ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತೀಯವೆನಿಸುವ ರಾಷ್ಟ್ರೀಯ ಅಸ್ಮಿತೆಗೆ ಗಂಗೆ ಒಂದು ಸಂಕೇತ. ಭಾರತದ ಸ್ವಾತಂತ್ರ್ಯ ಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡುನದಿಗಳ ಕೊಡುಗೆ ಇವುಗಳ ಸಮೀಕ್ಷಣೆ ಇವೇ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ ಭಾರತದ ಆರ್ಥಿಕ ಬೆನ್ನೆಲುಬು ಹೇಗೆ ಜರ್ಝರಿತಗೊಂಡಿತೆಂದು ತಿಳಿಯದೆ ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ. ಹುಟ್ಟಿಕೊಂಡ ಚಳುವಳಿಗಳ ವಿಶ್ಲೇಷಣೆಯನ್ನು ಪದರ ಪದರವಾಗಿ ಲೇಖಕರು ಬಿಡಿಸಿದ್ದಾರೆ. ನಮ್ಮ ದೇಶದ ಮಹಾರೋಗವಾದ ಜಾತೀಯತೆ, ಎಂತೆಂತಹ ಸಮಸ್ಯೆಗಲನ್ನು ಹುಟ್ಟಿಹಾಕಿದವು. ಸ್ವಾತಂತ್ರ್ಯ ಪಡೆಯಬೇಕೆಂಬ ಉತ್ಕಟ ಆಸೆ, ಛಲಗಳು ಮಾತ್ರ ಚೂರು ಚೂರು ಭಾರತದಲ್ಲೂ ಪ್ರಜ್ವಲಿಸಿದುವು. ತೊರೆಗಳು ಸೇರಿ ಮಹಾನದಿಯಾಯಿತು. ಈ ತರಹ ವಿಮರ್ಶೆ ಮತ್ತು ವ್ಯಾಖ್ಯಾನಗಳಿಂದ ಈ ಪುಸ್ತಕ ಬರೀ ಚರಿತ್ರೆಯಾಗದೆ, ಅದರ ಹಿಂದಿರುವ ಅಂಶಗಳನ್ನೂ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಎಲ್ಲೂ ಪೂರ್ವಗ್ರಹವಿಲ್ಲ, ಉದ್ವೇಗದ ಸೋಂಕಿಲ್ಲ. ಹಾಗಿದ್ದರೂ ತಣ್ಣಗೆ ತಟಸ್ಥವೆನಿಸದೆ ಬೆಚ್ಚಗೆ ಬಿಂಬಿಸುತ್ತದೆ. ಈ ಪುಸ್ತಕ ಇಂಥ ಬರವಣಿಗೆಗೆ ಒಂದು ಒಳ್ಳೆಯ ಮಾದರಿ. ಓದುತ್ತ ಹೋದಂತೆ ಲೇಖಕರ ಸಮಗ್ರ ಭಾರತೀಯ ದೃಷ್ಟಿ ಮೆಚ್ಚಿಗೆಯಾಗುತ್ತದೆ. ಈ ಕೃತಿ ಕಳೆದ ಐನೂರು ವರ್ಷಗಳ ಭಾರತದ ಇತಿಹಾಸದ ಅಧ್ಯಯನದ ಆಕರ ಗ್ರಂಥವಾಗಿ ಉಳಿಯುತ್ತದೆ.
ಪುಟಗಳು: 492
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !