Click here to Download MyLang App

ಸಮೀಕ್ಷೆ,    ಕೆ. ಶಿವರಾಮ ಕಾರಂತ,  shivram karantha,  shivram karanth ,shivram karanth,  shivram karant,  shivarm karanth,  shivarama karanta,  shivaram karanth,  Sameekse , Dr. K. Shivarama Karanth,

ಸಮೀಕ್ಷೆ (ಇಬುಕ್)

e-book

ಪಬ್ಲಿಶರ್
ಡಾ|| ಕೆ. ಶಿವರಾಮ ಕಾರಂತ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

'ಒಡಹುಟ್ಟಿದವರು' ಕಾದಂಬರಿಯನ್ನು ತಮ್ಮ ಮುಂದಿರಿಸಿ, ಎರಡು ವರ್ಷಗಳೇ ಆಗುತ್ತ ಬಂದುವು; ಇನ್ನೊಂದು ಬರಹವನ್ನು ತಮ್ಮ ಮುಂದಿರಿಸುವಾಗ, ಈ ಅವಧಿಯಲ್ಲಿ ಓದುಗರ ಕ್ಷೇತ್ರವೂ ವಿಸ್ತರಿಸಿದೆ; ಬರೆಯುವವರ ಸಂಖ್ಯೆಯೂ ಬೆಳೆದಿದೆ. ಪ್ರಗತಿ ಕಾಣಿಸದಿರುವುದು- ಅಭಿರುಚಿಯಲ್ಲಿ; ಕೊಳ್ಳುವುದರಲ್ಲಿ. ಬರಹಗಾರ ಆ ಕಾಲಕ್ಕಾಗಿ ಇನ್ನೂ ಕಾದಿರಬೇಕಾಗಿದೆ.

ಈ ಬರಹ, ಕೆಲವು ವ್ಯಕ್ತಿಗಳನ್ನು ತನ್ನ ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆ ನಡೆಯಿಸಲೆತ್ನಿಸುತ್ತದೆ. ಯಾವುದು ಸಾರ್ಥಕ, ಯಾವುದು ನಿರರ್ಥಕ? ಈ 'ಅರ್ಥ' ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.

ಒಬ್ಬೊಬ್ಬರ ಬದುಕಿಗೆ ಒಂದೊಂದು ಆದರ್ಶ ನೆರವಾಗಬಹುದು. ಒಂದೊಂದು ಗುರಿ ಕೈದೀವಿಗೆಯಂತೆ ನಡೆಯಿಸಿಕೊಂಡು ಹೋಗಬಹುದು. ಒಬ್ಬನ ಬೆಳಕು ಇನ್ನೊಬ್ಬನಿಗೆ ಬೆಳಕೇ ಆಗಿ ಕಾಣಿಸದಿರಲೂಬಹುದು. ಈ ತತ್ವವನ್ನು ಒಪ್ಪಲು ಸಿದ್ಧವಿದ್ದವರಿಗೆ ತಮ್ಮ ಆಚೀಚೆ ಅನೇಕ ಸುಂದರ ದೃಶ್ಯಗಳು ಕಾಣಿಸಬಹುದು. ಆದರೆ, ಹುಡುಕಿ ನೋಡಬೇಕು. ಯಶಸ್ಸು ಬಾಜಾರದಲ್ಲಿ ಮೆರೆಯಬಲ್ಲದು. ಕರ್ತವ್ಯವಾಗಿ ಮಾಡಿದ್ದು ಅಷ್ಟೊಂದು ಬೆಳಕಿಗೆ ಬರಲಾರದು.

ಸೂರ್ಯಕಾಂತಿ ಹೂವು ದೊಡ್ಡದಾಗಿ, ಆಡಂಬರದಿಂದ, ಸೂರ್ಯನ ಬೆಳಕು ಬೀಳುವ ಕಡೆಗೇನೆ ಮುಖ ಹಿಡಿದು 'ನಾನಿದ್ದೇನೆ' ಎಂದು ಸಾರಿ ಹೇಳುತ್ತದೆ. ಗಿಡ, ಹೂ, ಜೀವನ-ಹೇಗೆ ಇದ್ದರೂ, ಅದರ ಇರವು, ಕೀರ್ತಿ ಊರಿಂದೂರಿಗೇ ಹಬ್ಬುತ್ತದೆ. ಆದರೆ ನೈದಿಲೆ? ಕೆಸರಲ್ಲಿ ಹುಟ್ಟಿ,ಸ ಹಗಲೆಲ್ಲ ಕಾದು, ಚಂದಿರನ ಬರವನ್ನು ಬಯಸಿ, ದೊರೆತ ಬೆಳಕಿನಿಂದ ಸಂತೋಷ ಪಡೆಯುತ್ತದೆ.

ಸೂರ್ಯಕಾಂತಿ ಅರಳಿ, ಬಾಡಿ, ಉದುರುವ ತನಕವೂ ಬೆಳಕಿನಲ್ಲಿ ಮೆರೆದಾಡುತ್ತದೆ. ನೈದಿಲೆ-ಅರಳುವ ತನಕವೂ ನೀರ ಕೆಳಗೇನೆ ಇದ್ದು, ಮೊದಲ ದಿನ ಮೇಲೆ ಬಂದು, ಮೂರು ದಿನ ಸಕಾಲದಲ್ಲಿ ಅರಳಿ, ಮುಚ್ಚಿ, ಸಾವು ಸನ್ನಿಹಿತವಾಗುವಾಗ ನೀರಲ್ಲಿ ತಲೆ ತಗ್ಗಿಸಿಕೊಂಡು ಅಡಗುತ್ತದೆ! ಒಂದಿಷ್ಟೂ ಆಡಂಬರವಿಲ್ಲ; ಬಂದುದೂ ಗೊತ್ತಿಲ್ಲ; ಹೋದುದೂ ಗೊತ್ತಿಲ್ಲ.

ಯಾವುದು ಅರ್ಥವತ್ತಾದ ಬಾಳು?

ಅರ್ಥವರಿಯಲೆತ್ನಿಸಿ, ಅದರಂತೆ ಬಾಳಲೆತ್ನಿಸಿದ ಸೋಲೂ- ಯಶಸ್ವಿಯಾದುದಲ್ಲವೇನು? ಬಾಳಿನಲ್ಲಿ ಕಾಣಿಸದ ಅರ್ಥ ಎಲ್ಲಿದ್ದರೇನು? ಯಾರ ಸಲುವಾಗಿ ಅದಿರಬೇಕು?

ಈ ಪ್ರಶ್ನೆಯನ್ನು ಉತ್ತರಿಸಲು, ತಮ್ಮ ನಿಜ ಜೀವನದಿಂದ ನೆರವಾದ ಹತ್ತಾರು ಸಾಮಾನ್ಯ ಜನರು, ನನಗೆ ಈ ಕಾದಂಬರಿಯ ವಸ್ತುವನ್ನು ಒದಗಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಅಂಥವರ ಹಿರಿತನವನ್ನು ಮರೆಯುವಂತಿಲ್ಲ.

ಇತಿ
ಶಿವರಾಮ ಕಾರಂತ
ಪುತ್ತೂರು
೧೯-೯-೧೯೫೬

 

ಪುಟಗಳು: 276

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
J
Janardana Aithala
Not read yet.

Your App is not working on iPhone.
Kindly set right my password in website.
I am not able to set right the password.
Hence I am not able to read the book.