“ಸ್ರ್ತೀಯಾನ” ಕಾದಂಬರಿ ಒಂದು ಕಾಲಘಟ್ಟದ ಕಲಾತ್ಮಕ ಹಾಗೂ ಸೃಜನಾತ್ಮಕ ದಾಖಲೆ. ಒಂದು ಕಾಲಮಾನದ ಕೌಟಂಬಿಕ ಮತ್ತು ಮಹಿಳಾ ಅಸ್ಮಿತೆಯ ಹೆಗ್ಗುರುತು. ಮೂರು ತಲೆಮಾರುಗಳ ಹಂತ ಹಂತದ ಜೀವನ ಚಿತ್ರಣ. ಸ್ರ್ತೀಯರೇ ಕಾದಂಬರಿಯ ಕೇಂದ್ರ ಬಿಂದು. ಸುಮಾರು ೫೦-೬೦ ವರ್ಷದ ಹಿಂದಿನ ಮೈಸೂರು, ಶ್ರೀರಂಗಪಟ್ಟಣ ಮೊದಲಾದ ಹಳೆಯ ಮೈಸೂರಿನ ಪ್ರಾಂತ್ಯದ ಚಿತ್ರಣ ಅತ್ಯಂತ ವಾಸ್ತವಿಕ. ಸರಿ ತಪ್ಪುಗಳಾಚೆಗಿರುವ ನಿತ್ಯದ ಬದುಕಿನ ಬವಣೆ ಮತ್ತು ಜೀವನಯಾನಗಳೇ ಕಾದಂಬರಿಕಾರರ ಆಸಕ್ತಿ. ಅವುಗಳ ಬಗ್ಗೆ ಯಾವ ತೀರ್ಪೂ ಕೊಡದೆ ಹೆಣ್ಣು ಮಕ್ಕಳ ಕರುಳ ಕೂಗನ್ನೂ, ಅವರ ಅಸಹಾಯಕತೆಯನ್ನೂ ಮನಮುಟ್ಟುವಂತೆ ಚಿತ್ರಿಸಿರುವ ಕಾದಂಬರಿಕಾರರ ಸೈರಣೆ ಮೆಚ್ಚುಚಂತಹದ್ದು.
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ ಎಂದು ಎಲ್ಲರೂ, ಪುರುಷರೂ ಸೇರಿ, ಹೇಳುತ್ತಾ ಬಂದಿದ್ದರೂ ಹೆಚ್ಚು ಶೋಷಿತರಾಗಿರುವುದು ಮಹಿಳೆಯರೇ ಎಂಬುದರಲ್ಲಿ ಎರಡು ಮಾತಿಲ್ಲ. ಕಾಲ ಈಗ ಬದಲಾಗುತ್ತಿದೆ. ಶೋಷಣೆಯ ಪರಿ, ತೀವ್ರತೆಯಲ್ಲಿ ಸುಧಾರಣೆ ಕಾಣಬಹುದು. ಆದರೆ “ಸ್ರ್ತೀಯಾನ” ಕಾದಂಬರಿಯ ಕಾಲಘಟ್ಟದಲ್ಲಿ ಅವರು ಕೇವಲ ಶೋಷಿತರಾಗಿದ್ದುದರ ಚಿತ್ರಣ ಮತ್ತು ಅಂತಹ ಸನ್ನಿವೇಶದಲ್ಲೂ, ಮಹಿಳೆಯರು ತ್ಯಾಗ, ಸೇವಾಮನೋಭಾವ, ನಿಸ್ವಾರ್ಥದಿಂದ ಕುಟುಂಬದ ಜೀವನಾಡಿಯಾಗಿ ಔನತ್ಯ ಮೆರೆದುದರ ದ್ಯೋತಕವಾದ ಸ್ರ್ತೀಯರ ಕಥನ “ಸ್ರ್ತೀಯಾನ” .
ಪುಟಗಳು : 370
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !