ಬರೆದವರು: ಸುಚೇತಾ ಗೌತಮ್
ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ ! ಸಾವು-ನೋವು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಅನುಭವಿಸಿದ ಸಾರ್ವಜನಿಕರು ಒಂದೆಡೆ. ಅಸಹಾಯಕ ಪೋಲಿಸ್ ಪಡೆ ಇನ್ನೊಂದೆಡೆ, ಸಾಲದ್ದಕ್ಕೆ ಅನಾಮಧೇಯ ಕರೆಗಳು..
ಮೂರು ಸ್ಥಳಗಳಲ್ಲಿ ಆಗಿರುವ ಸ್ಪೋಟ ಮುಂದಿನ ಬಾರಿ ಎಲ್ಲಾಗಲಿದೆ ಅನ್ನುವ ಆತಂಕದಲ್ಲಿ ಪೇಚಾಡುತ್ತಿರುವ ಪೋಲಿಸ್ ಕಮಿಶನರ್.. ಅಂತಹ ಹೊತ್ತಲ್ಲೇ ಸೈಬರ್ ಕ್ರೈಮ್ ಬ್ರಾಂಚ್ ಗೆ ಬಂದ ಹೊಸ ಆಫೀಸರ್ ವೇಣುಗೋಪಾಲ. ಅಣ್ಣನ ಮಗನಿಗೆ ಹೇಳಿಕೊಟ್ಟ "ಫಿಬೊನಸ್ಸಿ ಸೀರಿಸ್" ಕುರಿತೇ ಅವನಿಗೆ ಹಗಲುಗನಸು..ಫಿಬೋನಸ್ಸಿಯ ಬೆನ್ನು ಹತ್ತಿದ ಅವನಿಗೆ ಈ ಸರಣಿ ಸ್ಪೋಟದ ರಹಸ್ಯ ಬಯಲು ಮಾಡಲು ಸಾಧ್ಯವಾಯಿತೇ? ಭಯೋತ್ಪಾದಕರ ಮೈಂಡ್ ರೀಡಿಂಗ್ ಮಾಡಲು ಸಾಧ್ಯವಾಯಿತೇ?
ಬೆಂಗಳೂರಿನ ಯುವ ಲೇಖಕಿ ಸುಚೇತಾ ಗೌತಮ್ ಅವರು ಬರೆದ ಸೈಬರ್ ಕ್ರೈಮ್ ಆಧಾರಿತ ಕಿರು ಕಾದಂಬರಿ ಇಲ್ಲಿದೆ. ಸೈಬರ್ ಕ್ರೈಮ್ ಸರಣಿಯಲ್ಲಿ ಬರಲಿರುವ ನಾಲ್ಕು ಭಾಗಗಳಲ್ಲಿ ಇದು ಮೊದಲನೆಯದ್ದು.
ಪುಟಗಳು: 70
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !