ಜಗತ್ತಿನಲ್ಲಿ ಈಗ ಒಟ್ಟು 219 ವಿಪಶ್ಯನ ಕೇಂದ್ರಗಳಿವೆ. ಇನ್ನಿತರ ನೂರಾರು ಜಾಗದಲ್ಲಿ ವಿಪಶ್ಯನ ದ್ಯಾನವನ್ನು ಕಲಿಸಲಾಗುತ್ತದೆ.
ಆತ್ಮಸಾಕ್ಶಾತ್ಕಾರದ ಅನುಬವವನ್ನು ಕಂಡುಕೊಳ್ಳುವ ವಿದ್ಯೆಗೆ “ವಿಪಶ್ಯನ ದ್ಯಾನ” ಎಂದು ಹೆಸರು. ‘ಪಶ್ಯನ’ ಎಂದರೆ ತೆರೆದ ಕಣ್ಣುಗಳಿಂದ ನೋಡುವುದು ಎಂದರ್ತ. ಆದರೆ ವಿಪಶ್ಯನ ಎಂದರೆ ವಸ್ತುವು ಹೇಗಿದೆಯೋ ಹಾಗೆಯೇ ಅಂತದ್ರುಶ್ಟಿಯಿಂದ ನೋಡುವುದೇ ಹೊರತು ಅದು ಹೇಗೆ ಕಾಣಿಸುತ್ತದೆಯೋ ಅದರಂತೆ ಅಲ್ಲ.
ವಿಪಶ್ಯನ ದ್ಯಾನ ಕಲಿಯಬೇಕಾದರೆ ಹತ್ತು ದಿನದ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ನಾನು ಇಂತ ಒಂದು ಶಿಬಿರದಲ್ಲಿ ಬಾಗವಹಿಸಿ ನನ್ನ ಅನುಬವಗಳನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ.
ದ್ಯಾನದ ಬಹುಮುಕವಾದ ಎರಡನೆಯ ಬಾಗವು ಸೂಕ್ಶ್ಮ ಸಂವೇದನೆಗಳಿಗೆ ನಾವು ಯಾವ ಪ್ರತಿಕ್ರಿಯೆಯನ್ನು ಮಾಡದೆ ಒಂದು ನಿಮಿಶ ನೋಡಿ ಬಿಟ್ಟು ಬಿಡುವುದಾಗಿದೆ. ಈ ರೀತಿಯಲ್ಲಿ ಸಮತೆಯನ್ನು ಕಾಪಾಡಿಕೊಂಡಿದ್ದರೆ ಮನಸ್ಸನ್ನು ಪರಿಶುದ್ದಗೊಳಿಸುವ ಮಾರ್ಗವು ನಮ್ಮ ವಶವಾಗುತ್ತದೆ. ಮನಸ್ಸು ರಾಗ, ದ್ವೇಶ ಮತ್ತು ಮೋಹಗಳಿಂದ ಮುಕ್ತವಾಗುತ್ತದೆ.
ಕನ್ನಡವನ್ನು ಬರೆಯುವಾಗ ಹೆಚ್ಚಿನ ಕನ್ನಡಿಗರ ಉಚ್ಚಾರಣೆಯಲ್ಲೂ ಇಲ್ಲದಿರುವ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಅಕ್ಶರಗಳನ್ನು ಬಳಸಬೇಕಾಗಿಲ್ಲ ಎಂಬ ನಿಲುವು ನನ್ನದೂ ಆಗಿದ್ದು, ಅದರಂತೆ ಈ ಪುಸ್ತಕದಲ್ಲಿ ಅಂತಹ ಅಕ್ಶರಗಳನ್ನು ಬಳಸಿಲ್ಲ. ಇದರಿಂದಾಗಿ ಇದರ ಓದುಗರಿಗೆ ತೊಂದರೆಯೇನೂ ಆಗಲಾರದೆಂದು ನನ್ನ ನಂಬಿಕೆ.