ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಟಿ. ಎಸ್. ಗೋಪಾಲ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಡಾ|| ಯು. ಆರ್. ಅನಂತಮೂರ್ತಿಯವರು ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ, ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ, ಸಂಸ್ಕೃತಾಭ್ಯಾಸವನ್ನು ಮಾಡುತ್ತಾ ಬೆಳೆದ ಅನಂತಮೂರ್ತಿ ಇಂಗ್ಲಿಷ್ ಪೆÇ್ರಫೆಸರ್ ಆಗಿ ಕೆಲಸ ಮಾಡಿದರೂ ಬರೆದದ್ದೆಲ್ಲ ಕನ್ನಡದಲ್ಲಿ. ಆಧುನಿಕ ಯುವಪೀಳಿಗೆಯ ಒಂದು ಹೊಸ ತಲೆಮಾರನ್ನು ಪ್ರಭಾವಿತಗೊಳಿಸಿದ್ದು ಅವರ ಹೆಗ್ಗಳಿಕೆ. "ಕನ್ನಡಿಗರಿಗೆ ಮೂರು ರೀತಿಯ ಹಸಿವುಗಳಿರಬೇಕು. ಮೊದಲನೆಯದು ಸಮಾನತೆಯ ಹಸಿವು. ಹಿಂದುಳಿದ ವರ್ಗ, ದಲಿತವರ್ಗ ಹಾಗೂ ಸ್ತ್ರೀಯರಿಗೆ ಸಮಾನತೆ ದೊರೆಯಬೇಕು. ಎರಡನೆಯದು ಆಧ್ಯಾತ್ಮಿಕ ಹಸಿವು. ವಚನಕಾರರಿಂದ ಹಿಡಿದು ಬೇಂದ್ರೆ-ಕುವೆಂಪುವರೆಗಿನ ಕವಿಗಳು ಮತೀಯತೆಯನ್ನು ಮೀರಿ ಬೆಳೆದರು ಹಾಗೂ ಬರೆದರು. ಮೂರನೆಯ ಹಸಿವು ಆಧುನಿಕತೆಯ ಹಸಿವು. ಸಾಂಪ್ರದಾಯಿಕ ಮಾರ್ಗದಲ್ಲಿದ್ದ ಕನ್ನಡ ಸಾಹಿತ್ಯಕ್ಕೆ ತಮ್ಮ ಇಂಗ್ಲಿಷ್ ಗೀತೆಗಳ ಮೂಲಕ ಆಧುನಿಕತೆಯ ಸ್ಪರ್ಶವನ್ನು ಬಿ.ಎಂ.ಶ್ರೀಯವರು ನೀಡಿದರು. ಈ ಮೂರು ಹಸಿವುಗಳು ಇಂದು ಕನ್ನಡಿಗರ ಮನಸ್ಸನ್ನು ಅರಳಿಸಬೇಕಿದೆ ಹಾಗೂ ಅವರ ಬಾಳನ್ನು ಬೆಳಗಿಸಬೇಕಿದೆ. ಈ ಕೆಲಸವನ್ನು ಇಂಗ್ಲಿಷಾಗಲಿ, ಹಿಂದಿಯಾಗಲಿ ಹಾಗೂ ಸಂಸ್ಕೃತವಾಗಲಿ ಮಾಡಲಾಗದು" ... ಅನಂತಮೂರ್ತಿಯವರ ವಿಚಾರ ಮನನೀಯ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !