ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಸೃಜನಶೀಲತೆ ಎಂಬ ವಿಸ್ಮಯವೊಂದನ್ನು ಹಲವು ಹತ್ತು ದಿಕ್ಕುಗಳಲ್ಲಿ ಹರಿದಾಡಿಸಿ ಅದರ ಎಲ್ಲ ಮಗ್ಗಲುಗಳನ್ನೂ ಬೆನ್ನಟ್ಟಿ ತೆರೆದು ತೋರಿಸಲಾಗಿದೆ. ಸೃಜಿಸುವುದು ಎಂಬ ಅದ್ಬುತ ಪ್ರತಿಭೆ ಎಲ್ಲರಲ್ಲೂ ಸುಪ್ತವಾಗಿದ್ದು ಎಳೆಯ ವಯಸ್ಸಿನಲ್ಲಿ ಅದು ವಿಕಸಿತವಾಗುವ ಸಂದರ್ಭವನ್ನು ದಮನಿಸದೇ ಇದ್ದರೆ ಸಂಪೂರ್ಣವಾಗಿ ಅರಳುವುದು ನಿಶ್ಚಿತವೆಂದು ಲೇಖಕರ ವಾದ. ಅಲ್ಲದೆ ನಮ್ಮ ಸಾಮಾಜಿಕ ಪರಿಸರ, ಶಾಲೆಯ ಉಸಿರು ಕಟ್ಟಿಸುವ ಪಠ್ಯವ್ಯವಸ್ಥೆ, ಜಡ್ಡು ಕಟ್ಟಿದ ನಿರ್ಧಾರಿತ ವಿದ್ಯಾಭ್ಯಾಸದ ಮುಂದುವರಿಕೆ, ಸ್ವಾತಂತ್ರ್ಯವಿಲ್ಲದ ಯುವ ಪ್ರತಿಭೆಗಳು ಮತ್ತು ಈಗಾಗಲೇ ಸ್ಥಾಪಿತ ಮೌಲ್ಯಗಳಿಗೆ ಜೋತು ಬೀಳಬೇಕಾದ ಅನಿವಾರ್ಯತೆ... ಇಂಥ ಹತ್ತು ಹಲವು ವಿಷಯಗಳನ್ನು ವಿಶದವಾಗಿ ತೆರೆದಿಡಲಾಗಿದೆ. ನಮ್ಮಲ್ಲಿ ಶಿಕ್ಷಣವೆಂಬುದು ನೊಗಕ್ಕೆ ಕಟ್ಟಿದ ಜೋಡೆತ್ತುಗಳಂತೆ. ಹೀಗೇ ಸಾಗಬೇಕೆಂಬ ಮತ್ತು ಇಂಥ ಪ್ರಶ್ನೆಗೆ ಇಂಥದೇ ಉತ್ತರವೆಂಬ, ಯೋಚಿಸಿ ಒಂದಕ್ಷರವೂ ಮಾತನಾಡಬಾರದೆಂಬ ಶಿಸ್ತಿಗೆ ಒಳಪಟ್ಟು ಅವನತಿಯತ್ತ ಸಾಗಿರುವುದು ಇಲ್ಲಿನ ಲೇಖನಗಳಿಂದ ,ಮನನವಾಗುತ್ತದೆ.
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !