Click here to Download MyLang App

ವಿಜಯೀಭವ (ಇಬುಕ್)

ವಿಜಯೀಭವ (ಇಬುಕ್)

e-book

ಪಬ್ಲಿಶರ್
ವಿ. ಗೋಪಕುಮಾರ್‌
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಗೋಮಿನಿ ಪ್ರಕಾಶನ

Publisher: Gomini Prakashana

 

“ವಿಜಯೀಭವ – ಗೆಲ್ಲಲು ಸಿದ್ಧರಾಗಿ”

ಪುಸ್ತಕದ ಹೆಸರೇ ತುಂಬಾ ಚೆಂದವಿದೆ. ವಿದ್ಯಾರ್ಥಿಯ ಬದುಕಿನಲ್ಲಿಯೂ ತುಂಬಾ ಚೆಂದಗೆನೆ ಈ ಪದ ಕೇಳುತ್ತದೆ. ಆದರೆ ಯಶಸ್ಸು ಪರಿಶ್ರಮದ ಬಾಬತ್ತನ್ನು ಕೇಳುತ್ತದೆ.

ಸಿದ್ಧತೆಯ ಒಂದೊಂದೆ ಮೆಟ್ಟಿಲನ್ನು ಸಾಗುತ್ತಾ ಹೋದಂತೆ ಕೊನೆಗೆ ಯಶಸ್ಸು ಅಪ್ಪಿಕೊಳ್ಳುತ್ತದೆ. ವಿಜಯ ಒಪ್ಪಿಕೊಳ್ಳುತ್ತದೆ.

ಯಶಸ್ಸನ್ನು ಒಲಿಸಿಕೊಳ್ಳಲು ಬೇಕಾದ ಸೂತ್ರಗಳ ಹಾಗೆ ಶ್ರೀ ಗೋಪಕುಮಾರ್ ಅವರು ಈ ಪುಸ್ತಕವನ್ನು ಹೆಣೆದಿದ್ದಾರೆ. ತುಂಬಾ ಜತನದಿಂದ 17 ಪುಟ್ಟ, ಪುಟ್ಟ ಅಧ್ಯಾಯಗಳನ್ನು ಸೇರಿಸುತ್ತಾ ಹೋಗಿದ್ದಾರೆ.

ಅವರ ಬರವಣಿಗೆಯಲ್ಲಿ ಕುಸುರಿತನ ಅಡಕವಾಗಿದೆ. ಅವರಿಗೆ ಏನು ಹೇಳಬೇಕಿದೆಯೊ ಅದರ ಸ್ಪಷ್ಟ ಚಿತ್ರಣ ಅವರಲ್ಲಿದೆ. ಇಡೀ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಪುಸ್ತಕದ ಹೈಲೈಟ್‍ಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿ ಹೇಳಬಹುದು:

* ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.

* ಟಿಪ್ಪಣಿಗಳ ರೂಪದಲ್ಲಿ ಬರಹ ಇರುವುದರಿಂದ ಮಕ್ಕಳಿಗೆ ಓದಲು ಹೊರೆಯಾಗದು.

* ಪ್ರತಿ ಅಧ್ಯಾಯದ ಕೊನೆಗೆ ಸ್ಪೂರ್ತಿ ನೀಡುವ ಚಿಕ್ಕ ಚಿಕ್ಕ ಘಟನೆಗಳನ್ನು ನೀಡಿದ್ದು ಅವು ಸಾಧನೆಗೆ ಪ್ರೇರಣಾದಾಯಕವಾಗಿವೆ.

* ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.

ಹಾಗೆ ನೋಡಿದರೆ ಈ ಪುಸ್ತಕವು ಮಕ್ಕಳಿಗಾಗಿ ಬರೆದ ಪುಸ್ತಕ ಎನಿಸಿದರೂ ಪಾಲಕರು, ಶಿಕ್ಷಕರು ಅವಶ್ಯವಾಗಿ ಓದಲೇಬೇಕಾದ ಪುಸ್ತಕ. 

ಶ್ರೀ ಗೋಪಕುಮಾರ್ ಅವರು ನ್ಯಾನೋಕಥೆಗಳ ರಚನಾಕಾರರು, ಉತ್ತಮ ಫೋಟೋಗ್ರಫಿ ಕಲೆಯನ್ನು ಒಲಿಸಿಕೊಂಡವರು. ಹೀಗೇನೆ ಅವರ ಸೃಜನಶೀಲತೆ ಅನಾವರಣಗೊಳ್ಳುತ್ತಾ ಇರಲಿ ಎಂದು ಹಾರೈಸುವೆ. ಅವರಿಂದ ಇಂತಹ ಇನ್ನಿಷ್ಟು ಕೃತಿಗಳು ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಗೊಳ್ಳಲಿ.

ಕನ್ನಡನಾಡಿನ ಮಕ್ಕಳ ಕೈಯಲ್ಲಿ ಈ ಪುಸ್ತಕ ರಾರಾಜಿಸಲಿ. ನಮ್ಮ ನಾಡಿನ ಮಕ್ಕಳ ಬದುಕು ವಿಜಯೀಭವವಾಗಲಿ!

 

- ನಾರಾಯಣ ಬಾಬಾನಗರ,

ಶಿಕ್ಷಕರು, ಲೇಖಕರು

 

ಪುಟಗಳು: 74

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !