ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Publisher: Panchami Media Publications
ಬರಹಗಾರರು: ಚೀಮನಹಳ್ಳಿ ರಮೇಶಬಾಬು
ಕವಿ, ಕಥೆಗಾರ ಎಂದೇ ಹೆಸರಾಗಿರುವ ಚೀಮನಹಳ್ಳಿ ರಮೇಶಬಾಬು ಅವರ ಪ್ರಥಮ ಕಾದಂಬರಿ. ಬಲಿಹಾರ ನಮ್ಮ ಸಮಾಜವನ್ನು ವಾಸ್ತವವಾದಿ ಆಗಿ ಕಾಣಿಸುತ್ತದೆ. ಸಮಾಜದ ಊನವುಳ್ಳ ಕುಟುಂಬ ವ್ಯವಸ್ಥೆಯ ತುಣುಕೊಂದನ್ನು ಕಥಿಸುತ್ತದೆ. ಅಂತಹ ಸಂದರ್ಭದಲ್ಲಿ ಹೆಣ್ಣಿನ ಪಾತ್ರ ಹೇಗಿರುತ್ತದೆ? ಹೇಗಿರಬೇಕು? ಎಂಬ ವೈಚಾರಿಕತೆಯನ್ನು ಕಾದಂಬರಿ ಕಥನ ರೂಪಿಯಾಗಿ ಮಂಡಿಸುತ್ತದೆ. ಈ ದೃಷ್ಟಿಯಿಂದ ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಪಠ್ಯ ಆಗಬಲ್ಲುದು. ವಿಶೇಷ ಅಂದ್ರೆ; ಈ ಕಾದಂಬರಿಗೆ ಧಾರವಾಡ ಕರ್ನಾಟಕ ಸಂಘದ ಬೇಂದ್ರೆ ಗ್ರಂಥ ಬಹುಮಾನ ಕೂಡ ದೊರೆತಿದೆ.