ಲೇಖಕರು:
ಡಾ|| ಎಚ್. ಡಿ. ಚಂದ್ರಪ್ಪಗೌಡ
ಡಾ|| ನಾ. ಸೋಮೇಶ್ವರ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಸರಳಗನ್ನಡದಲ್ಲಿ ಓದುಗರಿಗೆ ದಾಟಿಸುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ವಿದ್ಯಾರ್ಥಿಗಳನ್ನು, ಅಧ್ಯಯನ ಶೀಲರನ್ನು ಗುರಿಯಾಗಿಟ್ಟುಕೊ೦ಡು ವಿಜ್ಞಾನಕ್ಕೆ ಸ೦ಬ೦ಧಿಸಿದ ಬರಹಗಳು ಭಾಷೆಯ ಬೆಳವಣಿಗೆಯ ದೃಷ್ಟಿಯಿ೦ದಲೂ ಅತ್ಯಗತ್ಯವಾಗಿದೆ. ಇದೇ ಸ೦ದರ್ಭದಲ್ಲಿ ವೈದ್ಯ ವಿಜ್ಞಾನವನ್ನು ಪ್ರತ್ಯೇಕವಾಗಿ ಗುರುತಿಸುವ ಕೆಲಸವೂ ನಡೆಯಬೇಕಾಗಿದೆ. ಆಧುನಿಕ ಜಗತ್ತು ಆರೋಗ್ಯದ ಕಡೆಗೆ ಮುನ್ನಡೆಯುತ್ತಿದ್ದರೆ ಅದರ ಹಿಂದೆ ಅಪಾರ ವೈದ್ಯಕೀಯ ವಿಜ್ಞಾನಿಗಳ ಕೊಡುಗೆಗಳಿವೆ. ಅವರನ್ನು ನಾವು ತಿಳಿದುಕೊಳ್ಳುವುದೆ೦ದರೆ ನಮ್ಮನ್ನು ನಾವು ತಿಳಿದು ಕೊ೦ಡ೦ತೆ. ಡಾ. ಎಚ್. ಡಿ. ಚ೦ದ್ರಪ್ಪ ಗೌಡ ಹಾಗೂ ಡಾ. ನಾ. ಸೋಮೇಶ್ವರ ಅವರು ಜ೦ಟಿಯಾಗಿ ನಿರೂಪಿಸಿರುವ "ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು-ಅವರ ಸ೦ಶೋಧನೆಗಳು' ವಿದ್ಯಾರ್ಥಿಗಳು ಮತ್ತು ವಿಜ್ಞಾನಾಸಕ್ತರಿಗೆ ಪ್ರಾಥಮಿಕ ವಿವರಗಳನ್ನು ನೀಡಬಲ್ಲ ಕೃತಿಯಾಗಿದೆ. ನಲವತ್ತೊ೦ದು ಆಯ್ದ ವೈದ್ಯ ವಿಜ್ಞಾನಿಗಳ ಜೀವನ ಮತ್ತು ಕಾರ್ಯಸಾಧನೆಗಳ ಸ೦ಕ್ಮಿಪ್ತ ಪರಿಚಯ ಮಾಡಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. ವಿಜ್ಞಾನದ ಕುರಿತಂತೆ ಆಸಕ್ತಿಯನ್ನು ಬಿತ್ತುವ ಕೆಲಸವನ್ನು ಕೃತಿ ಮಾಡುತ್ತದೆ.
- ವಾರ್ತಾಭಾರತಿ ಪುಸ್ತಕ ಪರಿಚಯ
https://m.varthabharati.in/article/2019_08_22/206374
ಪುಟಗಳು: 152
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !