Click here to Download MyLang App

ಅಸ್ಪೃಶ್ಯರು (ಇಬುಕ್)

ಅಸ್ಪೃಶ್ಯರು (ಇಬುಕ್)

e-book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 65.00
ಸೇಲ್ ಬೆಲೆ
Rs. 65.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

‘ಅಸ್ಪೃಶ್ಯ’ ಅಂದರೆ, ‘ಮುಟ್ಟಬಾರದ’ ಎಂಬುದು ರೂಢಿಗತ ಅರ್ಥ; ‘ಮುಟ್ಟಲಾಗದ’ ಎಂದೂ ಅದನ್ನು ಅರ್ಥೈಸಬಹುದು. ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಕುರಿತದ್ದು ಈ ಕಾದಂಬರಿ. ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆಯೂ ಕಾಣಸಿಗುತ್ತದೆ, ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡ ಈ ಕೃತಿಯು ಅನಾವರಣ ಮಾಡಿಸುತ್ತದೆ. ಅಲ್ಲದೆ, ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರ ಈ ಕಥೆಯು ಐತಿಹಾಸಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಹೋಗುವ ಒಂದು ಸಂಪ್ರದಾಯದ ಕಥನವೂ ಹೌದು; ಮತ್ತು, ಅದು ಬದಲಾವಣೆಗಳನ್ನೆಲ್ಲ ಮೀರಿ ನಿಲ್ಲುವ ಒಂದು ಸಾರ್ವತ್ರಿಕ ಮಾನವ ಕಥನವೂ ಹೌದು. ಸಣ್ಣಸಣ್ಣ ವಿವರಗಳ ಮೂಲಕವೇ ಕಟ್ಟಿಕೊಳ್ಳುತ್ತಹೋಗುವ ಈ ಕಥನಕ್ಕೆ ಕಾದಂಬರಿಯ ಹರಹಿನ ಜತೆಗೆ ಕಾವ್ಯದ ವ್ಯಂಜಕತೆಯೂ ಇದೆಯಾದ್ದರಿಂದಲೇ ಇಲ್ಲಿ ಕಾಣುವ ಸಂಸಾರಚಿತ್ರವು ನಿರ್ದಿಷ್ಟ ದೇಶಕಾಲದ ಒಂದು ಕುಟುಂಬಕಥನವಾಗುವ ಜತೆಗೇ ವಿಶಾಲ ಸಂಸಾರದ ಪ್ರತಿಮೆಯೂ ಆಗುವ ಶಕ್ತಿಯನ್ನು ಪಡೆದುಕೊಂಡಿದೆ.

 

ಪುಟಗಳು: 108

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಪ್ರಜ್ವಲ್ ಪ್ರಜ್ವಲ್ ಪೂಜಾರಿ

ಓದುತ್ತಾ ಓದುತ್ತಾ ಹೋದಂತೆ ಹಿಂದೆ ಆಗುತ್ತಿದ್ದ, ನಾವು ಕಂಡ ಘಟನೆಗಳೆಲ್ಲಾ ಕಣ್ಣ ಮುಂದೆ ಹಾದು ಹೋಯಿತು. ಮಡಿ ಮೈಲಿಗೆಗಳು ಈಗ ಅಷ್ಟಿಲ್ಲ ಆದರೆ ಜಾತಿ ಪದ್ಧತಿ ಮಾತ್ರ ಮೈಗಂಟಿದ ಚರ್ಮದಂತೆ ಈಗಲೂ ಹಾಗೇ ಇದೆ. ಮಕ್ಕಳ ಮುಗ್ಧ ಪ್ರಶ್ನೆಗಳು, ಅದಕ್ಕೆ ಗೌರಮ್ಮ, ಪಾರ್ತಕ್ಕ ಕೊಡುವ ಉತ್ತರ, ಬೈಗುಳಗಳು ಓದಲೂ ಖುಷಿಯೆನಿಸುತ್ತಿತ್ತು. ಅದ್ಬುತವಾದ ಕಾದಂಬರಿ ಕುಂದಗನ್ನಡದಲ್ಲಿ ಓದುದೇ ಚೆಂದ ಅನಿಸುತ್ತದೆ.