ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಈ ಪುಸ್ತಕದಲ್ಲಿ ವಿಜ್ಞಾನಿಗಳ ಜೀವನ ಚಿತ್ರಣದೊಡನೆ ಅವರ ವೈಜ್ಞಾನಿಕ ಸಂಶೋಧನೆಯ ವಿವರಗಳನ್ನು ತಕ್ಕಮಟ್ಟಿಗೆ ಸರಳರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಯಾಕೆಂದರೆ ವಿಜ್ಞಾನಿಯೊಬ್ಬ ನಮಗೆ ಮುಖ್ಯವಾಗುವುದು ಆತನು ಮಾಡಿದ ಸಂಶೋಧನೆಯಿಂದ. ವಿಜ್ಞಾನಿಯ ಸಾಧನೆಯನ್ನು ಅರ್ಥಮಾಡಿಕೊಳ್ಳಲು ನೀವು ವಿಜ್ಞಾನದ ವಿದ್ಯಾರ್ಥಿ ಯಾಗಿರಬೇಕಿಲ್ಲ. ಇದಕ್ಕೊಂದು ದೃಷ್ಟಾಂತ ಕೊಡಬಲ್ಲೆ. ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ, ವಿಜ್ಞಾನದ ವಿದ್ಯಾರ್ಥಿ. ಆದರೆ ಕುವೆಂಪು, ಬೇಂದ್ರೆ, ಜಿ. ಎಸ್. ಶಿವರುದ್ರಪ್ಪನವರಂತಹ ಕವಿಗಳ ಕಾವ್ಯವನ್ನೋದಿದಾಗ ನನಗೆ ಸಂತೋಷ ಆಗುತ್ತದೆ. ಹಾಗೆ ಸಂತಸಪಡಲು ಅದೇ ಮಟ್ಟದ ಕಾವ್ಯವನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ನನಗಿರಬೇಕಿಲ್ಲ. ಪಂ. ಭೀಮಸೇನ ಜೋಶಿ, ಪಂ. ಮಲ್ಲಿಕಾರ್ಜುನ ಮನ್ಸೂರರಂತಹ ಸಂಗೀತ ದಿಗ್ಗಜರ ಸಂಗೀತವನ್ನಾಲಿಸಿದಾಗ ನಮಗೆ ರಸಾನುಭೂತಿ ಉಂಟಾಗುತ್ತದೆ. ಹಾಗೆ ರಸಾನುಭೂತಿಯಿಂದ ತಲೆದೂಗಲು ನಾವು ಸ್ವತಃ ಸಂಗೀತಗಾರರಾಗಿರಬೇಕಿಲ್ಲ. ವಿಜ್ಞಾನ ಕ್ಷೇತ್ರದಲ್ಲೂ ಅಷ್ಟೇ. ವೈಜ್ಞಾನಿಕ ಸಾಧನೆಗಳನ್ನು ತಿಳಿಯಲು ನಾವು ಸಂಶೋಧನಾನಿರತ ವಿಜ್ಞಾನಿಗಳಾಗಬೇಕಿಲ್ಲ. ಇಂದು ಜನಸಾಮಾನ್ಯರಲ್ಲಿ ವೈಜ್ಞಾನಿಕ ಸಾಕ್ಷರತೆಯನ್ನು ಹರಡಬೇಕಾದ ಅಗತ್ಯವಿದೆ. ಆ ದಿಸೆಯಲ್ಲಿ ಇದೊಂದು ಸಣ್ಣ ಪ್ರಯತ್ನ.
‘‘ನಿರಾಡಂಬರಕ್ಕಿಂತ ದೊಡ್ಡದಿಲ್ಲ, ದೊಡ್ಡದು ಯಾವಾಗಲೂ ನಿರಾಡಂಬರ ವಾಗಿಯೇ ಇರುತ್ತದೆ’’ ಎಂಬ ಉಕ್ತಿಗೆ ವಿಜ್ಞಾನಿಗಳ ಸರಳ ಜೀವನ ಒಂದು ಉತ್ತಮ ಉದಾಹರಣೆ.
ಈ ಪುಸ್ತಕ ಮಕ್ಕಳಲ್ಲಿ ವಿಜ್ಞಾನ ಕುರಿತಾದ ಆಸಕ್ತಿಯನ್ನು ಕೆರಳಿಸಲು ಮೀಟುಗೋಲಾಗಬೇಕೆಂದು ನನ್ನ ಆಸೆ. ಹಾಗಾದಲ್ಲಿ ನನ್ನ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.
- ಡಿ. ಆರ್. ಬಳೂರಗಿ
ಪುಟಗಳು: 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !