ಲೇಖಕರು:
ಡಾ.ಯಂಡಮೂರಿ ವೀರೇಂದ್ರನಾಥ್
ಅನುವಾದಕರು: ಯತಿರಾಜ್ ವೀರಾಂಬುಧಿ
ಪ್ರಕಾಶಕರು: ಸಾವಣ್ಣ
Publisher: Sawanna
ಯಂಡಮೂರಿ ಮ್ಯಾಜಿಕ್!
ಹೌದು, ಇದು ಡಾ.ಯಂಡಮೂರಿ ವೀರೇಂದ್ರನಾಥ್ ಅವರ ಬರವಣಿಗೆಯ ಯಕ್ಷಿಣಿ.
ಏನೇ ಬರೆದರೂ ಬಿಡದೇ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿರುತ್ತದೆ ಯಂಡಮೂರಿ ವೀರೇಂದ್ರನಾಥ್ ಬರವಣಿಗೆ.
ಮಾತೃಭಾಷೆ ತೆಲುಗಿನಲ್ಲಿರುವಷ್ಟೇ ಅವರಿಗೆ ಕನ್ನಡ ಓದುಗರೂ ಇದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಹಾಗೆ ನೋಡಿದರೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಅತ್ಯಂತ ಜನಪ್ರಿಯ ಲೇಖಕರು ಯಂಡಮೂರಿ.
ಇವರ ಕಾದಂಬರಿಗಳು ಮತ್ತು ಸಣ್ಣಕಥೆಗಳಷ್ಟೇ ಜನಪ್ರಿಯ ಇವರ ವ್ಯಕ್ತಿತ್ವ ವಿಕಸನದ ಪುಸ್ತಕಗಳು ಕೂಡ. ಪ್ರತಿ ವ್ಯಕ್ತಿತ್ವ ವಿಕಸನದ ಪುಸ್ತಕವೂ ವೈವಿಧ್ಯಮಯ.
ಮುಂದಿನ ಪೀಳಿಗೆ ಚೆನ್ನಾಗಿರಬೇಕೆಂಬ ಆಶಯದೊಂದಿಗೆ ಚಿಕ್ಕಮಕ್ಕಳಿಂದ ಹಿಡಿದು ಕಿಶೋರಾವಸ್ಥೆಯ ಮಕ್ಕಳವರೆಗೂ ವ್ಯಕ್ತಿತ್ವ ವಿಕಸನದ ತರಗತಿಗಳನ್ನು ನಡೆಸುತ್ತಾರೆ ಯಂಡಮೂರಿ.
ಮಕ್ಕಳಿಗೆ ಜ್ಞಾನ ಸಂಪಾದನೆಯೊಂದಿಗೆ ಮನರಂಜನೆ ಮತ್ತು ಜೀವನ ಪಾಠಗಳನ್ನು ಕಲಿಸಲು ಕಾಕಿನಾಡದ ಬಳಿ ಸರಸ್ವತೀ ವಿದ್ಯಾಪೀಠಂ ಶಾಲೆ ನಡೆಸುತ್ತಿದ್ದಾರೆ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಯಶಸ್ವೀಭವ ಪುಸ್ತಕ ವೀರೇಂದ್ರನಾಥ್‌ರವರ ಅನೇಕ ವಸ್ತುವಿಶೇಷಗಳ ಸಾರವನ್ನು ಒಳಗೊಂಡಿದೆ.
ಸುಖ, ಆನಂದ, ಬರವಣಿಗೆ, ಸಕಾರಾತ್ಮಕತೆಗಳ ಬಗ್ಗೆ, ಜೀವನದಲ್ಲಿ ನಾವು ಮುಂದೆ ಬರಲು ತೆಗೆದುಕೊಳ್ಳಬೇಕಾದ ಕೆಲವು ಎಚ್ಚರಿಕೆಗಳ ಬಗ್ಗೆ - ಹೀಗೆ ಅನೇಕ ವಸ್ತುಗಳನ್ನು ಒಳಗೊಂಡ ಒಂದು ಹೊತ್ತಗೆ ಇದು.
-ಯತಿರಾಜ್ ವೀರಾಂಬುಧಿ
ಪುಟಗಳು : 156
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !