Click here to Download MyLang App

ಪರಿಸರದ ಕಥೆ (ಆಡಿಯೋ ಬುಕ್),Parisarada kate,  ಪರಿಸರದ ಕಥೆ,  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Tejaswi,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,  poornachandra thejasvi,  poornachandra tejeswi,  poornachandra tejeshwi,  poornachandra tejaswi,  poornachandra tejasvi,  poornachandra tejashvi,  poornachadra tejaswi,  poorna chandra thejaswi  poorna chandra thajaswi,

ಪರಿಸರದ ಕಥೆ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು : ರವಿ - ಧ್ವನಿಧಾರೆ ಮಿಡಿಯಾ ತಂಡ

ಆಡಿಯೋ ಪುಸ್ತಕದ ಅವಧಿ : 5 ಗಂಟೆ 59 ನಿಮಿಷ

 

ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ತೃಪ್ತಿ ಸಿಗಲಾರದು. ಅಥವಾ ನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕದಲ್ಲಿ ತೇಜಸ್ವಿಯವರು ಗುರುತಿಸಿ, ದಾಖಲಿಸಿರುವ ಪರಿಸರದ ವ್ಯಾಪಾರಗಳನ್ನು ಎಷ್ಟು ಬಾರಿ ಓದಿದರೂ ಬೇಸರವಾಗದು. ಬದಲಿಗೆ ಒಂದೊಂದು ಹೊಸ ಓದಿನಲ್ಲೂ, ಹೊಸ ಹೊಸ ಅರ್ಥಗಳು ಸ್ಪುರಿಸುವಂತಹ ಸಂದರ್ಭ ಈ ಪುಸ್ತಕದ ಓದಿನಲ್ಲಿ ಎದುರಾದೀತು. 

‘ಪರಿಸರದ ಕತೆ’ಕೃತಿ ಕನ್ನಡದ ಅತ್ತ್ಯುತ್ತಮ ಕೃತಿಗಳಲ್ಲೊಂದು. ಕನ್ನಡ ಸಾಹಿತ್ಯದ ಯಾವುದೇ ಪ್ರಾಕಾರ ಅಥವಾ ವಿಭಜನೆಗಳಿಗಿಂತ ಭಿನ್ನವಾದ ಕೃತಿ. ಕಥೆ, ಪ್ರಬಂಧ ಇತ್ಯಾದಿ ಸ್ಪಷ್ಟ ವಿಭಜನೆಗೆ ಒಳಪಡದ ಕೃತಿ. ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಮತ್ತು ಕೃಷಿ ಆರಂಭಿಸಿದ ದಿನಗಳಲ್ಲೂ, ತಮ್ಮ ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ಅನುಭವಗಳನ್ನು ಪುಸ್ತಕದ ಹದಿನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ಮಾರ, ಪ್ಯಾರ, ಕಿವಿ ಎಂಬ ಸಾಕು ನಾಯಿ, ಎಂಗ್ಟ, ಮಾಸ್ತಿ, ಬೈರ, ಸುಸ್ಮಿತ, ಗಾಡ್ಲಿ, ಸೀನಪ್ಪ, ಮುಂತಾದ ಪಾತ್ರಗಳು ನಮಗೂ ಆಪ್ತವಾಗುವಂತೆ ತೇಜಸ್ವಿಯವರು ವಿಶಿಷ್ಟ ಶೈಲಿಯಿಂದ ನಿರೂಪಿಸಿದ್ದಾರೆ. ‘ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂಬ ತೇಜಸ್ವಿಯವರ ಮಾತಿಗೆ ‘ಪರಿಸರದ ಕತೆ’ ಉತ್ತಮ ಉದಾಹರಣೆ.

ನಮ್ಮ ಸುತ್ತಲಿನ ಪರಿಸರದ ವ್ಯಾಪಾರಗಳಲ್ಲಿ ಇಂದಿಗೂ ಅದೆಷ್ಟೋ ವಿವರಗಳನ್ನು ನಾವಿನ್ನೂ ಪೂರ್ತಿಯಾಗಿ ಅರಿತಿಲ್ಲ. "ಪರಿಸರದ ಕತೆಯಲ್ಲಿ ಇರುವ ಒಂದು ಬರಹ "ಮೂಲಿಕೆ ಬಳ್ಳಿಯ ಸುತ್ತದಲ್ಲಿ ಲೇಖಕರು ಅಚ್ಚರಿಯಿಂದ ದಾಖಲಿಸುವ ವಿವರಗಳುಆ ಬಳ್ಳಿಯ ರಹಸ್ಯಮಯ ಅಸ್ತಿತ್ವವನ್ನು ಮತ್ತು ಹಳ್ಳಿಯವರು ಆ ಬಳ್ಳಿಯ ಸುತ್ತಲೂ ಹಬ್ಬಿಸಿರುವ ಉಹಾಪೋಹಗಳ ಕೋಟೆಯನ್ನೇ ಬಿಚ್ಚಿಡುತ್ತದೆವೈದ್ಯರು ವಾಸಿಮಾಡಲಾಗದ ರೋಗಗಳನ್ನು ಮೂಲಿಕೆ ಬಳ್ಳಿ ವಾಸಿ ಮಾಡುತ್ತದೆಂಬ ಹಳ್ಳಿ ಜನರ ಮೂಢ ನಂಬಿಕೆಯೋನಂಬಿಕೆಯೋ ಒಂದೆಡೆಯಾದರೆಮೂಲಿಕೆ ಬಳ್ಳಿಯಿಂದ ಹಲವು ರೋಗಗಳು ನಿಜಕ್ಕೂ ವಾಸಿಯಾಗುವ ವಾಸ್ತವಗಳು ಇನ್ನೊಂದೆಡೆಅದರ ಗಡ್ಡೆಯ ಚೂರನ್ನು ಕುತೂಹಲಕ್ಕೆಂದು ಲೇಖಕರು ತಿಂದರಂತೆಅದರಿಂದ ಆದ ಪರಿಣಾಮ ಅವರಿಗೇ ಅಚ್ಚರಿ ತಂದಿತು - " ನನಗೆ ಬಲಗಾಲು ಹಿಮ್ಮಡಿ ಅನೇಕ ದಿನಗಳಿಂದ ನೋಯುತ್ತಿತ್ತುಹೆಚ್ಚಿಗೆ ದೂರ ನಡೆದರೆ ಸಾಕುಕುಂಟಿಕೊಂಡೇ ನಡೆಯಬೇಕಿತ್ತುಇದರೊಡನೆಈಚೆಗೆ ಹಿಮ್ಮಡಿ ಎಲುಬಿನ ಪಕ್ಕ ಒಂದು ದಪ್ಪ ಗಡ್ಡೆ ಎದ್ದಿತ್ತುಡಾಕ್ಟರು ಅದನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕೆಂದು ಹೇಳಿದ್ದರು. . . . . . ಆ ಗಡ್ಡೆ ಚೂರು ತಗೊಂಡುತಿಂದ ಮೇಲೆ ಎರಡು ದಿನಕ್ಕೆ ನೋಡುತ್ತೇನೆಆ ಗಡ್ಡೆ ಎಲ್ಲಿತ್ತೆಂದು ಪತ್ತೆ ಮಾಡಲಾಗದಂತೆ ಮಂಗ ಮಾಯವಾಗಿತ್ತುಇದು ಮೂಲಿಕೆಬಳ್ಳಿಯ ಪ್ರಭಾವ ಎಂದು ಹೇಗೆ ಖಚಿತವಾಗಿ ಹೇಳಲಿಕೇವಲ ಆಕಸ್ಮಿಕ ಇದ್ದರೂ ಇರಬಹುದುಅಥವಾ ಮೂಲಿಕೆ ಬೀಳಿನದೇ ಪ್ರಭಾವ ಎಂದಾದರೂದೇಹದಲ್ಲಿ ಉಂಟಾಗುವ ಗಡ್ಡೆಗಳಲ್ಲಿ ಅನೇಕ ತರದವು ಇವೆಇವುಗಳಲ್ಲಿ ಕೆಲವು ಗಡ್ಡೆಗಳ ಮೇಲೆ ಮಾತ್ರ ಮೂಲಿಕೆ ಬಳ್ಳಿ ಪ್ರಭಾವ ಬೀರಬಹುದುಇವುಗಳನ್ನೆಲ್ಲಾ ಯಾರು ಸಂಶೋಧಿಸುವರು?"  ಈ ರೀತಿಯ ಜಿಜ್ಞಾಸೆಯನ್ನು ಓದುಗರಲ್ಲೂ ಹುಟ್ಟುಹಾಕುವ ಈ ಪುಸ್ತಕದ ಬರಹಗಳುಕನ್ನಡ ಸಾಹಿತ್ಯದಲ್ಲೇ ಅನನ್ಯ.

  

ಕೃಪೆ - ವಿಕಿಪೀಡಿಯ, ಸಂಪದ

 

 ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.

Customer Reviews

Based on 8 reviews
88%
(7)
0%
(0)
13%
(1)
0%
(0)
0%
(0)
A
Arun

H

S
Sumanth Prasad
ಸರಳ ಸುಂದರವಾಗಿದೆ

ರವಿ ಅವರ ನರೇಷನ್ ಸರಳವಾಗಿ, ಯಾವುದೇ ತರಹ ಅಧಿಕ ಪ್ರಸಂಗ ಇಲ್ಲದೆ ಚೆನ್ನಾಗಿದೆ.

P
Puneeth s
ಸಾಧಾರಣ

ಶ್ರೀಪಾದ್ ಭಟ್ ಅವರ ಮೂಲಕವೇ ತೇಜಸ್ವಿ ಅವರ ಕಥೆಗಳನ್ನು ಹೇಳಿಸಿ ಅವರನ್ನು ಹೊರತುಪಡಿಸಿ ಉಳಿದವರು ಹೇಳಿದ ಕಥೆಗಳು ಅಷ್ಟು intresting ಅನಿಸುವುದಿಲ್ಲ

N
Narayana Murthy
ಪಕ್ಷಿ ನೋಟ

ಇದು ಕೇವಲ ಕಥೆಯಲ್ಲದಿದ್ದರೂ ಇದರಲ್ಲಿ ಬರುವ ಪ್ರಾಣಿ ಪಕ್ಷಿಗಳ ಹಾವಭಾವಗಳನ್ನ ಅರ್ಥೈಸುತ್ತದೆ. ಅಘಾದ ವಿಷಯಗಳನ್ನು ತಿಳಿಸಿಕೊಟ್ಟ ಪೂರ್ಣಚಂದ್ರ ತೇಜಸ್ವಿಅವರಿಗೆ ವಂದನೆಗಳು.

ಗಂಗರಾಜು ಬಿ ಎಸ್
ಪ್ರಯತ್ನ ಮಂಕಾಗಿದೆ

ಧ್ವನಿ ನಿರೂಪಕರು ತಮ್ಮ ಸದ್ದಿಗೆ ಇನ್ನೂ ಹೆಚ್ಚು ಭಾವನೆಗಳನ್ನು ಲೇಪಿಸಿ, ಧ್ವನಿ ಹೊತ್ತಿಗೆಯ ಮೆರಗನ್ನು ಇನ್ನೂ ಹೆಚ್ಚಿಸಬಹುದಿತ್ತು.