ಮಲೆನಾಡಿನ ಈಗಿನ ಕಾಡು, ಜನ ಜೀವನ ಊಹೆಗೂ ನಿಲುಕದಂತೆ ಬದಲಿಸಿದೆ. ಪ್ರಕೃತಿ ತಿರುಗಿ ಬಿದ್ದು, ಈಗ ಸಂಘರ್ಷದ ಕಾಲ. ಪ್ರತಿಯೊಂದರಲ್ಲೂ ಮಧ್ಯವರ್ತಿಗಳದ್ದೆ ಕಾರುಬಾರು. ಕಾಳಸಂತೆಯ ಹಾದಿಯಲ್ಲಿ ಎಲ್ಲವೂ ವೈಪರಿತ್ಯವೇ. ಹೊಸ ಆಯಾಮದ ಅನಾವರಣದ ಹಾದಿಯಲ್ಲಿರುವ ಮಲೆನಾಡನ ಪ್ರಸ್ತುತ ಬದುಕಿನ ಕೆಲ ಮಜಲುಗಳನ್ನು ನನ್ನ ಗ್ರಹಿಕೆಯಂತೆ ಚಿತ್ರಿಸುವ ಪ್ರಯತ್ನ ಈ ಹೊತ್ತಿಗೆ. ಕಾದಂಬರಿಯ ಬಿತ್ತಿ ನಿಮಿತ್ತವಷ್ಟೆ. ಹಾಗಿದ್ದೂ ಇದು ಪಶ್ಚಿಮ ಘಟ್ಟದ ಸಿತ್ಯಂತರಗಳ ಸಂಘರ್ಷದ ಕಥಾನಕ.