Click here to Download MyLang App

ಗಿರಿಮನೆ ಶ್ಯಾಮರಾವ್,  ಗಿರಿಕಂದರ ಎಸ್ಟೇಟ್ ( ಮಲೆನಾಡಿನ ರೋಚಕ ಕತೆಗಳು ಭಾಗ-10 ),  malenadina rochaka kathegalu,  Malenaadina Rochaka Kathegalu,  girimane shyamrao,  girimane shyamarav,  Girimane Shyamarao,  girimane shyaamarao,  girimane shamrao,  Girikandara Estate (Malenadina Rochaka Kategalu bhaga 10),

ಗಿರಿಕಂದರ ಎಸ್ಟೇಟ್ ( ಮಲೆನಾಡಿನ ರೋಚಕ ಕತೆಗಳು ಭಾಗ-10 ) (ಇಬುಕ್)

e-book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಮನುಷ್ಯರ ಮನಸ್ಸಿನ ಆಟಗಳು ವಿಚಿತ್ರ. ವೈವಿಧ್ಯಮಯ. ಕೆಲವರಿಗೆ ಯಾರಿಗೂ ತೊಂದರೆ ಮಾಡದೆಯೇ ಚೆನ್ನಾಗಿ ಬದುಕಬೇಕೆಂಬ ಆಸೆ. ಕೆಲವರಿಗೆ ಇನ್ನೊಬ್ಬರ ಬದುಕನ್ನು ನುಂಗಿಯಾದರೂ ತಾನು ಚೆನ್ನಾಗಿ ಬದುಕ ಬೇಕೆಂಬ ದುರಾಸೆ. ಇನ್ನು ಕೆಲವರಿಗೆ ತಮಗೆ ಬೇಕಾದ್ದು ಸಿಗಲಿಲ್ಲ ಎಂಬ ನಿರಾಸೆ. ಇದರ ನಡುವೆ ತನಗಾಗಿ ಯಾವ ತರಹದ ಆಸೆಯನ್ನೂ ಇಟ್ಟುಕೊಳ್ಳದೆ ಬದುಕೆಲ್ಲಾ ಮತ್ತೊಬ್ಬರಿಗಾಗಿ ಜೀವ ಸವೆಸುವ ಜನಗಳೂ ಇರುತ್ತಾರೆ. ಹಾಗೆಯೇ ಕೆಲವರು ಅಪ್ಪ ಅಮ್ಮ ಇರುವಾಗ ಅದರ ಬೆಲೆಯೇ ತಿಳಿಯದೆ ನಡೆದುಕೊಳ್ಳುವವರು, ಕೆಲವರು ಬದುಕನ್ನು ಅರ್ಥಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು, ಇನ್ನು ಕೆಲವರು ಅಪ್ಪ ಅಮ್ಮನ ಪ್ರೀತಿಯಿಂದಲೇ ವಂಚಿತರಾದವರು ಇರುತ್ತಾರೆ. ಇದರ ನಡುವೆ ಅಪ್ಪ ಅಮ್ಮ ಯಾರು ಎಂದೇ ತಿಳಿಯದವರ ಸಂಕಟದ ಆಳ ಅನುಭವಿಸಿದವರಿಗಷ್ಟೇ ಗೊತ್ತು. ಹೆತ್ತವರೆಂದು ಭಾವಿಸಿದವರೇ ಹೆತ್ತವರಲ್ಲ ಎಂದು ತಿಳಿದಾಗ, ಅದರಲ್ಲೂ ಹೆತ್ತವರೆಂದು ತಿಳಿದವರಿಗೂ ಅದರ ಬಗ್ಗೆ ತಿಳಿಯದಿರುವಂಥಾ ಪರಿಸ್ಥಿತಿ ನಿರ್ಮಾಣವಾದರೆ ಏಳುವ ಪ್ರಶ್ನೆಗಳು ಬಹಳ. ಬರುವ ನೋವು, ಆಗುವ-ಸಂಕಟ ಅಗಾಧ. ಹಾಗಾದಾಗ ಮೊದಲೆಲ್ಲಾ ವೈಜ್ಞಾನಿಕ ವಿಧಾನದಿಂದ ತಮ್ಮ ನಿಜವಾದ ಅಪ್ಪ ಅಮ್ಮ ಯಾರು ಎಂದು ತಿಳಿಯಲು ಸಾಧ್ಯವಿರಲಿಲ್ಲ. ಈಗ ವಿಜ್ಞಾನ ಮುಂದುವರೆದಂತೆ ಡಿ.ಎನ್.ಎ.ಟೆಸ್ಟ್ ಮೂಲಕ ಅದನ್ನೂ ತಿಳಿಯಲು ಸಾಧ್ಯವಿದೆ. ಅಂಥಾ ಸಂದರ್ಭ ಬಂದು ಅದರ ಹಿಂದೆ ಹೋದಾಗ ಎಂತೆಂಥಹಾ ರೋಚಕ ಸನ್ನಿವೇಶಗಳು ಎದುರಾಗುತ್ತವೆ? ಮತ್ತು ಅದರ ಪರಿಹಾರಕ್ಕೆ ನಿಜವಾದ ವಿದ್ಯಾವಂತರಾದವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಕಷ್ಟಕರ ಸನ್ನಿವೇಶಗಳನ್ನು ತಿಳುವಳಿಕೆಯಿಂದ ಹೇಗೆ ಪರಿವರ್ತಿಸಿಕೊಳ್ಳಬಹುದು? ಎನ್ನುವ ಕಥಾವಸ್ತುವೇ ಈ ಕಾದಂಬರಿಯದ್ದು. ಜೊತೆಗೆ ಮಲೆನಾಡಿನ ಬದುಕಿನೊಂದಿಗೆ ಕಪ್ಪುಚಿನ್ನ ಎಂದು ಹೆಸರು ಪಡೆದ ಕಾಳುಮೆಣಸಿನ ರೋಚಕ ಇತಿಹಾಸವೂ ಅಡಕವಾಗಿದೆ.


ಇದು ಮಂಗಳ ವಾರಪತ್ರಿಕೆಯಲ್ಲಿ 'ಶೋಧ' ಎಂಬ ಹೆಸರಿನಲ್ಲಿ ಹರಿದು ಬಂದ ಜನಪ್ರಿಯ ಧಾರಾವಾಹಿ.

 

- ಗಿರಿಮನೆ ಶ್ಯಾಮರಾವ್

 

ಪುಟಗಳು : 264

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
D
Durga Prasad
pajsPDN 0Y OI

Asd

n
narasimha murthy
ಈ ಪುಸ್ತಕ ತಪ್ಪಿಸಿಕೊಳ್ಳಬೇಡಿ

ಈ ಲೇಖಕರನ್ನು ನಾನು ಸುಮಾರು 5/6 ವರ್ಷಗಳ ಕೆಳಗೆ ಯಾವುದೋ ಸಾಹಿತ್ಯ ಸಮ್ಮೇಳನದಲ್ಲಿ ಬೇಟಿ ಆಗಿದ್ದೆ, ಅತಿ ಹೆಚ್ಚು ಓದಿದ್ದು ಮತ್ತು ವಿಶ್ವದ ಪ್ರಮುಖ ಸಾಹಿತ್ಯವನ್ನು ಕನ್ನಡದಲ್ಲಿ ಓದಿದ್ದ ನನಗೆ ತುಂಬಾ ಲೇಖಕರ ಬಗ್ಗೆ ಒಂದು ಅನಾದರ ಬೆಳೆದಿತ್ತು.
ಆದರೆ ನಿನ್ನೆ ಇವರ ಗಿರಿಕಂದರ ವನ್ನ ಓದಿದ ಮೇಲೆ ನಾನು ಎಂಥ ಮೂಡ ಅಂತ ಅರ್ಥ ಆಯಿತು.
ಮೊದಲಿಗೆ ಇಂಥ ಕಥಾಹಂದರ ಆರಿಸಿಕೊಂಡರು ಕೂಡ ಎಲ್ಲಿಯೂ
ಒಂದು ಚೂರೂ ಬೇಸರ ವಿಲ್ಲದೆ ಗಟ್ಟಿಯಾದ ನಿರೂಪಣೆಗೆ ಒಂದು ದೊಡ್ಡ ಸಲಾಂ.
ಎಲ್ಲಿಯೂ ಹೆಚ್ಚಿಲ್ಲ ಎಲ್ಲಿಯೂ ಕಡಿಮೆ ಇರದಂತೆ ಒಂದು ಸುಂದರ ಗ್ರೀಕ್ ಶಿಲ್ಪದಂತೆ ಕಥೆ ಕೆತ್ತಿದ್ದಾರೆ.
ತಪ್ಪದೆ ಓಧಿ ನಿಮಗೆ ಒಂದು ಒಳ್ಳೆ ರಸಗವಳ ಗ್ಯಾರಂಟಿ..

M
Muhammad Aslam Al-Mueeni
ಡಿಎನ್ಎ ಪರೀಕ್ಷೆಯಲ್ಲಿ ನಿಜಾಂಶವನ್ನು ತಿಳಿದ ಮಗ. ಬಡತನದಲ್ಲಿ ಬೆಳೆದ ಹೆಣ್ಣು ಮಕ್ಕಳು. ಕಾಳು ಮೆಣಸಿನ ಪರಿಚಯ.

ಮಲೆನಾಡಿನ ರೋಚಕ ಕತೆಗಳು ಹತ್ತನೇ ಭಾಗವೇ ಗಿರಿಕಂದರ ಎಸ್ಟೇಟ್. ಗಿರಿಮನೆ ಶ್ಯಾಮರಾವ್ ರವರ ಕೃತಿಗಳನ್ನು ಎಲ್ಲರೂ ಓದಲೇ ಬೇಕು. ಮೊದಲು ಅರಮನೆ ಗುಡ್ಡದ ಕರಾಳ ರಾತ್ರಿಗಳು ಕೃತಿ ಓದಿದ ನನಗೆ ಗಿರಿಮನೆಯವರ ಎಲ್ಲಾ ಕೃತಿಗಳನ್ನು ಓದಿ ಮುಗಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೃತಿ ಗಿರಿಕಂದರ ಎಸ್ಟೇಟ್ ಓದಿ ಮುಗಿಸಿದೆ. ಆಸ್ತಿಯ ಆಸೆಗಾಗಿ ಮಕ್ಕಳನ್ನು ಅದಲು ಬದಲು ಮಾಡಿದ ತಂದೆ. ಡಿಎನ್ಎ ಪರೀಕ್ಷೆಯ ಮೂಲಕ ತಾನು ಯಾರೆಂಬ ನಿಜಾಂಶವನ್ನು ತಿಳಿದ ಮಗ. ಬಡತನದ ಮೂಲಕ ಬೆಳೆದು ವಿದ್ಯೆ ಕಲಿತ ಹೆಣ್ಣು ಮಕ್ಕಳು. ಕಾಳು ಮೆಣಸಿನ ಕುರಿತ ಸಂಕ್ಷಿಪ್ತ ಪರಿಚಯ. ಕಾದಂಬರಿಯು ರೋಚಕವಾಗಿದೆ. ಎಲ್ಲವೂ ಇಷ್ಟವಾಯಿತು.