Click here to Download MyLang App

ವಿಚಾರ ಕ್ರಾಂತಿಗೆ ಆಹ್ವಾನ,  ಕುವೆಂಪು,  Vichara Krantige Aahwana,  kuvempu ,

ವಿಚಾರ ಕ್ರಾಂತಿಗೆ ಆಹ್ವಾನ (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

“ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು.”

“ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು.”

– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ

ವಿಚಾರ ಕ್ರಾಂತಿಗೆ ಆಹ್ವಾನ ಕುವೆಂಪುರವರ ಒಂದು ವೈಚಾರಿಕ ಕೃತಿ.

ಇದರ ಮುಖ್ಯ ಭಾಗ ಕುವೆಂಪು ಮಾಡಿದ ಭಾಷಣಗಳು.
೧) ಡಿಸೆಂಬರ್ ೮ ೧೯೭೪ರಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಂದು ಮಾಡಿದ ಭಾಷಣ.
೨) ಅ ನೇ ಉಪಾಧ್ಯೆಯವರ ಸನ್ಮಾನ ಭಾಷಣ
೩) ೧೯೭೫ರ ಕರ್ನಾಟಕ ವಿಚಾರವಂತ ಲೇಖಕರ ಸಂಘದಲ್ಲಿ ಮಾಡಿದ ಭಾಷಣ.
ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ.

 

ಪುಟಗಳು: 102

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 4 reviews
75%
(3)
0%
(0)
0%
(0)
0%
(0)
25%
(1)
D
Dr VASANTHA KUMAR K R
ಕುವೆಂಪು ಪ್ರೆಷ್ಣಾತೀತರೇನಲ್ಲ / ಸರ್ವಘ್ನರೂ ಅಲ್ಲ

ಕುವೆಂಪು ಇದನ್ನು ಹೇಳಿದ್ದು ನಿಜವೇ ಆಗಿದ್ದಲ್ಲಿ, ಅವರು ಆರ್ಥ ಮಾಡಿಕೊಂಡ ರೀತಿ ಕೆಲವೊಂದು ತಪ್ಪು.
ಅವರು, ಅವರ ಅನಿಸಿಕೆ ಗಳೆಲ್ಲವೂ ಸರಿ ಅಥವ ಸತ್ಯ ವೆನ್ನು ವುದೂ ವೈಚಾರಿಕವಾಗಿ ಸರಿಯಲ್ಲ.
Specific ಆಗಿ ಯಾವುದು ಮೂಢ ನಂಬಿಕೆ ಯಾವುದು ಅಲ್ಲ ಎಂಬುದನ್ನು ಅವರು ಬಿಡಿಸಿ ಹೇಳಿಲ್ಲ.

ನಂಬಿಕೆಗಳ ಹಿಂದಿರುವ ವೈಜ್ಞಾನಿಕತೆ ಅರಿಯದೆ ಮಾತಾನಾಡುವುದೂ ಮೂಡ ನಂಬಿಕೆಯೆ.

P
Phanish Muralidhar
ಒಳ್ಳೆಯ ಪರಿಣಾಮವನ್ನು ಬೀರುವಂತಹ ಪುಸ್ತಕ

ಸಾಮಾನ್ಯವಾಗಿ ಯಾವುದಾದರು ಕಾದಂಬರಿಯನ್ನು ಓದಲು ಬಹಳ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಈ ಪುಸ್ತಕವನ್ನು ಓದಲು ಸುಮಾರು ಸಮಯ ಹಿಡಿಸಿತು.

ಕುವೆಂಪುರವರು ಜಾತಿ ಧರ್ಮವನ್ನು ಮೆಟ್ಟಿ ನಿಂತು ಮೊದಲು ಮಾನವನಾಗು
ಎಂದು ಕರೆ ಕೊಡುತ್ತಾರೆ.

ಅಂದಿನ ದಿನಗಳಲ್ಲಿಯೇ ಕನ್ನಡಿಗರ ಮೇಲೆ ಹೇರಲಾಗುತ್ತಿದ್ದ ಇಂಗ್ಲಿಷ್, ಹಿಂದಿ ಭಾಷೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಅವರು ಪ್ರಸ್ತಾಪಿಸಿರುವ ಎಷ್ಟೊಂದು ವಿಷಯಗಳು ಇಂದಿಗೂ ಹೊಂದುತ್ತದೆ. ನಿಧಾನವಾಗಿ ಕುಳಿತುಕೊಂಡು ಓದಿ ಹಲವಾರು ವಿಷಯಗಳನ್ನು ಅಳವಡಿಸಿಕೊಳ್ಳಬಹುದಾದಂತಹ ಪರಿಣಾಮವನ್ನು ಬೀರುವಂತಹ ಪುಸ್ತಕ.

ನನ್ನ ವಿಡಿಯೋ ರಿವ್ಯೂ https://youtu.be/Zuxw7Efd-N0

A
Ashwath Puttaswamygowda
ವೈಚಾರಿಕತೆಯ ಕೈಪಿಡಿ

ಕನ್ನಡಿಗರೆಲ್ಲರೂ ಓದಲೇ ಬೇಕಾದ ವೈಚಾರಿಕ ಪುಸ್ತಕ "ವಿಚಾರಕ್ರಾಂತಿಗೆ ಆಹ್ವಾನ" ಮತ್ತು "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ". ವೈಯಕ್ತಿಕವಾಗಿ ಒಂದು ಸಾವಿರಕ್ಕೂ ಹೆಚ್ಚು ಪ್ರತಿ ಮುದ್ರಿತ ಪುಸ್ತಕಗಳನ್ನು "ಫಲ, ಪುಸ್ತಕ, ತಾಂಬೂಲ" ಅನ್ನುವ ಹೆಸರಿನಲ್ಲಿ ನಮ್ಮ ಬಂಧುಗಳನೇಕರಿಗೆ ತಲುಪಿಸಿದ್ದೆ. ಈಗ ಮೈಲ್ಯಾಂಗ್‌ ಮೂಲಕ ಪುಸ್ತಕ ಎಲ್ಲ ಕನ್ನಡಿಗರಿಗೆ ಇನ್ನೂ ಹತ್ತಿರವಾಗಿದೆ.

ಸತ್ಯನಾರಾಯಣ ಬಿ.ಆರ್.‌
ನನ್ನ ಫೋನಿಗಿಳಿದ ನನ್ನಿಷ್ಟದ ಪುಸ್ತಕ

ಮಾನ್ಯರೆ, ಈ ಪುಸ್ತಕವನ್ನು ಅದೆಷ್ಟು ಬಾರಿ ಓದಿದ್ದೇನೆಯೋ, ರೆಫರ್‌ ಮಾಡಿದ್ದೇನೆಯೋ ನನಗೇ ಗೊತ್ತಿಲ್ಲ. ಆದರೂ, ಅದನ್ನು ಈ ಪುಸ್ತಕದಲ್ಲಿ ಓದುವಾಗಿನ ಅನುಭವ ಬೇರೆಯದೇ ತೆರನಾಗಿದೆ. ನನಗೆ ಬೇಕೆಂದಾಗಲೆಲ್ಲಾ ಅದನ್ನು ತೆರೆದು ನೋಡುವ ಅನುಕೂಲ ಸಿಕ್ಕಿದೆ.