Click here to Download MyLang App

ಸಂಧ್ಯಾರಾಗ,   ಅನಕೃ,  ಅ.ನ.ಕೃಷ್ಣರಾಯರು,  ಅ ನ ಕೃ,  sandyaraga,  sandyaraaga,  sandya raga,  sandya raaga,  Sandhyaraga,  sandhya raga,  aa na kru,  A.Na. Krishnaraya,  a n krishna rao,

ಸಂಧ್ಯಾರಾಗ (ಇಬುಕ್)

e-book

ಪಬ್ಲಿಶರ್
ಅ.ನ.ಕೃಷ್ಣರಾಯರು
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE


ಒಮ್ಮೆ ಕನ್ನಡದ ಕಟ್ಟಾಳು ಅ ನ ಕೃಷ್ಣರಾಯರು ತಮ್ಮ ಸ್ನೇಹಿತರನ್ನು ನೋಡಲು ಹೋಟೆಲಿಗೆ ಹೋಗಿದ್ದರು. ಹೋಟೆಲಿಗೆ ಹೋದಾಗ ಮುಖ್ಯದ್ವಾರದಲ್ಲಿದ್ದ ಹೋಟೆಲಿನ ಮಾಲೀಕರು ಎದ್ದು ನಿಂತು ಅನಕೃರವರನ್ನು ಕಂಡು ಗೌರವದಿಂದ ನಮಸ್ಕರಿಸಿದರು. ನಂತರ ಅನಕೃ ತಮ್ಮ ಸ್ನೇಹಿತನಿದ್ದ ಕೋಣೆಗೆ ಹೋದರು.

ಹೀಗೆ ಕೋಣೆಯಲ್ಲಿ ಸ್ನೇಹಿತನ ಜೊತೆ ಉಭಯಕುಶಲೋಪರಿಯಲ್ಲಿ ತೊಡಗಿದ್ದಾಗ, ಸ್ನೇಹಿತನ ಕೋಣೆಗೆ ದೋಸೆ, ಸಿಹಿ , ಖಾರ , ಕಾಫಿ , ಬಾಳೆ ಹಣ್ಣು ಮತ್ತು ಬೀಡ ಬಂದವು. ಇದರಿಂದ ಆಶ್ಚರ್ಯಗೊಂಡ ಅನಕೃ ಗೆಳೆಯನಿಗೆ.
” ನೀವು ಹೇಳಿದ್ದೀರಾ ” ಎಂದು ಕೇಳಿದರು.
” ಇಲ್ಲವಲ್ಲ ” ಎಂಬ ಉತ್ತರವನ್ನು ಗೆಳೆಯರು ನೀಡಿದ ಸಂದರ್ಭದಲ್ಲಿ ಯೋಚಿಸುತ್ತಿದ್ದಾಗ ಹೋಟೆಲಿನ ಮಾಲೀಕರು ಬಂದು.
” ದಯವಿಟ್ಟು ತಗೆದುಕೊಳ್ಳಬೇಕು ” ಎಂದರು .
” ಇಷ್ಟು ತಿಂಡಿಯ ಅಗತ್ಯ ನನಗಿಲ್ಲ “ಎಂದು ಅನಕೃ ಹೇಳಿದಾಗ.
” ನೀವು ನನಗಾಗಿ ತಗೆದು ಕೊಳ್ಳಲೇ ಬೇಕು ” ಎಂದು ಹೇಳಿದರು.
ಕಡೆಗೆ ಬೇರೆ ದಾರಿ ಕಾಣದೆ ಅನಿವಾರ್ಯದಿಂದ ಅನಕೃ ಮತ್ತು ಅವರ ಮಿತ್ರರು ಉಪಹಾರ ಮುಗಿಸಿದ ಮೇಲೆ ಇದೆಲ್ಲ ಏಕೇ ಎಂದು ಹೋಟೆಲ್ ಮಾಲೀಕರಿಗೆ ಪ್ರಶ್ನಿಸಿದರು.
” ನಿಮ್ಮಿಂದ ನನಗೆ ಉಪಕಾರವಾಗಿದೆ ” ಎಂದು ಹೋಟೆಲ್ ಮಾಲೀಕರು ಎನ್ನಲು.
” ನಿಮ್ಮ ಪರಿಚಯ ನನಗಿಲ್ಲವಲ್ಲ ” ಎಂದು ಅನಕೃ ಆಶ್ಚರ್ಯ ವ್ಯಕ್ತಪಡಿಸಿದರು.
” ನಿಮ್ಮ ಪರಿಚಯ ನನಗಿದೆ. ನಿಮ್ಮ ‘ ಸಂಧ್ಯಾ ರಾಗ ‘ ನನ್ನ ಬಾಳನ್ನು ತಿದ್ದಿತು” ಎಂದು ಮಾಲೀಕರು ಹೇಳಲು.
” ಹೇಗೆ ” ಎಂದು ಅನಕೃ ಕೇಳಿದರು.
” ನಾನು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಇಲ್ಲಿಗೆ ಬಂದೆ. ನನ್ನ ತಾಯಿಯನ್ನು ಸಹ ನಿರ್ಲಕ್ಷ್ಯ ಮಾಡಿದೆ. ಮನೆ ಮತ್ತು ಮನೆಯವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಒಮ್ಮೆ ನನ್ನ ಸ್ನೇಹಿತರೊಬ್ಬರು ನಿಮ್ಮ ಸಂಧ್ಯಾರಾಗ ಕಾದಂಬರಿಯನ್ನು ನನಗೆ ನೀಡಿದರು. ಕಾದಂಬರಿಯಲ್ಲಿ ಬರುವ ಪಾತ್ರಗಳು ನನ್ನ ಮನಸ್ಸನ್ನು ಬದಲಿಸಿದವು. ಕೊಡಲೇ ಊರಿಗೆ ಹೋಗಿ ತಾಯಿಯ ಹತ್ತಿರ ಕ್ಷಮೆ ಕೇಳಿ , ಮನೆಯವರ ಹತ್ತಿರ ರಾಜಿ ಮಾಡಿಕೊಂಡೆ “
ಎಂದು ಮಾಲೀಕರು ಕೃತಜ್ಞತೆ ಸಲ್ಲಿಸಿದರು.
ಕಡೆಗೆ ಮಾಲೀಕರು ಅನಕೃರವರನ್ನು ಸಂತೋಷದಿಂದ ಬಿಳ್ಕೊಟ್ಟರು.

