ಓದಿದವರು:
ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 3 ಘಂಟೆ 27 ನಿಮಿಷ
ಬರಹಗಾರರು: ಕೆ.ಆರ್. ಎಸ್. ಮೂರ್ತಿ
ಇದೊಂದು ಸಮಕಾಲೀನ ಟ್ರಾವೆಲ್ ಅಡ್ವೆಂಚರ್ ಥ್ರಿಲ್ಲರ್. ನಿಮ್ಮನ್ನು ಕುತೂಹಲಕರ ಓದಿನ ಸೆಳೆತಕ್ಕೆ ಒಳಗಾಗಿಸುವುದರಲ್ಲಿ ಸಂಶಯವೇ ಇಲ್ಲ! ಸುಂದರ-ರಮ್ಯ ದ್ವೀಪದ ಚಿತ್ರಣಗಳ ಜೊತೆ ಜೊತೆಗೇ ಮೋಸದ ಬಲೆ, ದ್ವೀಪದಲ್ಲಿನ ರಹಸ್ಯ ಮತ್ತು ನಿಗೂಢತೆ, ಸಾಹಸ, ಪ್ರಾಣಾಪಾಯಕರ ದುರಂತ ಎಲ್ಲವೂ ಪತ್ತೇದಾರಿ ಕತೆಯಂತೆ ಓದುಗರನ್ನು ಹಿಡಿದಿಟ್ಟುಕೊಂಡರೂ - ಮಾನಸಿಕ ತುಮುಲಗಳು, ಅವಕ್ಕೆ ಕಾರಣ, ನೀತಿ, ನಿಯತ್ತು, ಬದುಕಿನ ಪಾಠಗಳು ಇತ್ಯಾದಿಗಳನ್ನೂ ಸೂಕ್ಷ್ಮವಾಗಿ ತೆರೆದುಕೊಡುತ್ತಾ ಸಾಗುವ ಧಾರವಾಹಿ! ಪ್ರವಾಸೀ ತಾಣವಾದ ಜಾರ್ಜ್ ಐಲ್ಯಾಂಡ್ ದ್ವೀಪದ ಸಮೀಪವೇ ಇರುವ ಮತ್ತೊಂದು ಸುಂದರ ಮನೋಹರ ಪುಟ್ಟದ್ವೀಪವೇ ಹವಳದ್ವೀಪ. ಜಾರ್ಜ್ ಐಲ್ಯಾಂಡ್ ಸರಕಾರದ ಪ್ರಾಣಿಸಂರಕ್ಷಣೆ ಮತ್ತು ನಿಸರ್ಗಸಂರಕ್ಷಣಾ ವಿಭಾಗದ ಅನುಮತಿ ಇಲ್ಲದೆ ಈ ತಾಣಕ್ಕೆ ಪ್ರವೇಶವಿಲ್ಲ. ಜನಪ್ರಿಯ ಪ್ಯಾರಡೈಸ್ ಹೋಟೇಲಿನ್ ಆಡಳಿತ ವರ್ಗಕ್ಕೆ ಮಾತ್ರ ವಾರಕ್ಕೊಮ್ಮೆ - ಎರಡು ದಿನಗಳು (ಒಂದು ರಾತ್ರಿ) ಸಮಯ ಮಾತ್ರ ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ಯುವ ಅನುಮತಿ ಕೊಡಲಾಗಿತ್ತು. ಅಂದೊಂದು ದಿನ ಎಂಟು ಮಂದಿ ಅತಿಥಿಗಳು ವಿಹಾರೀ ಲಾಂಚ್ ಒಂದರಲ್ಲಿ ಅಲ್ಲಿಗೆ ಪಯಣಿಸಿದಾಗ, ಅಲ್ಲಿ ನಡೆಯುವ ಘಟನೆಗಳು ಅತಿ ರೋಚಕ ಮತ್ತು ಭಯಂಕರ. ಪ್ರಯಾಣಿಕರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವೂ ವಿಭಿನ್ನ ಮತ್ತು ಪ್ರವಾಸದ ಉದ್ದೇಶಗಳೇ ಬೇರೆ. ಅಲ್ಲಿ ಒಂದೊಂದಾಗಿ ತೆರೆದುಕೊಂಡು ಬರುವ ಮಾಹಿತಿ, ಸನ್ನಿವೇಶಗಳು ಮತ್ತು ಘಟನೆಗಳು ಮೈ ನವಿರೇಳುಸುವಂತಹವು. ಪ್ರಯಾಣಿಕರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವೂ ವಿಭಿನ್ನ ಮತ್ತು ಪ್ರವಾಸದ ಉದ್ದೇಶಗಳೇ ಬೇರೆ. ಹೆಜೆ ಹೆಜ್ಜೆಗೂ ಕುತೂಹಲ ಉಳಿಸಿಕೊಂಡು ಬಹಳ ಚುರುಕಾಗಿ ಸಾಗುವ ಕಥನ - ಅತ್ಯಂತ ರೋಮಾಂಚಕಾರಿ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.