ಲೇಖಕರು:
ಮೂಲ ಡಾ. ಬಿ. ಎಂ. ಹೆಗ್ಡೆ
ಅನುವಾದ ಡಾ. ಮಹಾಬಲೇಶ್ವರ ರಾವ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಆಧುನಿಕ ವೈದ್ಯಕೀಯ ಕ್ಷೇತ್ರವು ಚೂರುಪಾರುಗಳನ್ನು ಒಟ್ಟುಗೂಡಿಸಿ ತೇಪೆ ಹಾಕುವ ಪ್ರಯತ್ನ ಮಾಡುತ್ತಿದೆ. ಜನಸಮೂಹದ ಆರೋಗ್ಯ ರಕ್ಷಣೆಯಲ್ಲಿ ಈ ಬಗೆಯ ತೇಪೆ ಹಚ್ಚುವ ಕೆಲಸ ಗಮನಾರ್ಹವಾದುದೇನಲ್ಲ. ಇಂದಿನ ವಿಶೇಷೀಕರಣದ ಜಗತ್ತಿನಲ್ಲಿ ರೋಗಿಗಳು ಗೊಂದಲಕ್ಕೆ ಒಳಗಾಗುತ್ತಾರೆ, ಹತಾಶರಾಗುತ್ತಾರೆ. ಕೆಲವು ಸಲವಂತೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಿಶೇಷೀಕರಣದ ಅಮೇರಿಕದ ವೈದ್ಯಕೀಯ ಪ್ರಪಂಚವು ತನ್ನ ಭಾರಕ್ಕೆ ತಾನೇ ಕುಸಿಯುತ್ತಿದೆ. ಮಧ್ಯಮ ವರ್ಗದ ಅಮೇರಿಕನ್ನರಿಗೆ ಸೂಕ್ತ ಆರೋಗ್ಯ ಸೇವಾ ಸೌಲಭ್ಯಗಳು ದಕ್ಕುತ್ತಿಲ್ಲ. ದುರದೃಷ್ಟವಶಾತ್ ನಾವು ಅಮೇರಿಕದ ನಾಜೂಕಿನ ಶುದ್ಧಾಂಗ ರಕ್ಷಣಾತ್ಮಕ ವೈದ್ಯಕೀಯ ನೀತಿಯನ್ನು ಅನುಕರಿಸುತ್ತಿದ್ದೇವೆ. ಇದು ಮನುಕುಲದ ಬವಣೆ ನೀಗಲು ಸಹಕಾರಿಯಲ್ಲ. ಬಹಳಷ್ಟು ರೋಗಗಳನ್ನು ಮನೆಯ ವೈದ್ಯರೇ ಸಹಾನುಭೂತಿ ಹಾಗೂ ಅಲ್ಪ ಸ್ವಲ್ಪ ಶುಶ್ರೂಷೆಯ ಮೂಲಕ ಉಪಶಮನ ಮಾಡಬಹುದು. ಕೆಲವೊಂದು ಮಾರಕ ರೋಗಗಳನ್ನು ತಡೆಗಟ್ಟಬಹುದು ಇಲ್ಲವೆ ಮುಂದೂಡಬಹುದು. ಬಹುಮಂದಿಗೆ ಬಹುಕಾಲ ಬಹಳಷ್ಟು ಸುಖಶಾಂತಿ ನೀಡಬೇಕೆಂದು ಹಂಬಲಿಸುವ ಹೊಸ ಜೀವನದರ್ಶನವನ್ನು ಓದುಗರಿಗೆ ಈ ಗ್ರಂಥ ಪರಿಚಯಿಸುತ್ತಿದೆ.
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !