
ಕನ್ನಡದ ಪ್ರಸಿದ್ಧ ಕವಿ, ವಿಶಿಷ್ಟ ಕಥೆಗಾರ, ನಾಟಕಕಾರ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಮೂರು ನಾಟಕಗಳ ಸಂಪುಟವಿದು. "ಸೇವಂತಿ ಪ್ರಸಂಗ" ಜಾರ್ಜ್ ಬರ್ನಾಡ್ ಷಾ ಅವರ ನಾಟಕ "ಪಿಗ್ಮೇಲಿಯನ್" ಹಾಗೂ ಲರ್ನರ್ ಅವರ "ಮೈ ಫೇರ್ ಲೇಡಿ" ಸಿನಿಮಾವನ್ನು ಆಧರಿಸಿ ಬರೆದ ನಾಟಕ. "ಜೊತೆಗಿರುವನ ಚಂದಿರ" ಶೋಲೋಮ್ ಅಲೈಖೆಮ್ನ ರಷ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ "ಫಿಡ್ಲರ್ ಆನ್ ದಿ ರೂಫ್" ಎಂಬ ಸಂಗೀತ ನಾಟಕವನ್ನು ಆಧರಿಸಿ ಬರೆದ ನಾಟಕ. "ಇತಿ ನಿನ್ನ ಅಮೃತಾ" ಜಾವೆದ್ ಸಿದ್ಧಿಕಿಯವರ ಹಿಂದಿ ನಾಟಕದ ರೂಪಾಂತರ.
ಪುಟಗಳು: 248
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !