
ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಬರಹಗಾರರು: ಗಿರಿಮನೆ ಶ್ಯಾಮರಾವ್
ಬದುಕಿನ ಅನುಭವ ಕಮ್ಮಿಯಾಗಿ ವೃತ್ತಿ ಶಿಕ್ಷಣ ಅಂದರೆ ಹಣಸಂಪಾದನೆಯ ವಿದ್ಯೆ ಮಾತ್ರ ದೊರೆಯುವುದು ಹೆಚ್ಚುತ್ತಿದ್ದಂತೆ ವಿಚಾರವಂತಿಕೆಯೂ ಕಮ್ಮಿಯಾಗುತ್ತದೆ. ಅದರ ಪರಿಣಾಮ ಬದುಕಿನ ಮೇಲಾಗುತ್ತದೆ. ಸಂಪಾದನೆ, ಸ್ವಾವಲಂಬನೆಯ ಭಾವ ಹುಟ್ಟು ಹಾಕುತ್ತದೆ. ಇವೆಲ್ಲದರ ಸಹಕಾರದಿಂದ ವೈರುಧ್ಯ ಗುಣ ಸ್ವಭಾವಗಳು ದಾಂಪತ್ಯವನ್ನು ವಿಚ್ಛೇದನತ್ತ ದೂಡಲು ನೋಡುತ್ತದೆ. ಸಣ್ಣ ಕಾರಣಗಳೂ ದೊಡ್ಡ ಕಾರಣಗಳಂತೆ ಭಾಸವಾಗಿ ತೀರ ಅಗತ್ಯದ ಸಂದರ್ಭಲ್ಲಿ ಮಾತ್ರ ಪಡೆಯಬೇಕಾದ ವಿಚ್ಛೇದನವನ್ನು ಕಾನೂನಿನ ನೆರವಿದೆ ಎಂದುಕೊಂಡು ಸಣ್ಣ ಕಾರಣಕ್ಕೂ ಪಡೆಯುವ ಜನ ಅಧಿಕವಾಗುತ್ತಿದ್ದಾರೆ. ಮಕ್ಕಳಾದ ನಂತರ ವಿಚ್ಛೇದನ ಪಡೆದರೆ ಆ ಮಗುವಿನ ಮನಃಸ್ಥಿತಿ ಹೇಗಿರುತ್ತದೆ ಎಂಬ ಕಲ್ಪನೆ ಆಗ ಬರುವುದೇ ಇಲ್ಲ. ಮುಂದೆ ಅನುಭವಿಸಿದಾಗ ತಿಳಿಯುತ್ತದೆ. ಆದರೆ ಅದರಿಂದ ಸಿಗಬಹುದು ಎಂದು ಭಾವಿಸಿದ ನೆಮ್ಮದಿ ಸಿಗುತ್ತದಾ? ಮಗುವಿನ ಬದುಕು ಎಂಥಾ ಕಷ್ಟಕ್ಕೆ ಸಿಲುಕಬಹುದು? ಸಣ್ಣ ಕಾರಣಕ್ಕೂ ವಿಚ್ಛೇದನದ ಯೋಚನೆ ಮಾಡಲು ನೋಡುವ ದಂಪತಿಗಳನ್ನು ಯೋಚನೆಗೆ ಹಚ್ಚಲು ಈ ಕೃತಿಯನ್ನು ಬರೆದಿದ್ದೇನೆ. ಇದೊಂದು ಮನೋವೈಜ್ಞಾನಿಕ ಕಾದಂಬರಿ.