Click here to Download MyLang App

ಅಬ್ಬಲಿಗೆ ದಂಡೆ

ಅಬ್ಬಲಿಗೆ ದಂಡೆ

e-book

ಪಬ್ಲಿಶರ್
ಮೈತ್ರೇಯಿ ಹೆಗಡೆ
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಈ ಕವಿತೆಗಳು ಬರೆಯಬೇಕೆಂದು ಬರೆದದ್ದಲ್ಲ, ಒಂದೇ ಸಮಯದಲ್ಲಿ ಬರೆದಿದ್ದಲ್ಲ. ಯಾವ್ಯಾವುದೋ ಸಂದರ್ಭದಲ್ಲಿ, ತೋಚಿದ್ದನ್ನು ಗೀಚಿದ್ದು. ಇನ್ಯಾವಾಗಲೋ ಓದಿ ಒಂದಿಷ್ಟು ಗೀಟು ಹಾಕಿ, ಮತ್ತೆ ಹೊಸ ಸಾಲುಗಳ ಸೇರಿಸಿದ್ದು. ಸಾಮಾಜಿಕವಾದ, ವೈಯಕ್ತಿಕವಾದ, ಬಂಧವಿಲ್ಲದ, ಆಳವಾಗಿ ಪ್ರಭಾವ ಬೀರಿದ ಹೀಗೆ ಎಲ್ಲ ವಿಚಾರಗಳ ಬಗ್ಗೆಯೂ ಬರೆದ ಕವಿತೆಗಳಿವು. ಪೆನ್ನು ಹಿಡಿದು ಬರೆದ ಮೊದಲ ಕವಿತೆ 'ಆತ್ಮವಿಶ್ವಾಸ'ವೂ ಇದರಲ್ಲಿದೆ. ಈಗ ಓದಿದಾಗ ಬಾಲಿಶವೆನಿಸಿದರೂ, ಬರೆಯಬಹುದೆಂಬ ಧೈರ್ಯ ಬಂದಿದ್ದು ಆ ಕವಿತೆಯಿಂದ. ಆ ಕವಿತೆ ಯಾವತ್ತೂ ಮನಸ್ಸಿಗೆ ಆಪ್ತ. ಹಾಗೆಯೇ ಪ್ರೀತಿ ಬಂದಾಗ, ಭ್ರಮ ನಿರಸನವಾದಾಗ, ಸಿಟ್ಟು ಬಂದಾಗ ಬರೆದ ಕವಿತೆಗಳೂ ಇಲ್ಲಿವೆ. ಅಬ್ಬಲಿಗೆ ಹೂವುಗಳೆಂದರೆ ನನ್ನ ಅಜ್ಜಿಗೆ ಬಹಳ ಇಷ್ಟವಾಗಿದ್ದವಂತೆ, ನನಗೆ ನನ್ನ ಕವಿತೆಗಳ ತರಹ. ಅಬ್ಬಲಿಗೆ ಹೂವುಗಳಿಗೆ ಜನಪ್ರಿಯವಾದ ಪರಿಮಳವಿಲ್ಲ, ದುಬಾರಿಯೂ ಅಲ್ಲ, ನನ್ನ ಕವಿತೆಗಳ ಹಾಗೆ. ಹಾಗೆಂದು ಎಲ್ಲರ ಕೈಗೆಟುಕುವ ಹೂವುಗಳೂ ಇವಲ್ಲ, ಹುಡುಕಿ ಹೋದರೆ, ಕಣ್ಣಿಗೆ ಹಿತ ನೀಡುವ ನಾಜೂಕಾದ ಹೂವುಗಳಿವು. ನನ್ನ ಪದಗಳೂ ಹಾಗೆಯೇ. ದಂಡೆ ಕಟ್ಟಿ ನಿಮ್ಮ ಮುಂದಿಟ್ಟಿದ್ದೇನೆ. ಇಷ್ಟವಾದರೆ ಹೇಳಿ, ಇಷ್ಟವಾಗದಿದ್ದರೂ ಹೇಳಿ. ಪದಗಳು, ಭಾವಗಳು ನನ್ನವಾದರೂ ಓದುವ ಕಂಗಳು, ಅರ್ಥೈಸುವ ಬುದ್ಧಿ ನಿಮ್ಮದಲ್ಲವೇ? ಓದಿ, ಹೇಗನಿಸಿತು ಎಂದು ಹೇಳುವಿರೆಂಬ ನಂಬಿಕೆಯೊಂದಿಗೆ, ಮೈತ್ರೇಯಿ ಹೆಗಡೆ

Customer Reviews

Based on 2 reviews
50%
(1)
0%
(0)
50%
(1)
0%
(0)
0%
(0)
A
Akshat Hegde

ತುಂಬಾ ಚನ್ನಾಗಿದೆ ಭಾವನೆಗಳು ಚನ್ನಾಗಿ ಮೂಡಿ ಬಂದಿದೆ.

ಶ್ರೀನಾಥ್ ಶಿರಗಳಲೆ
"ಸಾಮಾಜಿಕವಾದ, ಹಾಗೂ ವೈಯಕ್ತಿಕವಾದ" ಈ ಕವಿತೆಗಳಲ್ಲಿ ಕಾಣಿಸುವುದು- ಒಂದು ಭಾವನಾತ್ಮಕ ಹಾಗೂ ಸಂವೇದನಾಶೀಲ ಮನಸ್ಸು.

ಲೇಖಕಿಯವರೇ ಹೇಳಿಕೊಂಡಿರುವಂತೆ "ಸಾಮಾಜಿಕವಾದ, ವೈಯಕ್ತಿಕವಾದ, ಬಂಧವಿಲ್ಲದ" "ಪ್ರೀತಿ ಬಂದಾಗ, ಭ್ರಮ ನಿರಸನವಾದಾಗ, ಸಿಟ್ಟು ಬಂದಾಗ ಬರೆದ"

ಈ ಕವಿತೆಗಳಲ್ಲಿ ನನಗೆ ಕಂಡಿದ್ದು-

ಒಂದು ಭಾವನಾತ್ಮಕ ಹಾಗೂ ಸಂವೇದನಾಶೀಲ ಮನಸ್ಸು.

'ಬದುಕನ್ನು ಒಂದು ಚಿತ್ರದಂತೆ, ಸಂಬಂಧವಿಲ್ಲದ ಪ್ರೇಕ್ಷಕನಂತೆ ಮಾಡುವ" ವಾಸ್ತವದ ಝಳದಲ್ಲೂ "ಯಾರೂ ಹೇಳದಿದ್ದರೂ ನನ್ನ ನಡೆ, ನನ್ನ ಕನಸುಗಳೆಡೆಗೆ!" ಎಂದು ಮುಂದುವರಿಯುವ ಒಂದು "ಆತ್ಮವಿಶ್ವಾಸ".

"ಅರ್ಥವಿಲ್ಲದ ಅರ್ಥಶಾಸ್ತ್ರ" ಕವಿತೆಯ
"ಕೆರಳಿಸಿದರೆ ಕೆರಳಿ, ಆಳುವವರ ದಾಳವಾಗಿ,
ನರಳುವವವರಿಗೆ ಕುರುಡಾಗಿ,
ನಂಬುಗೆಯೇ ಶಾಪವಾಗಿರುವ,
ಅರಿಯದೇ ಅಕ್ರಮದ ಬೆನ್ನಿಗೆ ನಿಲ್ಲುವ ಹಿಂಡಿಗೆ"

ಇತ್ಯಾದಿ ಸಾಲುಗಳು ನ್ಯಾಯನಿಷ್ಠತೆ ಮತ್ತು ಸಾಮಾಜಿಕ ಕಾಳಜಿಯ ಒಂದು ತೀಕ್ಷ್ಣಅಭಿವ್ಯಕ್ತಿಯಾಗಿವೆ.

ನನಗನಿಸುವುದು- ಮುಂದಿನ ದಿನಗಳಲ್ಲಿ ಕವಿತೆಗಳ ಕಾವ್ಯಗುಣದತ್ತ ಇನ್ನಷ್ಟು ಒತ್ತು ಕೊಟ್ಟರೆ ಕವನಗಳು ಓದುಗರನ್ನು ಭಾವನಾತ್ಮಕವಾಗಿ ಇನ್ನೂ ಹೆಚ್ಚು ತಲುಪುವಂತಾಗಬಹುದು.