
“ನಾನೆಂದೂ ರಾವಣನಾಗಲು ಬಯಸಿರಲಿಲ್ಲ ಸಾಂಬು, ನನ್ನ ಯುದ್ಧ ಯಾವತ್ತಿಗೂ ನನ್ನವರೊಂದಿಗೆ ಇರಲಿಲ್ಲ. ಆದರೆ ನೀನು ವಿಭೀಷಣ ಆದ ದಿನದಿಂದ ನನ್ನನ್ನು ಎಲ್ಲರೂ ರಾವಣ ಎಂದೇ ನೋಡ ತೊಡಗಿದರು. ಅಂದು ವಿಪ್ಲವದ ಮಾತುಗಳು ಮೊದಲ ಬಾರಿಗೆ ಬಂದಾಗ, ನೀನೇ ಸಾಹೇಬ್ ಆಗಬಹುದಿತ್ತು. ನನಗೆ ಅಂದು ಈ 'ಸಾಹೇಬ್' ಎನ್ನುವ ಪದವಿ ಬೇಡವಾಗಿತ್ತು. ನಾನೂ ನಿಮ್ಮಂತೆಯೇ ನನ್ನದೇ ಹೆಸರಿನಿಂದ ಹೋರಾಟ ಮಾಡಲು ಬಯಸಿದ್ದೆ.”