ಅನಕೃ ಅವರ ಈ ನಿದರ್ಶನ , ಒಂದು ಪುಸ್ತಕ ಮಾನವನ ಜೀವನ ಶೈಲಿಯನ್ನೇ ಬದಲಿಸುತ್ತದೆ ಎನ್ನಲು ಸಾಧ್ಯ.

- ವಿಸ್ಮಯ ಜಗತ್ತು ಬ್ಲಾಗ್ ವಿಮರ್ಶೆ

 

ಪುಟಗಳು: 152

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ ! 

 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
ಶಿವಶಂಕರಪ್ಪ ಮಂಡಗಳ್ಳಿ
ಅದ್ಭುತವಾದ ಕಾದಂಬರಿ

ತುಂಬಾ ಚೆನ್ನಾಗಿ ಮೂಡಿ ಬಂದಿದೆ

ಪೂಜಾ ಹೆಗಡೆ
ಅಧ್ಭುತ

ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಧ್ಭುತವಾಗಿದೆ. ಕಣ್ಣು ಮುಚ್ಚಿ ಖರೀದಿಸಬಹುದು.

ಅಂಬಿಕಾ ಆರ್
ಸುಲಭವಾಗಿ ಓದಿಸಿಕೊಂಡು ಹೋಗುವ ಸುಂದರ ವಾದ ಕಥೆಯ ಉತ್ತಮ ಕೃತಿ ಸಂಧ್ಯಾರಾಗ.

ಸಂಧ್ಯಾರಾಗ
ಅ . ನಾ. ಕೃಷ್ಣ ರಾವ್
ಒಬ್ಬ ಸಂಗೀತಗಾರನ ಕಲಿಕೆಯ ಬಗ್ಗೆ ಅ.ನಾ.ಕೃ ಅವರು ಬರೆದಿರುವ ಉತ್ತಮ ಕೃತಿ. ಅಂತಹ ಮಹನೀಯರ ಪುಸ್ತಕವನ್ನು ವಿಮರ್ಶೆ ಮಾಡುವುದು ಅಸಾಧ್ಯದ ಮಾತು.
ಅ.ನಾ.ಕೃ ಅವರು ಸಂಗೀತವನ್ನು ಕಲಿತಿಲ್ಲ ದಿದ್ದರೂ ಅದರ ಬಗ್ಗೆ ಅಪಾರ ಗೌರವ, ಆಸಕ್ತಿ ಮತ್ತು ಜ್ಞಾನವನ್ನು ಹೊಂದಿದ್ದಾರೆಂದು ಈ ಪುಸ್ತಕ ಓದಿ ತಿಳಿಯಬಹುದು. ಅವರು ಕೊಟ್ಟಿರುವ ರಾಗಗಳು, ಕೀರ್ತನೆಗಳು, ದೇವರನಾಮಗಳನ್ನು ಓದಿದರೆ ಒಂದು ಸಂಗೀತ ಕಛೇರಿಯನ್ನು ಕೇಳಿದಂತೆ ಅನಿಸುತ್ತದೆ.
ಆಗಿನ ಕಾಲದ ಗೌರವಾನ್ವಿತ ಸಂಸಾರದ ಕಥೆಯಲ್ಲಿ ಒಂದೊಂದು ಪಾತ್ರಗಳು ಚೆನ್ನಾಗಿ ಕಥೆಯೊಡನೆ ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬರೂ ಬೇರೆ ಬೇರೆ ವಿಷಯದಲ್ಲಿ ಆಸಕ್ತಿ ಹೊಂದಿರುವುದು ಐದು ಬೆರಳು ಒಂದೇ ರೀತಿ ಇರುವುದಿಲ್ಲ ಎಂದು ತೋರಿಸುತ್ತದೆ.
ರಾಯರು ಹೆಂಡತಿಯ ಮೇಲೆ ಇಟ್ಟುಕೊಂಡಿರುವ ಪ್ರೀತಿ, ಲಕ್ಷ್ಮಣನ ತನ್ನ ಹೆಂಡತಿಯ ಮೇಲಿನ ಪ್ರೀತಿ ನೋಡಿದಾಗ ಮನತುಂಬಿ ಬರುತ್ತದೆ. ಸಂಗೀತ ಕಲಿಯಲು ಲಕ್ಷ್ಮಣ ಪಡುವ ಕಷ್ಟ , ಅವನ ಧಾರಾಳತನ, ವಿರಕ್ತ ಓದಿದಾಗ "ವಿದ್ಯಾ ದದಾತಿ ವಿನಯಂ " ಎಂಬ ಮಾತು ನೆನಪಾಗುತ್ತದೆ.
ಸುಲಭವಾಗಿ ಓದಿಸಿಕೊಂಡು ಹೋಗುವ ಸುಂದರ ವಾದ ಕಥೆಯ ಉತ್ತಮ ಕೃತಿ ಸಂಧ್ಯಾರಾಗ.