ಲೇಖಕರು:
ಪ್ರೊ|| ಬಿಪಿನ್ ಚಂದ್ರ, ಪ್ರೊ|| ಮೃದುಲಾ ಮುಖರ್ಜಿ, ಪ್ರೊ|| ಆದಿತ್ಯ ಮುಖರ್ಜಿ ,ಪ್ರೊ|| ಸುಚೇತಾ ಮಹಾಜನ್, ಪ್ರೊ|| ಕೆ. ಎನ್. ಪಣಿಕ್ಕರ್
ಕನ್ನಡಕ್ಕೆ: ಡಾ|| ಸಿ. ಬಿ. ಕಮತಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
'ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ' ಬಿಪಿನ್ ಚಂದ್ರ, ಮೃದುಲಾ ಮುಖರ್ಜಿ, ಆದಿತ್ಯ ಮುಖರ್ಜಿ, ಸುಚೇತಾ ಮಹಾಜನ್ ಮತ್ತು ಕೆ. ಎನ್. ಪಣಿಕ್ಕರ್ ಜತೆಗೂಡಿ ತಮ್ಮ ಅಧ್ಯಾಪನ ಪರಿಣತಿ, ಸಂಶೋಧನಾ ಫಲಶ್ರುತಿ, ವಿದ್ವಾಂಸರೊಂದಿಗಿನ ಪರಸ್ಪರಾನುವರ್ತನೆ ಹಾಗೂ ಭಾರತ ಮತ್ತು ವಿಶ್ವದ ವಿವಿಧ ಅಧ್ಯಯನ ಕೇಂದ್ರಗಳ ಸೌಲಭ್ಯಗಳನ್ನೆಲ್ಲ ಸಂಶ್ಲೇಷಿಸಿ ರಚಿಸಿದ ಇಂಗ್ಲಿಷ್ ಮೂಲ ಆಕರಗ್ರಂಥದ ಕನ್ನಡ ಅನುವಾದ ಕೃತಿಯಾಗಿದೆ.
ಇದು 1857ರಿಂದ 1947ರ ಕಾಲಾವಧಿಯ ಎಲ್ಲ ಐತಿಹಾಸಿಕ ಬೆಳವಣಿಗೆಗಳನ್ನೂ ಇತಿಹಾಸ ರಚನಾ ವಿಜ್ಞಾನ ಮಾನದಂಡಗಳಿಗೆ ಅನುಗುಣವಾಗಿ ವಸ್ತುನಿಷ್ಠ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇದು ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಶಿಫಾರಸಿಗೊಳಪಟ್ಟ ಆಕರ ಗ್ರಂಥ ಮಾತ್ರವಲ್ಲದೇ, ಭಾರತೀಯ ಸ್ವಾತಂತ್ರ್ಯ ಹೋರಾಟ ಕುರಿತು ಅಧ್ಯಯನ ನಡೆಸಬಯಸುವ ಸಂಶೋಧನಾರ್ಥಿಗಳಿಗೂ ಅತ್ಯಂತ ಉಪಯುಕ್ತ ಗ್ರಂಥವಾಗಬಲ್ಲದು.
ಪುಟಗಳು: 125
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !