ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಡಾ. ಕೆ. ಶಿವರಾಮ ಕಾರಂತರ "ಒಡಹುಟ್ಟಿದವರು" ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅದ್ಬುತವಾದ ಕಾದಂಬರಿ.
ಅಕ್ಕ ವಾಸಂತಿ ತನ್ನ ದಾಂಪತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು, ಪ್ರೀತಿ, ಸಹನೆ, ತಾಳ್ಮೆ, ನಂಬಿಕೆಗಳಿಂದ ಗೆದ್ದು ಉತ್ತಮ ಜೀವನ ತನ್ನದಾಗಿಸಿಕೊಂಡರೆ,
ತಂಗಿ ಶೇವಂತಿ ತನ್ನ ಅಹಂಕಾರ, ಸ್ವಾರ್ಥ, ಅಪನಂಬಿಕೆಗಳಿಂದ ಗಂಡನನ್ನು ತೋರೆಯುತ್ತಾಳೆ. “ಗಂಡನಿಲ್ಲದೆ ಇದ್ದೇನು” ಎನ್ನವ ಶೇವಂತಿ ಗಂಡು ಇಲ್ಲದೆ ಇದ್ದಾಳೆಯೇ? ಎನ್ನುವ ಪ್ರಶ್ನೆ ನಿಲ್ಲುತ್ತದೆ.
ಒಬ್ಬರಂತೆ ಒಬ್ಬರಿಲ್ಲ ಎನ್ನುವುದು ಸಹಜವಾದರೂ, ಒಡಹುಟ್ಟಿದವರಲ್ಲಿಯೂ ಇರುವ ಭಿನ್ನ ಗುಣಗಳನ್ನು ಕಾರಂತರು ಚಿತ್ರಿಸಿದ್ದಾರೆ.
ಗಂಡು ಹೆಣ್ಣಿನ ನಡುವಿನ ಸಂಬಂಧ, ಸಿರಿತನ, ಸೌಲಭ್ಯ, ಬಲವಂತಗಳ ಮೇಲೆ ನಿಂತಿರದೆ, ಪ್ರೇಮ, ತ್ಯಾಗ, ಸಹನೆ, ಮಧುರ ಆರಾಧನೆಗಳ ಮೇಲೆ ನಿಂತಿದೆ. ಎನ್ನುವುದು ಕಥಾವಸ್ತು.
- Kavitha Bhat
ಕೃಪೆ
https://www.goodreads.com/book/show/23502241-odahuttidavaru
ಪುಟಗಳು: 299
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !