ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ವಟಪುರ ಎಂಬ ಊರನ್ನೂ ಅಲ್ಲಿನ ಒಂದು ಮರವನ್ನೂ ಕೇಂದ್ರವಾಗಿರಿಸಿಕೊಂಡು ಬೆಳೆವ ಕಥೆ ಆ ಮರದಂತೆಯೇ ರೆಂಬೆ ಕೊಂಬೆಗಳ ಹೆಚ್ಚಿಸಿಕೊಂಡು ಸಮೃದ್ಧವಾಗುತ್ತದೆ. ಆದರೆ ಅದರಿಂದ ಏನು ಸಿಕ್ಕಿತು ಅನ್ನುವುದು ಗಟ್ಟಿಸಿ ಕೇಳಿದರೆ ಹೇಳಲಾಗುವುದಿಲ್ಲ.
ಮೊದಲ ನೂರು ಪುಟಗಳಲ್ಲಿ ಬರುವ ಮರ್ತಪ್ಪ ಪ್ರಭುಗಳು,ಅವರ ಬೇರು ,ಅವರ ವ್ಯಾಪಾರ,ವಹಿವಾಟು, ಅವರು ಕ್ಷಾಮ ಕಾಲದಲ್ಲಿ ಮಾಡಿದ ಸಹಾಯ,ರಾಮ ಭಟ್ಟರು, ಅವರ ಕೆಲಸ,ಊರವರ ಪರಸ್ಪರ ಸಂಬಂಧ ಇವೆಲ್ಲದವರ ವಿವರಣೆ ಆಸಕ್ತಿದಾಯಕವಾಗಿತ್ತು.
ಕಾರಂತರ ಈ ಕಾದಂಬರಿ ನಾನು ನಾಲ್ಕು ಸಲ ಓದಲು ಯತ್ನಿಸಿ ವಿಫಲನಾಗಿದ್ದೆ.
ಇದರಲ್ಲಿ ಮೂರು ಕಾಲಘಟ್ಟದ ಚಿತ್ರಣಗಳಿವೆ.
ಮೊದಲನೆಯ ಕಾಲಘಟ್ಟದವರೆಗೆ ಅದ್ಭುತವಾದ ಚಿತ್ರಣ ಆಮೇಲೆ ಶುಷ್ಕವಾಗುವುದು ಇದಕ್ಕೆ ಕಾರಣ ಎಂದು ನಂಬಿದ್ದೆ. ಸರಿಯಾಗಿ ನೂರು ಪುಟಗಳ ಮೇಲೆ ಮುಂದುವರೆಯಲೇ ಆಗಿರಲಿಲ್ಲ.
ಆದರೆ ಇದಕ್ಕೆ ಕೃತಿ ಕಾರಣವಲ್ಲ ಎಂದೂ ನನ್ನ ಅನುಭವ ಸಾಹಿತ್ಯ ಕಾರಣ ಎಂದು ಈಗ ತಿಳಿದುಬಂತು.
ಇವತ್ತು ಕೂತು ಸಾವಧಾನವಾಗಿ ಇಡಿಯ ಕಾದಂಬರಿ ಓದುತ್ತಾ ಹೋದೆ.
ಕಾರಂತರ ಪುಸ್ತಕಗಳಲ್ಲಿ ಆಮೇಲಿನ ಕಾದಂಬರಿಗಳು ಕಾದಂಬರಿಯ ಖಾಸಗಿತನ ಬಿಟ್ಟು ಉಪನ್ಯಾಸಗಳಂತೆ ಭಾಸವಾದರೂ ಅದರಲ್ಲಿ ಅಡಗಿದ ಜೀವನದ ಸತ್ಯಗಳ ಅರಿಯಲು ಬದುಕು ಅರಿವಾಗಬೇಕು.
ಅದು ಈಗ ಮರು ಓದಿಗೆ ಗೊತ್ತಾಯಿತು.
- Prashanth Bhat
ಕೃಪೆ
https://www.goodreads.com/book/show/28451184-ade-ooru-ade-mara
ಪುಟಗಳು: 303
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !