
ಬರಹಗಾರರು: ಎಸ್ ದಿವಾಕರ್
ಹಿರಿಯ ಕತೆಗಾರ, ವಿಮರ್ಶಕರಾದ ಎಸ್.ದಿವಾಕರ್ ಅವರು ಮೊದಲಿನಿಂದಲೂ ಕನ್ನಡಕ್ಕೆ ಪಾಶ್ಚಾತ್ಯ ಲೇಖಕರನ್ನು ಪರಿಚಯಿಸಿಕೊಂಡೇ ಬಂದವರು. ನೊಬೆಲ್ ವಿಜೇತರ ಪರಿಚಯದ ಜೊತೆಗೆ ಅವರ ಕತೆಗಳನ್ನೂ ನಮಗೆ ಕೊಟ್ಟವರು. ವಿಶ್ವದ ಅತಿಸಣ್ಣಕತೆಗಳ ಅಪೂರ್ವ ಸಂಕಲನ ಕನ್ನಡಕ್ಕೆ ದಕ್ಕಿದ್ದೂ ಅವರ ಪರಿಶ್ರಮಸಹಿತ ಪ್ರತಿಭೆಯಿಂದಾಗಿಯೇ. ಈ ಸಂಕಲನದಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಹಲವು ದೇಶಗಳ ಅತಿಸಣ್ಣಕತೆಗಳನ್ನು ಆಯ್ದು ಅನುವಾದಿಸಿ ಕೊಟ್ಟಿದ್ದಾರೆ. ಇದು ಕನ್ನಡಕ್ಕೆ ದಿವಾಕರ್ ನೀಡಿರುವ ಬಹುಮುಖ್ಯ ಕೊಡುಗೆಯೂ ಹೌದು.