ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಲೇಖಕ ಚಿರಂಜೀವಿ ಸಿಂಫ್ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ 2005ರಲ್ಲಿ ನಿವೃತ್ತರಾಗಿದ್ದಾರೆ. 2012ರಿಂದ 2015ರಲ್ಲಿ ಇವರು ಪತ್ರಿಕೆಗೆ ಬರೆದ ಅಂಕಣ ಬರಹಗಳ ಸಂಗ್ರಹವೇ ಈ ಕೃತಿ. ಇದರಲ್ಲಿ ಹಲವು ಲೇಖನಗಳು ಆಯಾ ಸಂದರ್ಭದ ಬೆಳವಣಿಗೆಗೆ ನೀಡಿದ ಪ್ರತಿಕ್ರಿಯೆಗೆ ಸೀಮಿತಗೊಂಡಿವೆ ಎನಿಸಿದರೂ, ಅವುಗಳಲ್ಲಿ ಪ್ರಸ್ತಾಪಿಸಿರುವ ಚಾರಿತ್ರಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳಿಂದಾಗಿ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ಈ ಕೃತಿಯಲ್ಲಿ ಸಿಂಘ್ ಅವರ ಆತ್ಮಚರಿತೆಯ ಝಲಕುಗಳು, ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಇದ್ದ ಅನೇಕರ ಜತೆಗಿನ ಒಡನಾಟ, ಸಂವಾದ, ಸ್ನೇಹಸಂಬಂಧಗಳು ಅನಾವರಣಗೊಂಡಿವೆ. ನಾಡಿನ ಸಾಂಸ್ಕೃತಿಕ ಕಥನಗಳು ಹಾಗೂ ಅಭಿವೃದ್ಧಿಯ ಸಂಕಥನಗಳಿಗೆ ಲೇಖಕರು ಪ್ರತಿಸ್ಪಂದಿಸಿರುವುದನ್ನು ಲೇಖನಗಳು ಸಾದರಪಡಿಸುತ್ತವೆ.
ಪುಟಗಳು: 264
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !