
"ಈ ಪುಸ್ತಕ ಒಂದು ರೀತಿಯಲ್ಲಿ ಕನ್ನಡದ ಹೊಸ ಪ್ರಭೇದದ ಸೃಷ್ಟಿಗೆ ದಾರಿಯನ್ನು ಮಾಡಿಕೊಟ್ಟಿದೆ. ಅಂದ್ರೆ ಸಾಂಪ್ರದಾಯಿಕವಾಗಿ ಆತ್ಮಕಥನ ಅನ್ನಬಹುದಾದ ಅಥವಾ ಬಹಳ ಸುಲಭವಾದ ರೀತಿಯೊಳಗಡೆ ಡಿಟೆಕ್ಟಿವ್ ಅನ್ನಬಹುದಾದ ಅಥವಾ ಭೂಗತ ಜಗತ್ತಿನ ವಿದ್ಯಮಾನಗಳ ಕ್ರಮ ಅನ್ನುವಂತಹ ಸುಲಭವಾದಂತ ಪ್ರಭೇದಕ್ಕೆ ಸಿಲುಕದೆ ಒಂದು ವಿಶಿಷ್ಟವಾದಂತಹ ಹೊಸ ಪ್ರಭೇದವನ್ನು ನಿರ್ಮಾಣ ಮಾಡುವುದಕ್ಕೆ ಈ ಕೃತಿ ಹವಣಿಸಿದೆ."-ಪ್ರೊ. ಕಿ.ರಂ. ನಾಗರಾಜ್ ದಾದಾಗಿರಿಯ ದಿನಗಳು ಭಾಗ-3ರಲ್ಲಿ ಅಗ್ನಿಶ್ರೀಧರ್ ರವರ 1991 ರಿಂದ 2000ದ ವರೆಗಿನ ಭೂಗತ ಲೋಕದ ಅನುಭವಗಳ ಕಥನ ಹಾಗೂ ಆ ಕ್ರೂರ ಜಗತ್ತಿನಿಂದ ಹೊರಬಂದ ಪ್ರಕ್ರಿಯೆಯ ಬೇರೆ ಬೇರೆ ಸಾಧ್ಯತೆಗಳನ್ನು ನಿರ್ಲಿಪ್ತ ಧಾಟಿಯಲ್ಲಿ ಅವರಿಲ್ಲಿ ಕಟ್ಟಿಕೊಡುತ್ತಾರೆ.
ಪುಟಗಳು: 304
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !