ಬರಹಗಾರ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಆಡಿಯೋ ಪುಸ್ತಕದ ಅವಧಿ : 6 ಗಂಟೆ 44 ನಿಮಿಷ
ಪಾತ್ರ ಪರಿಚಯ
ತೇಜಸ್ವಿ - ಡಾ|| ಶ್ರೀಪಾದ್ ಭಟ್
ಕರ್ವಾಲೋ - ನಾರಾಯಣ ಭಾಗವತ್
ಮಂದಣ್ಣ - ವಿನಾಯಕ
ಪ್ಯಾರ - ದಾಮೋದರ್ ನಾಯಕ್
ಲಕ್ಷ್ಮಣ - ವಿದ್ಯಾಧರ ಕಡತೋಕ
ಪ್ರಭಾಕರ - ಶ್ರೀನಿವಾಸ್ ನಾಯಕ್
ನಾರ್ವೆ ರಾಮಯ್ಯ - ಪ್ರಮೋದ್ ನಾಯಕ್
ಬಿರಿಯಾನಿ ಕರಿಯಪ್ಪ - ಗಣಪತಿ ಪಟಗಾರ
ಇತರ ಪಾತ್ರಗಳು - ಸುಮಾ ಭಟ್ ಮತ್ತು ಅಮಿತ್
ಸಂಗೀತ ವಿನ್ಯಾಸ - ಮುನ್ನ ಮತ್ತು ಅನುಷ್ ಶೆಟ್ಟಿ
ರೆಕಾರ್ಡಿಂಗ್ - ನಾವು ಸ್ಟುಡಿಯೊಸ್ ಮೈಸೂರು
ಆಡಿಯೋ ಬುಕ್ ನಿರ್ಮಾಣ - ನಾವು ಸ್ಟುಡಿಯೊಸ್ ಮತ್ತು ಅನುಗ್ರಹ ಪ್ರಕಾಶನ ಮೈಸೂರು
ಎರಡು ತಲೆಮಾರಿನ ಕನ್ನಡಿಗರನ್ನು ಕನ್ನಡದ ಓದಿನತ್ತ ಕರೆತಂದ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ಕರ್ವಾಲೊ.
ಇಲ್ಲಿ ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ, ಕಥಾನಾಯಕ ಹಾಗೂ ವಿಜ್ಞಾನಿ ಕರ್ವಾಲೊ ಅವರು ಜೊತೆಗೂಡಿ ಹಾರುವ ಓತಿಯೊಂದನ್ನು ಹುಡುಕುವ ಈ ಕತೆ ಅದರ ಹಾಸ್ಯದ ನಿರೂಪಣೆ, ಪಾತ್ರಗಳ ಕಟ್ಟುವಿಕೆ, ಭಾಷೆಯ ಸೊಗಡು, ಸೃಷ್ಟಿಯ ಕೌತುಕ, ದೇವರು-ವಿಜ್ಞಾನದ ನಡುವಿನ ಹೊಯ್ದಾಟ ಎಲ್ಲವೂ ಬೆರೆತು ಕನ್ನಡದಲ್ಲಿ ಪ್ರಕಟವಾದ ಬಲು ಅಪರೂಪದ, ಬಹು ಮುಖ್ಯವಾದ ಕಾದಂಬರಿಯಾಗಿ ನೆಲೆ ನಿಂತಿದೆ. ಪ್ರಕಟವಾದ ದಿನದಿಂದಲೂ ಅದರ ಬೇಡಿಕೆ ತಗ್ಗದೇ ಉಳಿದಿರುವುದು ತೇಜಸ್ವಿ ಅವರ ಬರಹಕ್ಕಿರುವ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿಯನ್ನು ತೋರುತ್ತದೆ. ಈಗ ಮೊಟ್ಟ ಮೊದಲ ಬಾರಿ ಆಡಿಯೋ ಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿರುವ ಕರ್ವಾಲೋ ಅನ್ನು ನಿಮ್ಮ ಮೊಬೈಲಿನ ಪುಸ್ತಕ ಕಪಾಟಿಗೂ ಸೇರಿಸಿಕೊಳ್ಳಿ. ಈಗ ಕೇಳಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಎಲ್ಲಿಂದ, ಯಾವಾಗ ಬೇಕಾದರೂ..
ಆಡಿಯೋ ಪುಸ್ತಕ ಬಿಡುಗಡೆಯನ್ನು ನೆರವೇರಿಸಿಕೊಟ್ಟವರು ಯುವ ಚಿತ್ರ ನಿರ್ದೇಶಕರಾದ ಪವನ್ ಕುಮಾರ್. ಬಿಡುಗಡೆಯ ಕಾರ್ಯಕ್ರಮದ ವಿಡಿಯೋ:
ಕರ್ವಾಲೋ ಹುಟ್ಟಿದ್ದು ಹೇಗೆ ? ರಾಜೇಶ್ವರಿ ತೇಜಸ್ವಿ ಅವರು ಹೇಳ್ತಾರೆ ಕೇಳಿ:
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.