Click here to Download MyLang App

ಹುಲಿ ಪತ್ರಿಕೆ - 1 (ಇಬುಕ್)

ಹುಲಿ ಪತ್ರಿಕೆ - 1 (ಇಬುಕ್)

e-book

ಪಬ್ಲಿಶರ್
ಅನುಷ್ ಎ ಶೆಟ್ಟಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

 

ಬರೆದವರು: 

ಅನುಷ್ ಶೆಟ್ಟಿ

ಮಾಣಿ ದಡದತ್ತ ದಿಟ್ಟಿಸಿ ನೋಡಿ, ತನ್ನ ಜೇಬಿನಿಂದ ಬೆಂಕಿ ಪೆಟ್ಟಿಗೆಯ ಹೊರತೆಗೆದು ಕಡ್ಡಿಗೀರಿ, ತನ್ನ ಪಕ್ಕದಲ್ಲೇ ಇದ್ದ ಬುಡ್ಡಿದೀಪ ಹಚ್ಚಿ, ಮೊಳೆಗೆ ಸಿಕ್ಕಿಸಿದ್ದ ಅದನ್ನು ಕೈಯ್ಯಲ್ಲಿ ಹಿಡಿದು ದೋಣಿಯಿಂದಾಚೆ ದಡದತ್ತ ಚಾಚಿದ. ದೋಣಿ ಇಂಚಿಂಚೇ ದಡಕ್ಕೆ ಹತ್ತಿರಾಗುತ್ತಿತ್ತು. ಮಾಣಿಯನ್ನು ನೋಡಿ ದೋಣಿಯಲ್ಲಿದ್ದವರೆಲ್ಲ ದಡದತ್ತಲೇ ದಿಟ್ಟಿಸತೊಡಗಿದರು. ಅವರೆಲ್ಲರ ಸೋಜಿಗಕ್ಕೆ ದೀಪದ ಬೆಳಕಿಗೆ ದಡದಲ್ಲಿ ಕಣ್ಣುಗಳೆರಡು ಮಿನುಗತೊಡಗಿದವು. ದೋಣಿಯಲ್ಲಿ ಜನರ ಗುಸು-ಗುಸು ಮಾತು ಜೋರಾಗತೊಡಗಿತು. ದೋಣಿಯು ದಡಕ್ಕೆ ಮತ್ತೂ ಹತ್ತಿರಾಗುತ್ತಲೆ ಮಿನುಗುತ್ತಿದ್ದ ಕಣ್ಣ ಸುತ್ತಲ ಗೌಗಪ್ಪು, ಅದರ ಸುತ್ತಲು ಕಪ್ಪು ಪಟ್ಟೆಗಳ ಹಳದಿ ಚರ್ಮ ಗೋಚರಿಸಿ ಜನರ ಮಾತೆಲ್ಲ ಒಮ್ಮೆಲೆ ನಿಂತು ದೋಣಿಯಲ್ಲೆಲ್ಲ ಮಿಂಚು ಸಂಚಾರವಾದಂತಾಗಿ ಗುಮ್ಮನೆ ಮೌನ ಆವರಿಸಿತು.

ಸಾರಂಗ ಒಮ್ಮೆ ಮಾಣಿಯನ್ನು ನೋಡಿದ. ಅವನು ಅಲ್ಲಾಡದೆ, ಹಿಂದೆಯೂ ಸರಿಯದೆ ದೀಪವನ್ನು ಹಾಗೇ ಹಿಡಿದು ನಿಂತಿದ್ದ. ಮಿಕ್ಕವರ ಬಾಯಿಂದ ಉಸಿರೂ ಜೋರಾಗಿ ಹೊರಬರುತ್ತಿರಲಿಲ್ಲ. ಆಗಲೇ ಆಕಾಶದಲ್ಲಿ ಮಿಂಚೊಂದು ಹೊಳೆದು, ಹುಲಿಯ ಇಡಿರೂಪ ಗೋಚರಿಸಿ ಎಲ್ಲರಿಗೂ ಕಿವಿಯಲ್ಲಿ ತಂತಮ್ಮ ಎದೆಬಡಿತ ಕೇಳಲಾರಂಭಿಸಿತು. ಆದರೂ ಮಾಣಿ ದೀಪವ ಹಾಗೇ ಹಿಡಿದು ನಿಂತಿದ್ದ. ಹುಲಿಯೊಮ್ಮೆ ದೋಣಿಯನ್ನು ದಿಟ್ಟಿಸಿ, ನಿಧಾನವಾಗಿ ಹಿಂದೆ ಸರಿದು, ಹಿಂದಿದ್ದ ದಿಬ್ಬವನ್ನು ಏರಿ, ಕಪ್ಪು ಮರಗಳೊಳಗೆ ಅಂತರ್ಧಾನವಾಯಿತು. ಮಳೆ ಹನಿ ಹಾಕಲಾರಂಭಿಸಿತು.

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - ೧" ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 ಪುಟಗಳು: 200

 


Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
M
Mahesha Poojary

ಹುಲಿ ಪತ್ರಿಕೆ - 1 (ಇಬುಕ್)

N
Nithin G N
ಒಂದು ಚಿತ್ರಪಟದ ಸರಮಾಲೆ ಕಣ್ಣೆದುರು ಕಟ್ಟಿದಂತಿದೆ

ಮೊದಲನೆದಾಗಿ ಹಿನ್ನೆಲೆ ಸಂಗೀತ ಚೆನಾಗಿದೆ.
ಚಿಕ್ಕ ಚಿಕ್ಕ ಸೂಕ್ಶ್ಮಗಳು ಚೆನ್ನಾಗಿ ಮೂಡಿಬಂದಿದೆ.
ಎಲ್ಲರ ದನಿ ಚೆನ್ನಾಗಿದೆ. ನಾನು ಕೇಳಲು ಮೊದಲ್ ಮಾಡಿದವನು,ಮುಗಿಯೋ ತನಕ ಕೇಳಿದೀನಿ. ಶೆಟ್ರೆ ಸಕತ್ತಾಗ್ ಬರಿತಿರ.