ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ಶಿವರಾಮ ಕಾರಂತರ ‘ ಔದಾರ್ಯದ ಉರುಳಲ್ಲಿ’ ಅನ್ನುವ ಕಾದಂಬರಿ ಇದೆ. 1947ರಲ್ಲಿ ಪ್ರಕಟಿತ. ಇತ್ತೀಚೆಗೆ ಬೆಳಗೋಡು ರಮೇಶ್ ಭಟ್ Ramesh Bhat Belagodu ಅವರು ನಾ ಮೊಗಸಾಲೆ ಅವರ ಬಗ್ಗೆ ಬರೆದ ಲೇಖನವೊಂದರಲ್ಲಿ ಇದರ ಹೆಸರೂ ಉಲ್ಲೇಖ ಮಾಡಿದ್ದುದರಿಂದ ನನಗೆ ಆಸಕ್ತಿ ಕೆರಳಿತ್ತು. ಆದರೆ ಏನು ಮಾಡಿದರೂ ಎರಡೆರಡು ಸಲ ಉರುಳಾಡಿದರೂ ಮುಗಿಸಲಾಗಿರಲಿಲ್ಲ. ಬಹುಶಃ ಆಗಿನ ಮನಸ್ಥಿತಿಯೂ ಕಾರಣವಾ? ಗೊತ್ತಿಲ್ಲ.
ಆಮೇಲೆ ಮುಗಿಸಿದೆ ಅನ್ನಿ. ಅದಾಗಿ ಮೊನ್ನೆ ಯಾಕೋ ಗಾಂಧಿ ,ಗಾಂಧಿ ಅಂತ ಅತ್ಲಾಗಿ ಇತ್ಲಾಗಿ ಸುಮಾರು ಜನ ಉರುಳಾಡುವುದು ನೋಡಿ ಇದನ್ನು ಮತ್ತೆ ಕೈಗೆತ್ತಿಕೊಂಡೆ.
ಗಾಂಧಿಯ ಮಾರ್ಗ ಹಿಡಿದರೆ ಆಗುವ ವಾಸ್ತವಿಕ ತೊಂದರೆಗಳೇನು? ಅದು ಸಾಧುವೇ? ಆದರ್ಶಕ್ಕೆ ಅಂತ ಕಟ್ಟಿಕೊಂಡದ್ದು ತಗಲು ಹಾಕಿಕೊಂಡದ್ದು ಹೇಗೆ? ಸ್ವಾತಂತ್ರ್ಯ ಹೋರಾಟದ ಕಾಲ ಎಂದರೆ ಎಲ್ಲರೂ ವೈಭವೀಕರಿಸಿದ ಆದರ್ಶದ ಹೊರತಾಗಿ ಆ ಹಾದಿಯಲ್ಲಿ ನಡೆದವರ ಮನಸು ಹೇಗಿತ್ತು? ಅವರ ಕಷ್ಟಗಳು ಏನಿತ್ತು? ಅವರ ಸಾಂಸಾರಿಕ ಬದುಕು ಇತ್ಯಾದಿಗಳ ನಿರುಮ್ಮಳ ಶೈಲಿಯಲ್ಲಿ ಕಾರಂತರು ಬರೆದಿದ್ದಾರೆ.
ನಾವು ದೇವರ ಸ್ಥಾನಕ್ಕೇರಿಸಿದ ವ್ಯಕ್ತಿಯ ಕಾಲಮಾನದಲ್ಲಿ ಅವರ ಆದರ್ಶಗಳ ಪಾಲಿಸಹೊರಟವರ ನಿರಾಸೆ ಅರಿವಿಗೆ ಬರುತ್ತದೆ.
ಹೆಚ್ಚು ಮಾತೇಕೆ? ಪಟ್ಟಣದಲ್ಲಿ ಕುಳಿತು ಕೃಷಿಯ ಬಗ್ಗೆ ಮಾತಾಡಿದಷ್ಟು ಸುಲಭ ಅಲ್ಲವಲ್ಲ ಗದ್ದೆಗಿಳಿದು ಕೆಲಸ ಮಾಡುವುದು ಎಂದರೆ ಈಗಿನವರಿಗೆ ಅರ್ಥವಾಗಬಹುದು.
ಕಾರಂತರ ಶೈಲಿ ಸ್ವಲ್ಪ ಬೋರಾಗಬಹುದು ಆದರೆ ನಂಬಿ ಒಂದು ಪ್ರಾಯ ಕಳೆದ ಮೇಲೆ ಅವರಷ್ಟು ಉಳಿದವರು ರುಚಿಸುವುದಿಲ್ಲ.
ಯಾಕೆಂದರೆ ಅವರೇ ಹೇಳಿದಂತೆ 'ಬಾಳ್ವೆಯೇ ಬೆಳಕು! '
–ಪ್ರಶಾಂತ್ ಭಟ್
ಕೃಪೆ
https://pustakapremi.wordpress.com
ಪುಟಗಳು: 466
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !