
ಪ್ರಕಾಶಕರು: ಸಾವಣ್ಣ
Publisher: Sawanna
ಉಡುಪಿ ಹೋಟೆಲುಗಳ ಮೂಲಕ ಇಡೀ ಭಾರತಕ್ಕೆ ಕರ್ನಾಟಕದ ಆಹಾರದ ಸೊಗಡನ್ನು ಪರಿಚಯಿಸಿದ ಖ್ಯಾತಿ ಕನ್ನಡಿಗರದ್ದು. ಇಂತಹ ಆಹಾರ ಉದ್ಯಮ ಇಂದು ಅತ್ಯಂತ ಸ್ಪರ್ಧೆಯ ಕ್ಷೇತ್ರವಾಗಿದೆ. ಇಲ್ಲಿ ಗೆಲ್ಲುವುದು ಸುಲಭವಲ್ಲ, ಅದಕ್ಕೆ ನೀವು ತಿಳಿದಿರಲೇಬೇಕಾದ ಒಳಗುಟ್ಟುಗಳನ್ನು ತಿಳಿಸುವ ಅಪರೂಪದ ಪುಸ್ತಕ "ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ?" ಕೇನ್ ಒ ಲಾ, ಕೇಕ್ ವಾಲಾ, ಗುಡ್ ಬ್ರೆಡ್, ನಮ್ಮೂರ ಹೋಟೆಲ್, ಕೂಲ್ ಜಾಯಿಂಟ್ ಹೀಗೆ ಸಾಲು ಸಾಲು ಯಶಸ್ವಿ ಫುಡ್ ಬ್ರಾಂಡ್ ಹುಟ್ಟು ಹಾಕಿರುವ ಗೋಪಾಡಿ ಶ್ರೀನಿವಾಸ್ ರಾವ್ ಅವರ ವ್ಯಕ್ತಿ ಚಿತ್ರಣವನ್ನು ಖ್ಯಾತ ಬರಹಗಾರ ಜೋಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.