Click here to Download MyLang App

ಅರಳಗೋಡು

ಅರಳಗೋಡು

e-book

ಪಬ್ಲಿಶರ್
ಕೃಷ್ಣ ಭಟ್ ಕಾಶಿ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 155.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

1980ರ ದಶಕದ ಮಲೆನಾಡಿನ ಹಿನ್ನಲೆಯ ರೋಚಕ ಕಾದಂಬರಿ ಇದು. ಕೃಷ್ಣ ಭಟ್ ಕಾಶಿ ಅವರು ಈ ಕಾದಂಬರಿಯನ್ನು ಬರೆದದ್ದು ಕೂಡ ಅದೇ ಕಾಲಘಟ್ಟದಲ್ಲಿ. ತನ್ನ 20ರ ಹರೆಯದಲ್ಲಿ ಬರವಣಿಗೆಯನ್ನು ಆರಂಭಿಸಿದ ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೋಕಿನ ಅರಳಗೋಡು ಊರಿನ ಆಸುಪಾಸಿನಲ್ಲೇ ನೆಲೆಸಿದವರು. ತನ್ನ ನೆಲೆಯೂರಿನ ಪರಿಸರವನ್ನೇ ಕತೆಗೆ ಆಯ್ದುಕೊಂಡು, ಆ ಕಾಲಘಟ್ಟದಲ್ಲಿ ಮಲೆನಾಡನ್ನು ಇನ್ನಿಲ್ಲದಂತೆ ಕಾಡಿದ ಶ್ರೀಗಂಧದ ಕಳ್ಳ ಸಾಗಾಣಿಕೆ ಹಾಗೂ ಒತ್ತುವರಿಯಂತಹ ವಿಷಯಗಳನ್ನು ಬಳಸಿಕೊಂಡು ಮೈನವಿರೇಳಿಸುವಂತಹ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. 1980ರ ಆಸುಪಾಸಿನಲ್ಲಿ ಶರಾವತಿ ಹಿನ್ನೀರಿನ ತಪ್ಪಲ್ಲಿನಲ್ಲಿರುವ ಪುಟ್ಟ ಊರಾದ ‘ಅರಳಗೋಡು’ ಹೇಗಿದ್ದಿರಬಹುದು. ಬೇರೆ ಊರಿನಿಂದ ತನ್ನ ‘ಪತ್ರಮಿತ್ರೆ’ಯನ್ನು ಹುಡುಕಿಕೊಂಡು ಬಂದ 'ಮೂರ್ತಿ' ಅನ್ನುವ ಪಾತ್ರ ಆ ಊರಿನ ಜಾಲವೊಂದರಲ್ಲಿ ಸಿಕ್ಕಿಬೀಳುವುದಾದರೂ ಹೇಗೆ? ಹೀಗೇ ಸಿಕ್ಕಿ ಹಾಕಿಕೊಂಡವನು ಎಲ್ಲವನ್ನೂ ಭೇದಿಸಿ ಹೊರಬಹುತ್ತಾನಾ? ಎಂಬ ರೋಚಕ ಎಳೆಯನ್ನು ಇಟ್ಟುಕೊಂಡು ಹೆಣೆಯಲಾದ ಕತೆಯೇ ‘ಅರಳಗೋಡು’! 80ರ ದಶಕದಲ್ಲಿ, ದೀಪದ ಬೆಳಕಿನಲ್ಲೇ ಈ ಇಡೀ ಕಾದಂಬರಿ ಹಾಳೆಯಲ್ಲಿ ಮೂಡಿಬಂತು ಎನ್ನುವುದೇ ವಿಶೇಷ! ಇಡೀ ಕಾದಂಬರಿಯನ್ನು ನೀವು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುವುದು, ಜೊತೆಗೆ ಮುಂದೇನಾಗಬಹುದು ಎಂಬ ಕುತೂಹಲ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಒಂದು ಪತ್ತೇದಾರಿ ಇಲ್ಲವೇ ರೋಚಕ ಕಾದಂಬರಿಗೆ ಇರಬೇಕಾದ ಎಲ್ಲಾ ಸರಕುಗಳು ನಿಮಗೆ ಕಾದಂಬರಿಯಲ್ಲಿ ಕಂಡುಬರುವುದರಿಂದ ಓದಿನಿಂದ ಸಿಗುವ ಸಂತೃಪ್ತಿಗೆ ಯಾವ ಕಡಿಮೆಯೂ ಆಗದು! ಸುಮಾರು ನಲವತ್ತು ವರ್ಷಗಳ ಬಳಿಕ, ಹಾಳೆಯಲ್ಲಿ ಅರೆ ಮಾಸಿಹೋದ ಅಕ್ಷರಗಳಿಗೆ ಮರುಜೀವ ನೀಡಿ ಪುಸ್ತಕ ರೂಪ ಕೊಡಲಾಗಿದೆ. ಇಷ್ಟು ವರ್ಷಗಳ ಕಾಲ ಹಾಳೆಗಳನ್ನು ಭದ್ರವಾಗಿ ಕಾಪಾಡಿಕೊಂಡು ಬಂದ ಕೈಗಳಿಗೆ ಧನ್ಯವಾದ ಹೇಳಲೇ ಬೇಕು! ಈ ಕಾದಂಬರಿಯನ್ನು ಓದಿ ನೋಡಿ, ನಲವತ್ತು ವರ್ಷಗಳ ಹಿಂದೆ ಸಾಗಿ, ಮಲೆನಾಡಿನ ಒಂದು ರೋಚಕ ಕಥನಕ್ಕೆ ಸಾಕ್ಷಿಯಾಗಿ!

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)