Click here to Download MyLang App

ಸಮಗ್ರ ಅಚ್ಚಗನ್ನಡ ಕಾವ್ಯ,  ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು,  ನುಡಿವಣಿಗಳು,   Samagra Achagannada Kavya,  Kolambe Puttanna Gowda,

ಸಮಗ್ರ ಅಚ್ಚಗನ್ನಡ ಕಾವ್ಯ (ಇಬುಕ್)

e-book

ಪಬ್ಲಿಶರ್
ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು
ಮಾಮೂಲು ಬೆಲೆ
Rs. 239.00
ಸೇಲ್ ಬೆಲೆ
Rs. 239.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಶ್ರೀಮಾನ್ ಕೊಳಂಬೆ ಪುಟ್ಟಣ್ಣ ಗೌಡರು ವಿನಯವಂತ ವಿದ್ವಾಂಸರು. ಅವರ ''ಕಾಲೂರ ಚೆಲುವೆ”ಗೆ ನನ್ನ ನುಡಿತೊಡವು ಬೇಕೆಂದರು. ಅದೇಕೋ? ನನ್ನ ತೊಡವಿಲ್ಲದೆಯೇ “ಕಾಲೂರ ಚೆಲುವೆ” ಸಹಜ ಸೌಂದರ‍್ಯದಿಂದ ಶೋಭಿಸುತ್ತಿದ್ದಾಳೆ. ಇರಲಿ,

ಕೃತಿಯ ಮುಂಚಿತವಾಗಿ ಕೊಟ್ಟಿರುವ ಕಥಾಸಾರದಲ್ಲಿ ವಸ್ತು ಪಾತ್ರ ಸನ್ನಿವೇಶಗಳ ಪರಿಚಯವನ್ನು ಕವಿಗಳೇ ಚೆಲುವಾಗಿ ಮಾಡಿಕೊಟ್ಟಿರುತ್ತಾರೆ. ಈ ನೀಳ್ಗವಿತೆಯಲ್ಲಿ ಮಲೆನಾಡಿನ ಹಳ್ಳಿಯ ಕುಟುಂಬದ ಎರಡು ತಲೆಮಾರಿನ ಜೀವನ ಚಿತ್ರವೊಂದು ಅಡಕವಾಗಿದೆ. ಈ ಚಿತ್ರ ಜೀವಂತವಿದೆ. ಕವಿ ಪುಟ್ಟಣ್ಣ ಗೌಡರು ಅಂಥ ವಾತಾವರಣವನ್ನು ಕಣ್ಣಾರೆ ಕಂಡು ಅರಿತುಕೊಂಡ ಅನುಭವಸ್ಥ ರೆಂಬುದನ್ನು ನಾನಿಲ್ಲಿ ಹೇಳಿದರೆ ತಪ್ಪಾಗದು. ಇಂದಿನ ನಾಗರಿಕತೆಯ ಗಾಳಿ ಬೀಸದಿರುವ ಹಳ್ಳಿಮೂಲೆಗಳು ಇನ್ನೂ ಇರುತ್ತವೆ. ಆ ನಿಸರ್ಗವನ್ನು ನರರಾಕ್ಷಸ ರಂಥ ಅಧಮ ಅಧಿಕಾರಿಗಳು ಹೇಗೆ ಕಲುಷಿತಪಡಿಸಿ ದುರಂತಕ್ಕೆ ಬಡಜನರನ್ನು ದೂಡುವರೆಂಬುದು ಮರ್ಮಭೇದಕವಾಗಿ ವರ್ಣಿತವಾಗಿದೆ.

ಈ ಕವಿತೆಯಲ್ಲಿ ಪ್ರಕೃತಿ ವರ್ಣನೆ ಸುಂದರವಾಗಿ ಬಂದುಂಟು. ಒಂದೇ ಪದ್ಯದಲ್ಲಿ ಮಳೆಗಾಲವನ್ನು ಕಾಣುತ್ತೇವೆ.

ಕನಲಿದುದು ಬಿರುವೆಲರ್
ಮರಗಿಡಂ ಬಾನ್ನೆಲಂ
ತೊನೆದಾಡಿ ನಡುಗಿದುದು
ಮೊದಲಾಯ್ತು ಮಳೆಗೆ
ಒನಲುತಿರೆ ಕಾರ್ಮೋಡ
ಪನಿವಲರ್ ಚೆಲ್ಲಿದುದು
ಹೊನ್ನಾಗಿ ಹೊಲವಾಗಿ
ಬೆಚ್ಚಾಯ್ತು ಕೊನೆಗೆ ।। ೬೧ ।।

ಇಂಥವು ಅನೇಕ ಉದಾಹರಣೆಗಳಿವೆ. ಇನ್ನೊಂದು ಈ ಕೃತಿಯ ಸೊಬಗು ಇಲ್ಲಿ ಬಳಸಿರುವ ಹೊಸಹೊಸತಾದರೂ ಉತ್ತಮವಾಗಿರುವ ನುಡಿಗಟ್ಟು ಗಳು. ಅವುಗಳಲ್ಲಿ ಕೆಲವನ್ನು ಮಾತ್ರ ಉದಾಹರಿಸಬೇಕೆನಿಸುತ್ತದೆ-ಬಯಕೆದುರು, ಬೆಟ್ಟಳಿಯ, ಮೇಲ್ನೆಲ, ನುಡಿವುರುಳ್, ಮುಳ್ವಸೆ, ಬಗೆಗುದುರೆ, ಬೆಳ್ಮಿಂಚು, ದಾಂಟುಮರ, ಪದಿರಪರೆ, ಕೊಳ್ಳಿ ಹೇದೆ, ಪೊಂದಟ್ಟೆ , ಬಗೆಗಡಲ್ ಇತ್ಯಾದಿ.

ಈ ಕಥನ ಕವನದಲ್ಲಿ ಬರುವ ಪಾತ್ರಗಳಲ್ಲಿ ನಾಯಿಕೆ ಬೆಳ್ಳಿ , ಅವಳ ತಂದೆ ಕೊರಗ, ಅಣ್ಣ ಕಾಳು, ಮದುಮಗ ದೊಡ್ಡ, ಖಳನಾಯಕ ಬೋಳ ಪ್ರಮುಖ ರಾದವರು. ಇವರೆಲ್ಲ ವ್ಯಕ್ತಿಗಳಾಗಿಯೂ ಒಂದು ತೆರನಾದ ಆದರ್ಶಗಳಾಗಿಯೂ ಚಿತ್ರಿತರಾಗಿದ್ದಾರೆ. ಬೆಳ್ಳಿ ನಿಜವಾಗಿಯೂ ಮರೆಯಲಾಗದ ಹಳ್ಳಿಯ ಚೆಲುವೆ. ನಿಷ್ಕಪಟಿ. ಕುಟುಂಬದ ಮನೆತನದ ಗೌರವ ಖ್ಯಾತಿಗಳ ರಕ್ಷಾಮಣಿ. ಭಯಂಕರ ಜ್ವರದಲ್ಲಿ ನರಳುತ್ತಿದ್ದವಳು ತಂದೆಯ ಮಾನರಕ್ಷಣೆಗಾಗಿ ಓಡಿಬಂದು ಕಷ್ಟನಿಷ್ಠುರ ಹಿಂಸೆಗಳನ್ನು ಧೈರ್ಯದಿಂದ ಉಂಡು ತನ್ನ ಪಡೆದ ತಾಯ ತೆಕ್ಕೆಯನ್ನುಳಿದು ಮತ್ತೊಬ್ಬ ತಾಯ (ಭೂಮಾತೆ) ಬಳಿಸಾರಿದುದು ಕಣ್ಣೀರ ಹೊನಲಿಗೆ ನಾಂದಿ ಯಂತಿದೆ.

 

ಪುಟಗಳು: 564

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)