಷ್ಟು ನಿಜವೆಂಬುದು ತೇಜಸ್ವಿರ ಜೀವನ ಓದಿರುವರೆಲ್ಲರಿಗೂ ಗೊತ್ತೇ ಇದೆ... ಏಕೆಂದರೆ ತಂದೆ ನಾಡಿನ ಪ್ರಖ್ಯಾತ ಕವಿಗಳು, ಪೂಜ್ಯರು.. ಇವರ ಜೇಷ್ಠ ಪುತ್ರರಾದ ತೇಜಸ್ವಿ ತಂದೆಯರ ನೆರಳಿನಲ್ಲಿ ಬದುಕದೆ ತಮ್ಮದೆ ಹಾದಿಯೊಂದನ್ನು ನಿರ್ಮಿಸಿ ಆನೆ ನಡೆದಿದ್ದೆ ದಾರಿ ಎಂಬಂತೆ ಬದುಕಿದರು....

ಇವರ ಜೀವನದ ಬೃಹತ್ ದರ್ಶನ ಅವರ ಮಡದಿಯರಲ್ಲದೆ ಬೇರೆ ಯಾರೂ ಬರೆಯಲು ಸಾಧ್ಯ?... ಗೌರವಾನ್ವಿತರು ಗಂಡನ ಅಂತರಂಗವನ್ನಷ್ಟೇ ಅಲ್ಲ, ಮಾವ ಕುವೆಂಪುರ ವ್ಯಕ್ತಿತ್ವವನ್ನು ಬಹು ಮುದ್ದಾಗಿ ತೆರೆದಿಡುತ್ತಾರೆ...

ಮೊದಲೇ ಗಂಡ ಮಾವರಂತ ಅಕ್ಷರ ಭಗವಂತರ ಜೊತೆಯಲ್ಲಿ ಇದ್ದವರು, ಇವರ ಬರವಣಿಗೆಯೂ ಅಷ್ಟೇ ನುಣುಪಾಗಿ ಚಂದವಾಗಿ ಮೂಡಿ ಬಂದಿದೆ.

ತೇಜಸ್ವಿರ ಬದುಕಿನ dimensions ಒಂದಲ್ಲ ಅವು ಅನೇಕ ಉದಾ: ಕೃಷಿ, ಚಳುವಳಿ, ಫೋಟೋಗ್ರಫಿ, ಸಂಗೀತ ಇನ್ನೂ ಹಲವು.. ಇವೆಲ್ಲರ ಕಲಿಕೆ ಮತ್ತು ಅವರು ಕಂಡಿಕೊಂಡಂತ ಪರ್ಫೆಕ್ಷನ್, ಮೇಡಂ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ.

ಇನ್ನೂ ಒಂದ್ ಸಾವಿರ ಪುಟ ಇರಬಾರ್ದಿತ್ತ ಅನ್ನಿಸ್ತು ಕೊನೆಯ ಪುಟ ಕಂಡಾಗ.

ಕರ್ವಲೋ ಅನ್ನೋ ವ್ಯಕ್ತಿ ಇದ್ದನೇನೇ ಅಂತ ಕುವೆಂಪುರು ತಮ್ಮ ಅಂತಿಮ ದಿನಗಳಲ್ಲಿ ಸೊಸೆ ಬಳಿ ಕೇಳುವ ಸನ್ನಿವೇಶವಂತೂ ಹನಿಗಣ್ಣಗಿಸುತ್ತದೆ...