Click here to Download MyLang App

ನಿಗೂಢ ನಾಣ್ಯ (ಇಬುಕ್) - MyLang

ನಿಗೂಢ ನಾಣ್ಯ (ಇಬುಕ್)

e-book

ಪಬ್ಲಿಶರ್
ವಿಠಲ್ ಶೆಣೈ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 ಲೇಖಕರು: ವಿಠಲ್ ಶೆಣೈ

  1. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ವಿವೇಕ್, ಭಾರತಕ್ಕೆ ಹಿಂತಿರುಗಿ ಬಂದು ಪ್ಲಸ್ ಮನಿ ಎಂಬ ತನ್ನದೇ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದಾನೆ. ಆದರೆ ಅಕ್ರಮವಾಗಿ ಬಿಟ್ ಕಾಯಿನ್ ಏಟಿಎಂ ತೆರೆದ ಆರೋಪದಲ್ಲಿ ಈಗ ಜೈಲು ಪಾಲಾಗಿದ್ದಾನೆ.  ಅವನು ಮಾಡಿದ ತಪ್ಪಾದರೂ ಏನು? ಅವನ ಮುಂದಿನ ದಾರಿಯೇನು? 
  2. ಸೂರಜ್ ಎಂಬ ರಿಯಲ್ ಎಸ್ಟೇಟ್ ಮ್ಯಾಗ್ನೆಟ್ ಗೆ ತನ್ನ ಬಳಿ ಇರುವ ಕಪ್ಪು ಹಣವನ್ನು ಮರೆಮಾಚಿ ಇಡುವ ಚಿಂತೆ. ಅವನ ಅಕ್ಕನ ಮಗ ಪೃಥ್ವಿಗೆ ಬೈಕ್ ಡೀಲರ್ ಶಿಪ್ ತೆರೆಯಲು ದುಡ್ಡು ಬೇಕಾಗಿದೆ. ವಿವೇಕ್ ಗೆ ತನ್ನ ಮೇಲಿನ ಆರೋಪವನ್ನು ಅಲ್ಲಗಳೆಯಬೇಕಾಗಿದೆ. ಉಮಾಗೆ ತಾನು ಕೈ ಹಾಕಿದ ಕೇಸ್ ಗೆ ವಿವೇಕ್ ನ ಸಹಾಯ ಬೇಕಾಗಿದೆ. ಯಾರು ಗೆಲ್ಲುತ್ತಾರೆ? ಯಾರು ತಮ್ಮ ಗುರಿ ತಲುಪುತ್ತಾರೆ? 
  3. ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ಪ್ರೇಮ್ ಮತ್ತು ಉಮಾ ಕೇವಲ ಹನ್ನೆರಡು ನಿಮಿಷಗಳಲ್ಲಿ ಕೋಟ್ಯಧಿಪತಿಗಳಾಗುವ ಸಾಧ್ಯತೆಗಳು ಅವರ ಮುಂದೆ ಬಂದು ಒದಗಿದೆ.  ಹೇಗೆ? ಯಾವ ರೀತಿಯಲ್ಲಿ? ಅದರಲ್ಲಿ ರಿಸ್ಕ್ ಇಲ್ಲವೇ?
  4. 1968ನೆಯ ಇಸವಿಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 16 ರೂಪಾಯಿಯಾಗಿತ್ತು. ಆಗ 16 ರೂಪಾಯಿಗೆ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತಿತ್ತು. ಆದರೆ ಇವತ್ತು 16 ರೂಪಾಯಿಗೆ ಒಂದು ಕಪ್ ಚಹಾ ಕೂಡಾ ಸಿಗಲಿಕ್ಕಿಲ್ಲ. ಆದರೆ ಒಂದು ಗ್ರಾಂ ಚಿನ್ನವನ್ನು ಮಾರಿದರೆ ಅದೇ ಐದು ಕೆ.ಜಿ ಅಕ್ಕಿ, ಎರಡು ಕೆ.ಜಿ ಸಕ್ಕರೆ, ಸಿನೆಮಾ ಟಿಕೆಟ್ ಎಲ್ಲವೂ ಸಿಗುತ್ತದೆ. ರೂಪಾಯಿಯ ಮೌಲ್ಯ ಯಾಕೆ ಕುಸಿದಿದೆ? ಚಿನ್ನದ ಬೆಲೆ ಯಾಕೆ ಗಗನಕ್ಕೇರಿದೆ? 

ಮೇಲಿನ ನಾಲ್ಕು ಪ್ರಶ್ನೆಗಳನ್ನು ಓದಿದ ಮೇಲೆ ಕೆರಳಿರುವ ನಿಮ್ಮ ಕುತೂಹಲ ಪುಸ್ತಕ ಓದಿಯೇ ತಣಿಯಬೇಕು ! 

ಬಂದಿದೆ ಬ್ಲಾಕ್ ಚೇನ್, ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಂತಹ ದುಡ್ಡಿನ ಕುರಿತ ನಮ್ಮ ನಂಬಿಕೆ, ತಿಳುವಳಿಕೆಯನ್ನು ಅಲುಗಾಡಿಸುವ ತಂತ್ರಜ್ಞಾನದ ಸುತ್ತ ಹೆಣೆಯಲಾದ ಹೊಚ್ಚ ಹೊಸ ಕಾದಂಬರಿ "ನಿಗೂಢ ನಾಣ್ಯ" 

 

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 


Customer Reviews

Based on 7 reviews
57%
(4)
43%
(3)
0%
(0)
0%
(0)
0%
(0)
C
Customer
Bitcoin ಬಗೆಗಿನ ಸರಳ ವ್ಯಾಖ್ಯಾನ

ಸಾಮಾನ್ಯ ಜನರಿಗೂ ಅರ್ಥ ಆಗುವ ಹಾಗೆ Bitcoin ಮತ್ತು blockchain ಬಗ್ಗೆ ಲೇಖಕರು ವಿವರಿಸಿದ್ದಾರೆ

ಅ.ಅ.ಕ.
Crypto ಬಗ್ಗೆ ತಿಳಿಯಲು ಒಳ್ಳೆಯ ಪುಸ್ತಕ

Crypto ಕರೆನ್ಸಿ, Block chain ಬಗ್ಗೆ ತಿಳಿಯಲು ಒಂದು ಒಳ್ಳೆಯ ಪುಸ್ತಕ. ಎಲ್ಲೂ ಕೂಡ ಓದುಗರಿಗೆ confuse ಆಗದ ರೀತಿಯಲ್ಲಿ ಒಂದು ಸಸ್ಪೆನ್ಸ್ ಸಿನಿಮಾ ಕಥೆ ಶೈಲಿಯಲ್ಲಿ ತಿಳಿಸಿರುವುದು ಬಹಳ ಮೆಚ್ಚತಕ್ಕದ್ದು. Crypto ಬಗ್ಗೆ ಕನ್ನಡದಲ್ಲಿ ಸುಲಭವಾಗಿ ತಿಳಿಯಲು ಓದಿ.

N
Nithin D

ನಿಗೂಢ ನಾಣ್ಯ (ಇಬುಕ್)

N
Neminath
Wonderful Book

Wonderful explanation related to bitcoin ,economic, money. I never felt I was reading book , it's like watching movie very interesting things throughout the book.

C
Customer
Bitcoin and economy

Good story that describes origin of Bitcoin with dash of history of money.