ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಇನ್ನೊಂದೇ ದಾರಿ ಮೂರು ತಲೆಮಾರಿನ ಒಂದು ಸಂಸಾರದ ಕಥೆ. ಮೂರು ತಲೆಮಾರಿನ ಮನಸ್ಸಿನ ಯೋಚನೆ, ಸಾಮಾಜದ ಚಿಂತನೆ, ಅವರು ಯೋಚಿಸಿಸುವ ವಿಚಾರಗಳ ಅಂತರ ಮತ್ತು ಅವರ ಕಲ್ಪನೆಗಳ ವಿಸ್ತಾರ, ಇವೆ ಕಾರಂತರ 'ಇನ್ನೊಂದೇ ದಾರಿ'ಯ ಎಳೆ.
ಮೊದಲೆನೆಯ ತಲೆಮಾರು: ಹೊನ್ನಿ, ಸೋಮಯಾಜಿ, ವೆಂಕಮ್ಮ
ಎರಡನೇ ತಲೆಮಾರು - ಮಾದೇವ, ಪದ್ಮಾವತಿ, ನರಸಿಂಹ
ಮೂರನೇ ತಲೆಮಾರು - ಜಯರಾಮ, ಶ್ರೀರಾಮ
ಹೊನ್ನಿ ಒಂದು ಬಡ ಕುಟುಂಬದವಳು, ಮದುವೆಯಾದ ಗಂಡ ತುಂಬ ಶ್ರೀಮಂಥನಲ್ಲ ಆದರೆ ಅವನಿಗೆ ಹೆಣ್ಣಿನ ಚಪಲ. ಹೊನ್ನಿ ಗಂಡನ ಕೆಟ್ಟ ಗುಣಗಳನ್ನು ಯಾರ ಹತ್ತಿರವೂ ದೂರುತ್ತಿರಲ್ಲಿಲ, ಅವಳಿಗೆ ಅಪ್ಪ ಅಮ್ಮ ಕಳಿಸಿಕೊಟ್ಟ ನಡತೆ ಗುಣಗಳೇ ಅದಕ್ಕೆ ಕರಣ. ಅವಳ ಅತ್ತೆ(ಗಂಡನ ಅಕ್ಕ) ವೆಂಕಮ್ಮ ಮೊದಮೊದಲು ಅವಳನ್ನು ಕಾಣುತ್ತಿದ್ದ ರೀತಿ ಕೆಟ್ಟದ್ದಿದ್ದರು, ಮಾದೇಶ ಹುಟ್ಟಿದಮೇಲೆ ಬಾದಲಾಹಿತು. ಮಾದೇಶ ಇರುವ ಮೂರು ಅಂಗುಲ ಜಾಗದಲ್ಲಿ ದುಡಿದರು ಮೂರು ಜನಕ್ಕೆ ಏನೇನು ಸಾಲುವುದಿಲ್ಲ. ಮಾದೇಶ ಬೇರೆ ಬೇರೆ ಕೆಲಸ ಮಾಡಿದರು ಹೊಟ್ಟೆ ತುಂಬಿಸಲು ಕಷ್ಟ.
ಮಾದೇಶನಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಕಿತ್ತು ತಿನ್ನುತ್ತಿತ್ತು. ಇದೆ ವೇಳೆಗೆ ಆ ಊರಿನ ಉಪಾಧ್ಯಾಯಾರ ಸ್ನೇಹಿತರಿಗೆ ಮಕ್ಕಳಿಲ್ಲವಾದ್ದರಿಂದ, ಮಾದೇಶನ ಮೊದಲೆನೆಯ ಗಂಡು ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆ. ನರಸಿಂಹ, ಮಾದೇಶನ ಮೊದಲನೆಯ ಮಗ, ಹೋದ ಮನೆ ನಾರ್ಣಪ್ಪಯ್ಯನವರದು ದೈವಭಕ್ತ ಕುಟುಂಬ. ಅಲ್ಲಿ ಬೆಳೆದ ನರಸಿಂಹ ದೈವಭಕ್ತಿ ಇದ್ದರು ಕೆಲವೊಂದು ಆಚರ ವಿಚಾರದ ಬಗ್ಗೆ, ಯಾಕೆ ಮಾಡುತ್ತಾರೆ, ಅದರ ಪ್ರಯೋಜನ ಏನು ಎಂದು ಪ್ರಶ್ನೆಗಳು, ಸಂಶಯಗಳು ಎದ್ದವು. ಇತ್ತ ಮಾದೇಶನಿಗೆ ನಾರ್ಣಪ್ಪಯ್ಯ ೩೦ ಎಕರೆ ಜಾಗವನ್ನು ಮತ್ತು ಮನೆಯನ್ನು ಕೊಟ್ಟು ಚೆನ್ನಾಗಿ ಬಾಳಲು ಅನವು ಮಾಡಿಕೊಟ್ಟರು. ಆ ೩೦ ಎಕೆರೆ ಲಾಡು ಜಾಗವನ್ನು ಒಳ್ಳೆ ಇಳುವರಿ ಬರುವ ಜಮಿನನ್ನಗಿ ಮಾಡಲು ಹಗಲು ರಾತ್ರಿ ಶ್ರಮಿಸಿದರು. ಮಾದೇಶನ ಚಿಕ್ಕಮಗ ಸೂರ್ಯ, ಅಜ್ಜಿಯ ಕಾಹಿಲೆ ಗುಣವಾಗಲಿ ಅಂತ ನರಸಿಂಹಮೂರ್ತಿ ಕರೆದುಬರುಲು ಶಿವಮೊಗ್ಗಕ್ಕೆ ಹೋಗಿದ್ದಾಗ ತನ್ನ ಅಣ್ಣ ನರಸಿಂಹ ಸಿಕ್ಕಿದಾಗ ಹೇಳತೀರದ ಸಂತೋಷ ಪಟ್ಟನು. ಇಬ್ಬರು ಜೊತೆಗೂಡಿ ವೈದ್ಯರನ್ನು ಕರೆದುಕೊಂಡು ಊರಿಗೆ ಬಂದಾಗ, ಎಲ್ಲರಿಗೆ ತಾವು ಕಳೆದುಕೊಂಡಿದ್ದ ಅಮೂಲ್ಯ ರಂಥ ಸಿಕ್ಕಿದಂತಾಗುತ್ತದೆ.
ನರಸಿಂಹನಿಗೆ ಎರಡು ಗಂಡು ಮಕ್ಕಳು. ಮೊದಲೆಯವನು ಶ್ರೀರಾಮ ಮತ್ತು ಎರಡೆನೆಯವನು ಜಯರಾಮ. ಇಬ್ಬರ ಯೋಚಿಸುವ ರೀತಿ ಬೇರೆ ಬೇರೆ. ಜಯರಾಮ ಎಲ್ಲವನ್ನು ಪ್ರಶ್ನಿಸುತ್ತಾನೆ, ದೇವರು, ಜಾತಿ, ಧರ್ಮ, ಆಚಾರ, ಎಲ್ಲದಕ್ಕೂ ಅವನ ವಿಚಾರಗಳೇ ಬೇರೆ, ಇದರಿಂದ ಅಪ್ಪ ನರಸಿಂಹ ಮತ್ತು ಹೆಂಡತಿಗೆ ತುಂಬ ನೋವಾಗುತ್ತದೆ. ಶ್ರೀರಾಮ ಬೆಂಗಳೂರಿನಲ್ಲಿ ಓದುತ್ತ ಕೆಲ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಾನೆ. ಅಪ್ಪ ಅಮ್ಮ ಮದುವೆಗೆ ಒಪ್ಪುದಿಲ್ಲ ಎಂದು ತಿಳಿದು ನ್ಯಾಯಾಲಯದಲ್ಲಿ ಮಾಡುವೆಯಾಗುತ್ತಾನೆ. ಇದನ್ನು ತಿಳಿದು ಅಮ್ಮ ಹಾಸಿಗೆ ಹಿಡಿಯುತ್ತಾಳೆ. ಜಯರಾಮ ಅಮ್ಮನ ಸ್ಥಿತಿ ನೋಡಿ ತಾನು ಮನೆಯಿಂದ ಹೊರಟರೆ ಸರಿ ಇರೋದಿಲ್ಲ ಎಂದು ತಿಳಿದು ಮನೆಯಲ್ಲಿ ಇರಲು ತಿರ್ಮಾನಿಸುತ್ತಾನೆ. ಆದರೆ MA ಮುಗಿಸಲು ಒಂದೇ ವರ್ಷ ಇರಬೇಕಾದರೆ ಯಾಕೆ ಓದು ಬಿಡುತ್ತಿಯಾ ಎಂದು ಹೇಳಿ ಓದು ಮುಗಿಸಲು ಅಪ್ಪ ಕಳಿಸುತ್ತಾರೆ.
ಜಯರಾಮ ನೋಡುವ ದೃಷ್ಟಿ, ಮಾಡುವ ಕಾರ್ಯಗಳು, ಅವನು ಇಡುವ ವಾದಗಳು ಸಾಮಾಜ ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಅವರ ಯೋಚನೆಗಳು ಬದಲಾಗಬೇಕು, ಜಾತಿ ಪದ್ಧತಿ ಇಂದ ಹೊರಬರಬೇಕು, ಮೇಲು ಕೀಳು ಇರಬಾರದು, ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಅವನು ವೇಶ್ಯಯಾ ಮಗ ಮತ್ತು ಮಗಳನ್ನು ತಂದು ಓದಿಸುವುದಾಗಲಿ, ಅನಾಥ ಮಗುವನ್ನು ಮಾಡುವೆ ಯಾಗದೆ ದತ್ತು ಪಡೆವುದಾಗಲಿ ಯಾರಿಗೂ ಇಷ್ಟವಾಗುವುದಿಲ್ಲ. ಅವನು ಯೋಚಿಸುವ ರೀತಿ, ಅಮ್ಮ ವೇಶ್ಯಯಾದರೆ ಅದರಲ್ಲಿ ಮಕ್ಕಳ ತಪ್ಪಿಲ್ಲ, ಮಕ್ಕಳು ಹುಟ್ಟಿದಾಗ ತಾವು ಇಂತವರ ಒಟ್ಟೆಯಲ್ಲಿ ಹುಟ್ಟಬೇಕು ಅಂತ ಕೇಳಿಕೊಂಡು ಬರುವುದಿಲ್ಲ, ಆದರು ಅವರನ್ನು ಸಾಮಜ ನೋಡುವ ರೀತಿ ಬೇರೆಯದೇ.
ಇಲ್ಲಿ ಕಾರಂತರು ಯಾವ ಯಾವ ಪೀಳಿಗೆ ಯಾವ ರೀತಿ ಯೋಚಿಸುತ್ತದೆ ಮತ್ತು ನಾವು ಯಾವ ರೀತಿಯಲ್ಲಿ ಯೋಚಿಸಬೇಕು ಎಂದು ಜಯರಾಮನ ಮೂಲಕ ಹೇಳುತ್ತಾರೆ. ಅವರ ದೃಷ್ಟಿಕೋನ ನಾವು ಬೆಳೆದಂತೆ ನಮ್ಮ ಅಚಾರ ವಿಚಾರಗಳು ಬೆಳೆಯಬೇಕು, ನಮ್ಮ ಸಂಸ್ಕೃತಿ ಬೆಳೆಯಬೇಕು, ನಾವು ಯೋಚಿಸುವ ರೀತಿ ಬದಲಾಗ ಬೇಕು ಅಂತ.
ಕೃಪೆ
http://www.sannaprayathna.com/
ಪುಟಗಳು: 308
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !