ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಬರಿಯ ಐದು ವರ್ಷಗಳ ಹಿಂದೆ ತೊಡಗಿದ ಕತೆಯಿದು; ಅಷ್ಟೇ ಸ್ವಲ್ಪ ಸಮಯದ ಹಿಂದೆ ಅವಳು ಹಳ್ಳಿಗಾಡಿನ 'ಗಿರಿಜೆ'ಯಾಗಿದ್ದಳು. ಈಗ ಹೆಸರಿನ ಪರಿವರ್ತನೆಯಾಗಿದೆ; ಮೇಲೆ ಅದು ವಿಕಾಸವನ್ನೂ ಹೊಂದಿದೆ. ಅವಳ ಮನೆಯವರು ಡ್ರಾವಿಡ ಸಾಂಪ್ರದಾಯದವರಾದರೂ ಈಗ ಗಿರಿಜೆ ದೇವಿಯಾಗಿದ್ದಾಳೆ. ಆರ್ಯರ ದೇವಿತನ ನವಯುಗದ ತರುಣಿಯರೆಲ್ಲರ ಬೆನ್ನು ಹತ್ತಿರುವಾಗ, ಹಳ್ಳಿಯನ್ನು ಬಿಟ್ಟು ನಗರವನ್ನು ಸೇರಿದ ಗಿರಿಜೆ ಏತಕ್ಕೆ ಸುಮ್ಮನಾದಾಳು? ಗಿರಿಜೆಯ ನಾಮಾಂಕಿತ ವಿಕಾಸವಾದಂತೆ ಸ್ವಭಾವ, ಶೀಲಗಳೆಲ್ಲವೂ ಅರಳಿದ ಬಗೆಯನ್ನು ಹೇಳುವುದೇ ಈ ಕತೆಯ ಉದ್ದೇಶ.
ಪುಟಗಳು: 169
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !