ಆಡಿಯೋ ಪ್ರಕಾಶಕರು: ಟೋಟಲ್ ಕನ್ನಡ
Audio Publisher: Total Kannada
ಆಡಿಯೋ ಪುಸ್ತಕದ ಅವಧಿ : 3 ಗಂಟೆ 50 ನಿಮಿಷ
ಗೋಪಾಲಕೃಷ್ಣ ಪೈ ಅವರು ಬರೆದ ಕನ್ನಡದ ಮೇರು ಕಾದಂಬರಿ ‘ಸ್ವಪ್ನ ಸಾರಸ್ವತ’, ಭಾರತದ ಪಶ್ಚಿಮ ಕರಾವಳಿಯಲ್ಲಿ ವಾಸಿಸುತ್ತಿದ್ದ ಗೋವಾದಿಂದ ಮಂಗಳೂರಿನ ದಕ್ಷಿಣಕ್ಕೆ ಪಸರಿಸಿದ್ದ ಸಾರಸ್ವತರು ಎಂಬ ಸಮುದಾಯದ ವಲಸೆಯ ಕಥೆಯಾಗಿದೆ. ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರು ಈ ಪ್ರದೇಶವನ್ನು ಪ್ರವೇಶಿಸಿದಾಗ ರಾಷ್ಟ್ರವು ಕಂಡ ವಸಾಹತುಶಾಹಿ ಪ್ರಾಬಲ್ಯವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಈ ಕಾದಂಬರಿಯು ಬಲವಾಗಿ ಬೇರೂರಿದ್ದ ಈ ಸಮುದಾಯದ ಸ್ಥಳಾಂತರದ ಕಣ್ಣಿಗೆ ಕಟ್ಟಿದಂತಿರುವ ಪ್ರಸ್ತುತಿಯಾಗಿದ್ದು, ಇದು ಭೂಮಿಯ ಹೊಸ ಭಾಗದಲ್ಲಿ ಪುನರುತ್ಥಾನವನ್ನು ಕಂಡವರ ಕಥೆ-ವ್ಯಥೆ. ಸಮುದಾಯದ ಪ್ರಚಲಿತ ಕುಟುಂಬಗಳಲ್ಲಿ ಕ್ರಮೇಣ ಬದಲಾವಣೆಗಳನ್ನು ಹುಡುಕಲು ಇದು ಪ್ರಯತ್ನಿಸುತ್ತ, ಹಿಂದಿನ ಯುಗಗಳ ಜಂಟಿ ಕುಟುಂಬ ವ್ಯವಸ್ಥೆಯಿಂದ ಏಕೀಕೃತ ಕುಟುಂಬಗಳಿಗೆ ಸ್ಥಳಾಂತರಗೊಂಡ ಬಗೆಯನ್ನು ಹೇಳುತ್ತದೆ. ಅಂತಹ ಬದಲಾವಣೆಯ ಹಿನ್ನೆಲೆಯಲ್ಲಿ ವ್ಯಕ್ತಿಗಳ ನೈತಿಕ ಕ್ಷೀಣತೆಗೆ ಕಾರಣವಾಗುವ ಅಂಶಗಳನ್ನು ಇದು ನಿರೂಪಿಸುತ್ತದೆ.
'ಸ್ವಪ್ನ ಸಾರಸ್ವತ' ಕ್ರಿ.ಶ.1510 ರಿಂದ ಸುಮಾರು 1760 ರವರೆಗಿನ ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಹರಡಿರುವ ಏಳು ತಲೆಮಾರು ಸಮುದಾಯ ಸದಸ್ಯರ ಕಥೆಯಾಗಿದ್ದು ವಲಸೆ ಹೋದ ಒಂದು ಜನಾಂಗದ, ಕಾಲ್ಪನಿಕ ವಿಸ್ತಾರದಲ್ಲಿಯ ನೈಜ ಚಿತ್ರಣ. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸೇನೆಗಳು, ಮುಖ್ಯಸ್ಥರು, ವ್ಯಾಪಾರಿಗಳು, ರೈತರು, ಪುರೋಹಿತರು, ಜಾದೂಗಾರರನ್ನು ಒಳಗೊಂಡ ನೂರೈವತ್ತಕ್ಕೂ ಹೆಚ್ಚು ಪಾತ್ರಗಳನ್ನು ಹೊಂದಿರುವ ಭೂದೃಶ್ಯ ವೈಭವ. ಇಲ್ಲಿ ಇತಿಹಾಸ ನಿರ್ಮಿಸಿದ ಜಾನಪದ ಕಥೆಗಳು, ದಂತಕಥೆಗಳು ಮತ್ತು ಪುರಾಣದ ದೃಷ್ಟಾಂತಗಳು ಹಾಸುಹೋಕ್ಕಾಗಿವೆ.
‘ಸ್ವಪ್ನ ಸಾರಸ್ವತ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಇದನ್ನು ತಮಿಳು, ಕೊಂಕಣಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.
Swapna Sarswata is novel written by Gopalakrishna Pai. It's the fist novel from the author Gopalakrishna Pai and it is collection of many short stories.
Audio book Produced by Perar Suresh Kamath
Narration : Vatsala Mohan & K.V. Balasubrahmanyam
Music : Sathyajith Prabhu
Singer : Geetha Vakethur
Recorded at : Studio Ananya, Malleshwaram, Bengaluru
Sound Engineer : Umesh Minnanda
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.