ಪ್ರಕಾಶಕರು: ಗೋಮಿನಿ ಪ್ರಕಾಶನ
Publisher: Gomini Prakashana
ಈ ಪುಸ್ತಕ 11 ಕಥೆಗಳನ್ನೊಳಗೊಂಡ ಕಥಾ ಸಂಕಲನ . ಇದರಲ್ಲಿ ಬಹು ಮೆಚ್ಚುಗೆ ಗಳಿಸಿದ ‘ಟ್ಯೂಷನ್ ಫೀಸು’ಕತೆ ಇದೆ . ಈ ಕಥೆ ಬಹಳ ಬಹುಮಾನವನ್ನು ಮತ್ತು ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿದೆ.
“ನಿಮ್ಮ ಕಥಾಸಂಕಲನ ಉಘೇ ಉಘೇ ಓದಿದೆ. ಬಹಳಷ್ಟು ಕತೆಗಳು ಸೊಗಸಾಗಿವೆ. ನಿಮ್ಮ ಸರಳವಾದ ಭಾಷೆ, ನಿರರ್ಗಳವಾಗಿ ಕತೆ ಹೇಳುವ ಶೈಲಿ, ಕತೆಯಾಗದಂಥ ಎಷ್ಟೋ ಸಂಗತಿಗಳನ್ನು ಕತೆಯಾಗಿಸುವ ಚಾಕಚಕ್ಯತೆ ಇಷ್ಟವಾಯಿತು. ಟ್ಯೂಷನ್ ಫೀಸು ಕತೆ ಮೃದುಮಧುರ ಭಾವ ಹೊಮ್ಮಿಸಿದರೆ, ಕನ್ನಡಮ್ಮನ ಕತೆಯ ವ್ಯಂಗ್ಯ, ಖಾಲಿದೋಸೆ ಮಸಾಲೆದೋಸೆ ಕತೆಯ ಯಾತನೆಗಳು ತಟ್ಟಿದವು. ಮುಂಗಾರು ಮಳೆ ನೆನಪಿಸಿಕೊಂಡು ಬರೆದ ಕತೆಯೂ ಹೊಸತನದಿಂದ ಕೂಡಿದೆ.”
- ಜೋಗಿ, ಖ್ಯಾತ ಕತೆಗಾರರು
“ನಿಮ್ಮ ‘ಟ್ಯೂಷನ್ ಫೀ’ ಕತೆ ಓದಿದೆ. ಮನುಷ್ಯರಲ್ಲಿರುವ ಮಾನವೀಯ ಗುಣಗಳು ಯಾವತ್ತೂ ನನ್ನನ್ನು ಕಲಕುತ್ತವೆ”
- ವಸುಧೇಂದ್ರ, ಖ್ಯಾತ ಕತೆಗಾರರು.
ಪುಟಗಳು: 70
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !