ಪ್ರಕಾಶಕರು: ವಂಶಿ ಪ್ರಕಾಶನ
Publisher: Vamshi Prakashana
ಸನ್ ತ್ಸು ಸುಮಾರು 2500 ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಇವರನ್ನು ಹಲವು ಮಹಾ ರಾಷ್ಟ್ರಗಳು ಯುದ್ಧತಂತ್ರಗಳ ಮಹಾಗುರುವೆಂದು ಪರಿಗಣಿಸಿವೆ. ಹಲವು ದೇಶಗಳ ಸೇನಾ ಶಿಕ್ಷಣದಲ್ಲಿ ಸನ್ ತ್ಸು ಅವರ ಪಠ್ಯವು ಇದ್ದೇ ಇರುತ್ತದೆ.
ಈ ಪುಸ್ತಕದ ಅಂಶಗಳನ್ನು ಯುದ್ಧದಲ್ಲಿ ಮಾತ್ರವಲ್ಲ, ಸಾಮಾನ್ಯ ಜೀವನದಲ್ಲೂ ಅಳವಡಿಸಿಕೊಳ್ಳಬಹುದು.
ಒಂದು ಪ್ರಬಲವಾದ, ಸಾರ್ವಜನಿಕ ಜೀವನಕ್ಕೂ ಅನ್ವಯವಾಗುವ ತತ್ವ ಬೆಳಕಿಗೆ ಬಂದರೆ ಅದು ಅಖಂಡ ಗೆಲುವಿನ ತತ್ವ ಎಂದೆನಿಸಿಕೊಳ್ಳುತ್ತದೆ. ಈ ಪುಸ್ತಕದ ಅಂಶಗಳೂ ಸಹ ಅಂತಹ ತತ್ವಗಳ ಸಾಲಿಗೆ ಸೇರುತ್ತವೆ. ಇದರ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಅನೇಕ ಸಮಸ್ಯೆಗಳ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ನಿಮ್ಮ ಜೀವನವನ್ನು ನಿಮ್ಮ ಸ್ವಂತಿಕೆಗೆ, ಸ್ವಾಭಿಮಾನಕ್ಕೆ ಎಲ್ಲೂ ಹೊಡೆತ ಬೀಳದಂತೆ ಹೇಗೆ ನಡೆಸಿಕೊಂಡು ಹೋಗಬಹುದೆನ್ನುವ ಅಂಶ ಕ್ರಮೇಣ ನಿಮ್ಮಲ್ಲಿ ನಿಮಗೇ ಸ್ಪಷ್ಟವಾಗುತ್ತಾ ಹೋಗುತ್ತದೆ.
2500 ವರ್ಷಗಳಷ್ಟು ಹಳೆಯದಾದ ಸನ್ ತ್ಸು ಅವರ ಯುದ್ಧ ತಂತ್ರಗಳನ್ನು ಚೀನಿಯರು ಇಂದಿಗೂ ತಮ್ಮ ಸೇನೆಯಲ್ಲಿ ಅಳವಡಿಸಿಕೊಂಡಿದ್ದಾರೆ.
ನೆಪೋಲಿಯನ್ ಸಹ ತನ್ನ ಸೈನ್ಯದಲ್ಲಿ, ಯುದ್ಧಗಳಲ್ಲಿ ಸನ್ ತ್ಸು ತತ್ವಗಳನ್ನು ಅಳವಡಿಸಿದ್ದನು ಎಂದು ಮಿಲಿಟರಿ ಇತಿಹಾಸಕಾರರು ಹೇಳುತ್ತಾರೆ.
ಯು.ಎಸ್ ಮರೀನ್ ಕಾರ್ಪ್ಸ್ ಬುಕ್ ಆಫ್ ಸ್ಟ್ರಾಟೆಜಿ, ವಾರ್-ಫೈಟಿಂಗ್ ಮತ್ತು ಸೇನಾಚಾಲನೆಯಲ್ಲಿ ಕುಟಿಲ ತಂತ್ರಗಳನ್ನು ರೂಪಿಸುವುದು ಇವೆಲ್ಲವನ್ನೂ ನೇರವಾಗಿ ಆರ್ಟ್ ಆಫ್ ವಾರ್‌ನಿಂದ ತೆಗೆದುಕೊಳ್ಳಲಾಗಿದೆ.
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !