Click here to Download MyLang App

ಜಯಂತ ಕಾಯ್ಕಿಣಿ ಕಥಾಗುಚ್ಛ (ಇಬುಕ್)

ಜಯಂತ ಕಾಯ್ಕಿಣಿ ಕಥಾಗುಚ್ಛ (ಇಬುಕ್)

e-book

ಪಬ್ಲಿಶರ್
ಜಯಂತ ಕಾಯ್ಕಿಣಿ
ಮಾಮೂಲು ಬೆಲೆ
Rs. 185.00
ಸೇಲ್ ಬೆಲೆ
Rs. 185.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ


Publisher: Akshara Prakashana

 

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು -- ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ -- ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

 

ಜಯಂತ ಕಾಯ್ಕಿಣಿ

೧೯೫೫ರಲ್ಲಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಲೇಖಕ ಗೌರೀಶ ಕಾಯ್ಕಿಣಿ ಮತ್ತು ಶಾಂತಾ ಕಾಯ್ಕಿಣಿಯವರ ಮಗನಾಗಿ ಜನಿಸಿದ ಜಯಂತ ಕಾಯ್ಕಿಣಿ ಅವರು ಪದವಿ ಪಡೆದದ್ದು ಜೀವರಸಾಯನಶಾಸ್ತ್ರದಲ್ಲಿ. ಹಲವು ವರ್ಷ ಮುಂಬಯಿಯ ಔಷಧ ತಯಾರಿಕಾ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ, ಸಾಹಿತ್ಯರಚನೆಯ ಜೊತೆಗೆ, ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮಗಳಲ್ಲಿ ಲೇಖಕರಾಗಿ, ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ’ರಂಗದಿಂದೊಂದಿಷ್ಟು ದೂರ’, ’ಕೋಟಿ ತೀರ್ಥ’, ’ಒಂದು ಜಿಲೇಬಿ’ ಮೊದಲಾದ ಕವನ ಸಂಕಲನಗಳನ್ನೂ ’ತೆರೆದಷ್ಟೇ ಬಾಗಿಲು’, ’ದಗಡೂಪರಬನ ಅಶ್ವಮೇಧ’, ’ಅಮೃತಬಳ್ಳಿ ಕಷಾಯ’, ’ತೂಫಾನ್ ಮೇಲ್’ ಮೊದಲಾದ ಕಥಾಸಂಕಲನಗಳನ್ನೂ ’ಸೇವಂತಿ ಪ್ರಸಂಗ’, ’ಜತೆಗಿರುವನು ಚಂದಿರ’ ಮೊದಲಾದ ನಾಟಕಗಳನ್ನೂ ’ಬೊಗಸೆಯಲ್ಲಿ ಮಳೆ’, ’ಶಬ್ದತೀರ’ ಮೊದಲಾದ ಲೇಖನಸಂಗ್ರಹಗಳನ್ನೂ ಇವರು ಪ್ರಕಟಿಸಿದ್ದಾರೆ. ’ಭಾವನಾ’ ಪತ್ರಿಕೆಯ ಸಂಪಾದಕರಾಗಿದ್ದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಡಿಎಸ್‌ಸಿ ಪ್ರೈಸ್ ಫಾರ್ ಸೌತ್ ಏಶಿಯನ್ ಲಿಟರೇಚರ್ ೨೦೧೮ ಪ್ರಶಸ್ತಿಗಳು ದೊರಕಿವೆ.

 

ಪರಿವಿಡಿ

1 ಚಂದ್ರಶಾಲೆ
2 ಉನ್ನಿಕೃಷ್ಣನ್ ಬಂದುಹೋದ
3 ಸುಗ್ಗಿ
4 ಸ್ವಪ್ನದೋಷ
5 ದಗಡೂ ಪರಬನ ಅಶ್ವಮೇಧ
6 ಸೇವಂತಿ ಹೂವಿನ ಟ್ರಕ್ಕು
7 ಅಮೃತಬಳ್ಳಿ ಕಷಾಯ
8 ಬಣ್ಣದ ಕಾಲು
9 ಕಣ್ಮರೆಯ ಕಾಡು
10 ನೋ ಪ್ರೆಸೆಂಟ್ಸ್‌ ಪ್ಲೀಸ್
11 ಟಿಕ್ ಟಿಕ್ ಗೆಳೆಯ
12 ನೀರು
13 ಚಾರ್‌ಮಿನಾರ್
14 ಒಳಾಂಗಣ
15 ಹಲೋ... ಮೈಕ್ ಟೆಸ್ಟಿಂಗ್... ವನ್... ಟೂ... ಥ್ರೀ...
16 ಕುತನಿ ಕುಲಾವಿ


 

ಪುಟಗಳು: 170

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
C
Chandrashekar ubar

ತುಂಬಾ ಚೆನ್ನಾಗಿದೆ....ಒಂದು ಒಳ್ಳೆಯ ಹೋಟೆಲ್ ಊಟ ದ ಬೆಲೆ ಯನ್ನು ಕೊಟ್ಟು ಪುಸ್ತಕ ಕೊಂಡದ್ದಕ್ಕೂ ಸಾರ್ಥಕ ವಾಯಿತು...

R
Rayarkrishna RAYAR
adbutha gurgula kathe odi jeevakke kushi ayathu

adbutha gurgula kathe odi jeevakke kushi ayathu