
ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಓದಿದವರು:
ಅನಿಕೇತ್ ಶ್ರೀವತ್ಸ
ಬೆಂಗಳೂರು
ಆಡಿಯೋ ಪುಸ್ತಕದ ಅವಧಿ : 3 ಗಂಟೆ 27 ನಿಮಿಷ
ಶಾಸ್ತ್ರ ಮತ್ತು ಸಂಪ್ರದಾಯಗಳು
ಅನವಶ್ಯವಾದ ಶಾಸ್ತ್ರ-ಸಂಪ್ರದಾಯಗಳ ಬಗ್ಗೆ ತಿಳಿದರೆ ಅವಶ್ಯವಾದ್ದನ್ನು ಮಾತ್ರ ಆಚರಿಸಲು ಸುಲಭವಾಗುತ್ತದೆ. ದೇವರ ಹೆಸರಿನಲ್ಲಿ ನಿರ್ಮಿಸಿದ ಶಾಸ್ತ್ರ-ಸಂಪ್ರದಾಯಗಳೆಲ್ಲವನ್ನೂ ತಿಳಿದವರೇ ಮಾಡಿದ್ದಲ್ಲ. ವಿಭಾಗ ಮಾಡಲು ತಿಳಿಯದಿದ್ದರೆ ಭಯ ಕಾಡುತ್ತದೆ. ಭಯವನ್ನು ಹುಟ್ಟುಹಾಕುವವರಿರುತ್ತಾರೆ. ಒಂದು ವಿಷಯ ತಪ್ಪಾಗಿ ಮನಸ್ಸಿನೊಳಗೆ ಕುಳಿತರೆ ಮತ್ತೆ ಅದನ್ನು ಅಲ್ಲಿಂದ ಕದಲಿಸಲು ವಿಶೇಷ ಪ್ರಯತ್ನ ಮಾಡಬೇಕು. ಅವೈಜ್ಞಾನಿಕ ಶಾಸ್ತ್ರಗಳು, ಅನವಶ್ಯಕವಾದ ಸಂಪ್ರದಾಯಗಳು ಎಂದಿಗೂ ಭಯ ಮತ್ತು ದು:ಖಕ್ಕೆ ಕಾರಣವಾಗಿ ದುರುಪಯೋಗಕ್ಕೂ ಆಸ್ಪದ ಕೊಡುತ್ತದೆ. ಅವೆಲ್ಲದರ ಒಳಹೊರಗು ತಿಳಿದರೆ ಯಾರೇನು ಹೇಳಿದರೂ ಬಿಟ್ಟರೂ ನಮಗಿಷ್ಟವಾದ್ದನ್ನು ಆರಿಸಿಕೊಳ್ಳಬಹುದು. ವೈಜ್ಞಾನಿವಾಗಿ ವೇದ ಹೇಳುವ ಶಾಸ್ತ್ರ-ಸಂಪ್ರದಾಯಗಳು ಯಾವುದು? ಮತ್ತು ಪುರಾಣಗಳು ಹಾಗೂ ಟಿ.ವಿ. ವೇಷಧಾರಿಗಳು ಹೇಳುವ ಶಾಸ್ತ್ರ-ಸಂಪ್ರದಾಯಗಳು ಯಾವುವು? ಎಂದು ತಿಳಿದರೆ ಅದು ಸುಲಭ. ಸತ್ಸಂಪ್ರದಾಯ ತಿಳಿಯದೆ ಸಂಪ್ರದಾಯ ಪಾಲನೆ ಮಾಡುವವರೆಲ್ಲಾ ಶ್ರೇಷ್ಠರು ಎಂಬ ತಪ್ಪು ಅಭಿಪ್ರಾಯವೂ ಇದೆ. ಶಾಸ್ತ್ರ-ಸಂಪ್ರದಾಯಗಳೆಂದರೇನು? ಕಷ್ಟ-ನಷ್ಟಕ್ಕೊಳಗಾಗದಂತೆ ಯಾವ ಶಾಸ್ತ್ರ-ಸಂಪ್ರದಾಯ ಪಾಲಿಸಬೇಕು? ದೇವರಿಗೂ ಶಾಸ್ತ್ರ ಇದೆಯಾ? ಎಲ್ಲಕ್ಕೂ ಉತ್ತರ ಬೇಕು. ನಮಗೂ ಅರ್ಥವಾಗಬೇಕು. ತಿಳಿದವರೆಂದು ಭಾವಿಸಿದವರು ತಾವೇ ತಿಳಿಯದೆ ನೂರೊಂದು ಹೇಳಿದರೆ ಮಾಡುವುದಾದರೂ ಏನು? ಆದರೆ ನಮ್ಮ ಅದೃಷ್ಟ ಅಷ್ಟು ಕೆಟ್ಟದಿಲ್ಲ! ಏಕೆಂದರೆ ನಮ್ಮ ಹಿಂದೆ ವೇದ ಇದೆ. ಅದೇ ಎಲ್ಲವನ್ನೂ ತಿಳಿಸಿಕೊಡುತ್ತದೆ. ನಿಗೂಢ, ಸಂಶಯ ಹುಟ್ಟಿಸುವ, ಪ್ರಶ್ನೆಗಳಿಗೆ ಉತ್ತರವಿಲ್ಲದ ಯಾವುದೂ ವೇದದ್ದಲ್ಲ. ಅದನ್ನು ಅಳತೆಗೋಲು ಮಾಡಿಕೊಂಡು ಎಲ್ಲದರ ಬಗ್ಗೆಯೂ ವಿಚಾರ ಮಾಡಿದರೆ ಯಾರಿಗೂ ಭಯ, ಕಷ್ಟ-ನಷ್ಟಗಳಿಲ್ಲ. ಸರಿದಾರಿಯನ್ನು ಅದೇ ತೋರಿಸುತ್ತದೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.