ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ಸಹನ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಆಧುನಿಕ ಯುಗದಲ್ಲಿ ಜಗತ್ತನ್ನು ಮುನ್ನಡೆಸುತ್ತಿರುವ ವಿಜ್ಞಾನ ಬಹುಮುಖ್ಯ ವಿಷಯ. ಬಾಲ್ಯದಿಂದಲೇ ಮಕ್ಕಳಲ್ಲಿ ಹೊರಜಗತ್ತಿನ ಎಲ್ಲ ವಿಷಯಗಳಲ್ಲಿಯೂ ಅದಮ್ಯವಾದ ಕುತೂಹಲ ಇರುತ್ತದೆ. ಅವರ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿ ಅವರಲ್ಲಿ ವಿಜ್ಞಾನದ ಬಗ್ಗೆ ಕೌತುಕ, ಆಸಕ್ತಿ ಮೂಡಿಸುವಲ್ಲಿ ಪೋಷಕರ ಪಾತ್ರ ಹಿರಿದು.
ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು, ಪುಸ್ತಕಗಳಲ್ಲಿ ಪ್ರೀತಿ, ವಿಜ್ಞಾನದ ಬಗೆಗೆ ಆಸಕ್ತಿ ಮೂಡಿಸಿ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟ ವಾಗುತ್ತಿರುವ ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥಾ ಲೇಖಕರಾದ ಎಂ. ಆರ್. ದಾಸೇಗೌಡ, ಎನ್ಕೆ. ಸುಬ್ರಹ್ಮಣ್ಯ, ಮತ್ತೂರು ಸುಬ್ಬಣ್ಣ ಮತ್ತು ರಾಜಶೇಖರ ಭೂಸನೂರಮಠ ಇವರ ವೈಜ್ಞಾನಿಕ ಕಥೆಗಳಿವೆ. ಇವು ವಿಜ್ಞಾನದ ರಮ್ಯಲೋಕವನ್ನು ಪುಟಾಣಿಗಳಿಗೆ ತೆರೆದಿಟ್ಟು ಅವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಗಣಿತ, ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗದೆ ಮಕ್ಕಳಿಗೆ ಹುರಿಗಡಲೆಯಷ್ಟು ಪ್ರಿಯವಾಗುತ್ತವೆ. ಮೋನಪ್ಪ ಅವರ ಚಿತ್ರಗಳು ಕಥೆಗಳ ಮೆರುಗನ್ನು ಹೆಚ್ಚಿಸಿವೆ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !