
ಪ್ರಸ್ತುತ ಕಥಾಸಂಕಲನವು ಜಯಂತ ಕಾಯ್ಕಿಣಿಯವರ ಕೆಳಕಂಡ ಒಟ್ಟು ೧೬-ಕಥೆಗಳನ್ನು ಒಳಗೊಂಡಿದೆ –
೧) ಕನ್ನಡಿ ಇಲ್ಲದ ಊರಲ್ಲಿ , ೨) ಮಧ್ಯಂತರ, ೩) ಅಮೃತ ಬಳ್ಳಿ ಕಷಾಯ, ೪) ಒಪೆರಾ ಹೌಸ್, ೫) ಬಣ್ಣದ ಕಾಲು, ೬) ಅಂತಃಪುರದೊಳಗೆ, ೭) ದಗಡೂ ಪರಬನ ಅಶ್ವಮೇಧ, ೮) ಗೇಟ್ ವೇ, ೯) ಚೌತಿ ಚಂದ್ರ, ೧೦) ತೂಫಾನ್ ಮೇಲ್, ೧೧) ನೀರು, ೧೨) ಪಾರ್ಟನರ್, ೧೩) ಮೋಗ್ರಿಯ ಸತ್ಸಂಗ, ೧೪) ಸೇವಂತಿ ಹೂವಿನ ಟ್ರಕ್ಕು, ೧೫) ಟಿಕ್ ಟಿಕ್ ಗೆಳೆಯ ಮತ್ತು ೧೬) ನೋ ಪ್ರಸೆಂಟ್ಸ್ ಪ್ಲೀಸ್.
"ಬದುಕಿನ ಕುರಿತ ನಮ್ಮ ದೃಷ್ಟಿಕೋನವನ್ನೂ, ಸಾಹಿತ್ಯದ ಕುರಿತ ನಮ್ಮ ತಿಳುವಳಿಕೆ ಯನ್ನೂ ಹಿಗ್ಗಿಸಿದ ಈ ಪುಸ್ತಕಕ್ಕೆ ನಾವು ಋಣಿಯಾಗಿದ್ದೇವೆ. ಕೃತಿಕಾರನ ಘನವಾದ ಪ್ರಶಾಂತ ಧ್ವನಿ ನಮ್ಮನ್ನು ಆಕರ್ಷಿಸಿದೆ. ಮುಂಬಯಿಯನ್ನು ರೂಪಿಸುತ್ತಲೇ ತಾವೂ ರೂಪುಗೊಳ್ಳುತ್ತಿರುವ ಜನಸಾಮಾನ್ಯರ ಕಥೆಗಳಿವು. ವಸ್ತುನಿಷ್ಠತೆಯೊಂದಿಗೇ ಹೊಚ್ಚ ಹೊಸ ಒಳನೋಟಗಳನ್ನು ಸ್ಫುರಿಸುವ, ಆಪ್ತವೂ ದೀಪ್ತವೂ ಆದ ಈ ಕೃತಿಯ `ಸ್ವಂತಿಕೆ'ಗೆ ಬೆರಗಾಗಿದ್ದೇವೆ".-ನಿರ್ಣಾಯಕ ಮಂಡಳಿ (ಡಿ.ಎಸ್.ಸಿ. ಪುರಸ್ಕಾರ). ಕಾಯ್ಕಿಣಿಯವರ ಮುಂಬೈ ಕೇಂದ್ರಿತ ವಿಶಿಷ್ಟ ಕತೆಗಳ ಸಂಕಲನವಿದು.
ಪುಟಗಳು: 240
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !